ಸುದ್ದಿಮೂಲ ವಾರ್ತೆ ಬೆಂಗಳೂರು, ಜ.12:
ದ್ವೇಷಭಾಷಣ ಪ್ರತಿಬಂಧಕ ಮಸೂದೆಗೆ ಸಹಿ ಹಾಕಬಾರದು, ಕೋಗಿಲು ಕ್ರಾಾಸ್ನಲ್ಲಿ ಒತ್ತುವರಿದಾರರಿಗೆ ಹಾಗೂ ಬಾಂಗ್ಲಾಾ ಪ್ರಜೆಗಳಿಗೆ ಮನೆ ನೀಡದಂತೆ ಸರ್ಕಾರಕ್ಕೆೆ ಸೂಚನೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ರಾಜಭವನದಲ್ಲಿ ಸೋಮವಾರ ರಾಜ್ಯಪಾಲ ಥಾವರ್ಚಂದ್ ಗೆಹ್ಲೋೋಟ್ ಅವರನ್ನು ಭೇಟಿ ಮಾಡಿದ ನಿಯೋಗವು ವಿವಿಧ ಬೇಡಿಕೆ ಮುಂದಿಟ್ಟು ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೊಕ, ದ್ವೇಷಭಾಷಣ ಪ್ರತಿಬಂಧಕ ಮಸೂದೆಗೆ ಸಹಿ ಹಾಕಬಾರದು, ಕೋಗಿಲು ಕ್ರಾಾಸ್ನಲ್ಲಿ ಒತ್ತುವರಿದಾರರಿಗೆ ಹಾಗೂ ಬಾಂಗ್ಲಾಾ ಪ್ರಜೆಗಳಿಗೆ ಮನೆ ನೀಡದಂತೆ ಕ್ರಮ ವಹಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆೆ ಇಲ್ಲದೆ ಜಂಗಲ್ ರಾಜ್ ಆಗಿರುವುದರ ಬಗ್ಗೆೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿಿದ್ದೇವೆ. ಹಾಗೆಯೇ ಕರ್ನಾಟಕವನ್ನು ಗೂಂಡಾ ರಾಜ್ಯದಿಂದ ಕಾಪಾಡಿ ಎಂದು ಮನವಿ ಮಾಡಿದ್ದೇವೆ ಎಂದರು.
ಮಸೂದೆ ರಚಿಸಲು ಮಾತ್ರ ಅಧಿವೇಶನ ಕರೆಯಬೇಕಿದೆ. ಆದರೆ ಕಾಂಗ್ರೆೆಸ್ ಸರ್ಕಾರ ದ್ವೇಷಭಾಷಣ ಪ್ರತಿಬಂಧಕ ಮಸೂದೆಯ ಬಗ್ಗೆೆ ಚರ್ಚೆಗೆ ಅವಕಾಶ ನೀಡಿಲ್ಲ. ಕಣ್ಣು ಮಿಟುಕಿಸಿದರೆ, ಕೈ ತೋರಿಸಿದರೆ ಬಂಧನ ಮಾಡುವಂತಹ ಕಾನೂನು ತರಲಾಗಿದೆ. 1975 ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ತಂದ ತುರ್ತು ಪರಿಸ್ಥಿಿತಿಯಂತೆಯೇ, ಸಿಎಂ ಸಿದ್ದರಾಮಯ್ಯ ತುರ್ತು ಪರಿಸ್ಥಿಿತಿ ಹೇರುತ್ತಿಿದ್ದಾರೆ. ಆದ್ದರಿಂದ ಇದಕ್ಕೆೆ ಸಹಿ ಹಾಕಬಾರದು ಎಂದು ಮನವಿ ಮಾಡಲಾಗಿದೆ ಎಂದರು.
ಈ ಕಾನೂನು ಜಾರಿಯಾದರೆ ಪ್ರತಿಪಕ್ಷಗಳ ಶಾಸಕರನ್ನು ಪೊಲೀಸರು ಸುಲಭವಾಗಿ ಬಂಧಿಸುತ್ತಾಾರೆ. ಸರ್ಕಾರದ ಸೂಚನೆ ಮೇರೆಗೆ ಯಾರ ಮೇಲೆ ಬೇಕಾದರೂ ಪೊಲೀಸರು ಪ್ರಕರಣ ದಾಖಲಿಸಬಹುದು. ಇದು ಕಾಂಗ್ರೆೆಸ್ ಕುತಂತ್ರದ ಮಸೂದೆ ಹಾಗೂ ವಾಕ್ ಸ್ವಾಾತಂತ್ರ್ಯ ಕಸಿಯುವ ಮಸೂದೆ ಎಂದು ಮನವರಿಕೆ ಮಾಡಲಾಗಿದೆ. ಬಳ್ಳಾಾರಿಯಲ್ಲಿ ಕಾಂಗ್ರೆೆಸ್ ಪಕ್ಷದವರಿಂದ ಕಾರ್ಯಕರ್ತನ ಕೊಲೆಯಾಗಿದೆ. ಇದರ ಹಿಂದೆ ಇದ್ದವರನ್ನು ಬಂಧಿಸದೆ ಜನಾರ್ದನ ರೆಡ್ಡಿಿಯವರ ಮೇಲೆ ಆರೋಪ ಹೊರಿಸಲಾಗಿದೆ. ಸತ್ಯ ಸಂಗತಿ ಹೊರ ಬರಲು ಈ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಕೋರಲಾಗಿದೆ. ಬಳ್ಳಾಾರಿಯಲ್ಲಿ ಜನವರಿ 17 ರಂದು ಸಮಾವೇಶ ನಡೆಸಿ, ಕಾನೂನು ಸುವ್ಯವಸ್ಥೆೆ ಹದಗೆಟ್ಟಿಿರುವುದನ್ನು ಖಂಡಿಸಲಿದ್ದೇವೆ ಎಂದು ತಿಳಿಸಿದರು.
ಕೇರಳದಲ್ಲಿ ಮಾತೃಭಾಷಾ ನಿಯಮ ಉಲ್ಲಂಘನೆ ಮಾಡಿದ್ದರೂ ಅದನ್ನು ಸಿಎಂ ಪ್ರಶ್ನೆೆ ಮಾಡಿಲ್ಲ. ಕಾಸರಗೋಡಿನ ಕನ್ನಡಿಗರ ಮೇಲೆ ಕೇರಳ ಸರ್ಕಾರ ದೌರ್ಜನ್ಯ ಮಾಡುತ್ತಿಿದ್ದರೂ ಸಿಎಂ ಸಿದ್ದರಾಮಯ್ಯ ಒಂದು ಪತ್ರ ಬರೆದು ಸುಮ್ಮನಾಗಿದ್ದಾರೆ ಎಂದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಾಮಿ ಮಾತನಾಡಿ, ಈ ರಾಜ್ಯ ಸರಕಾರ ತಾರತಮ್ಯ ಮಾಡುತ್ತಿಿದೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆೆ ಹಾಳಾಗಿದೆ. ಕೆಲವರಿಗೆ ಸುಣ್ಣ- ಇನ್ನೂ ಕೆಲವರಿಗೆ ಬೆಣ್ಣೆೆ ಇಡುವ ಕೆಲಸವನ್ನು ಈ ಕಾಂಗ್ರೆೆಸ್ ಸರಕಾರ ಮಾಡುತ್ತಿಿದೆ ಎಂದು ಟೀಕಿಸಿದರು. ಈ ಎಲ್ಲ ವಿಷಯಗಳನ್ನು ರಾಜ್ಯಪಾಲರ ಗಮನಕ್ಕೆೆ ತಂದಿದ್ದೇವೆ ಎಂದರು.
ಕೋಗಿಲು ಅಕ್ರಮ ಗುಡಿಸಲುಗಳನ್ನು ಕೆಡವಿದ ವಿಚಾರದಲ್ಲಿ ಶಾಸಕ ವಿಶ್ವನಾಥ್ ಅವರು ಸತ್ಯಶೋಧನಾ ಸಮಿತಿ ರಚನೆ ಮಾಡಿ ಅವರ ನೇತೃತ್ವದಲ್ಲಿ ಅಲ್ಲಿ ನಡೆದ ಘಟನೆಗಳನ್ನು ಪಟ್ಟಿಿ ಮಾಡಿ ನೀಡಿದ್ದು, ಅದನ್ನು ಗೌರವಾನ್ವಿಿತ ರಾಜ್ಯಪಾಲರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ ಎಂದು ವಿವರಿಸಿದರು. ಸರಕಾರವು ಅಕ್ರಮ ಮನೆಗಳನ್ನು ಕೆಡವಿದೆ. ಸರಿ ಇಲ್ಲ ಎಂಬ ಕಾರಣಕ್ಕೆೆ ತೆರವು ಕಾರ್ಯ ನಡೆಸಿದ್ದಾರೆ. ಅವರು ಅಕ್ರಮವಾಸಿಗಳಾಗಿರುವಾಗ ಇನ್ನೊೊಂದು ಕಡೆ ಮನೆ ಕೊಡುವುದು ತಪ್ಪಲ್ಲವೇ ಎಂದು ಪ್ರಶ್ನಿಿಸಿದರು. ಈ ವಿಷಯದಲ್ಲಿ ಸರಕಾರದ ತಪ್ಪಿಿದೆ ಎಂದು ಪ್ರತಿಪಾದಿಸಿದರು.
ಕಾನೂನು- ಸುವ್ಯವಸ್ಥೆೆ ಸಂಪೂರ್ಣ ಕುಸಿದಿದೆ. ಬಳ್ಳಾಾರಿಯಲ್ಲಿ ಜನಾದರ್ನ ರೆಡ್ಡಿಿಯವರ ವಿರುದ್ಧ ಷಡ್ಯಂತ್ರಗಳು ನಡೆದಿವೆ; ಅಲ್ಲಿ ಕಾಂಗ್ರೆೆಸ್ಸಿಿನ ರಾಜಶೇಖರ್ ಎಂಬ ವ್ಯಕ್ತಿಿಯನ್ನು ಅವರೇ ಕೊಲೆ ಮಾಡಿರುವುದು; ಭರತ್ ರೆಡ್ಡಿಿಯವರ ಗನ್ಮ್ಯಾಾನ್ಗಳು ಇದನ್ನು ಮಾಡಿದ್ದಾರೆ. ಆದರೆ, ಅದು ಕೊಲೆ ಆಗಿದ್ದರೂ ಅವರು ಯಾರನ್ನೂ ಬಂಧಿಸಿಲ್ಲ ಎಂದು ಆಕ್ಷೇಪಿಸಿದರು.
ನಿಯೋಗದಲ್ಲಿ ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಸಂಸದ ಪಿ.ಸಿ. ಮೋಹನ್, ಶಾಸಕ ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು, ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿಿ, ಕೇಶವ ಪ್ರಸಾದ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್, ರಾಜ್ಯ ಕಾರ್ಯದರ್ಶಿ ಎಚ್.ಸಿ. ತಮ್ಮೇಶ್ ಗೌಡ, ರಾಜ್ಯ ಮುಖ್ಯ ವಕ್ತಾಾರ ಅಶ್ವತ್ಥನಾರಾಯಣ್, ರಾಜ್ಯ ವಕ್ತಾಾರ ಪ್ರಕಾಶ್ ಶೇಷರಾಘವಾಚಾರ್, ನಿವೃತ್ತ ಐ.ಪಿ.ಎಸ್. ಅಧಿಕಾರಿ ಭಾಸ್ಕರ್ ರಾವ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.
ಕೋಗಿಲು ಅಕ್ರಮ ವಾಸಿಗಳಿಗೆ ಮನೆ ನೀಡಬಾರದು ಕೋರಿಕೆ: ಬಿಜೆಪಿ ನಿಯೋಗದಿಂದ ಮನವಿ ಬಳಿಕ ಆರ್. ಅಶೋಕ ಹೇಳಿಕೆ ದ್ವೇಷಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಮನವಿ

