ಸುದ್ದಿಮೂಲ ವಾರ್ತೆ ಬೆಂಗಳೂರು, ಜ.12:
ರಾಜ್ಯ ರಸ್ತೆೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಪ್ರಯಾಣಿಕರ ಪ್ರಯಾಣ ಇನ್ನಷ್ಟು ಸುಲಭ ಮತ್ತು ಆರಾಮದಾಯಕವಾಗಿಸಲು ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ನಲ್ಲಿ ಆನ್ಲೈನ್ ಮುಂಗಡ ಟಿಕೆಟ್ ಕಾಯ್ದಿಿರಿಸುವ ವ್ಯವಸ್ಥೆೆಯನ್ನು ಒದಗಿಸುತ್ತಿಿದೆ.
ಕೆಎಸ್ಆರ್ಟಿಸಿ ವೆಬ್ಸೈಟ್, ಮೊಬೈಲ್ ಆಪ್, ಇಲಾಖಾ ಕೌಂಟರ್ಗಳು ಹಾಗೂ ್ರಾಂಚೈಸಿ ಕೌಂಟರ್ಗಳ ಜೊತೆಗೆ, ಪ್ರಯಾಣಿಕರು ಈಗ ತಮ್ಮ ಮನೆಗೆ ಸಮೀಪದಲ್ಲಿರುವ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕವೂ ಮುಂಗಡ ಬಸ್ ಟಿಕೆಟ್ಗಳನ್ನು ಬುಕ್ ಮಾಡಬಹುದು.
ಈ ಸೇವೆ ಬೆಂಗಳೂರು ನಗರದಲ್ಲಿರುವ 161 ಬೆಂಗಳೂರು-ಒನ್ ಕೇಂದ್ರಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ 1021 ಕರ್ನಾಟಕ ಒನ್ ಕೇಂದ್ರಗಳಲ್ಲಿ ಲಭ್ಯವಿದೆ. ಪ್ರಯಾಣಿಕರು ಈ ಸುಲಭ ಮತ್ತು ಹತ್ತಿಿರದ ಟಿಕೆಟ್ ಬುಕ್ಕಿಿಂಗ್ ಸೇವೆ ಬಳಸಿಕೊಳ್ಳುವಂತೆ ಕೋರಲಾಗಿದೆ.
ಟಿಕೆಟ್ ಕಾಯ್ದಿಿರಿಸುವಿಕೆ ಅಥವಾ ಯಾವುದೇ ಸಹಾಯಕ್ಕಾಾಗಿ, ಪ್ರಯಾಣಿಕರು ಕೆಎಸ್ಆರ್ಟಿಸಿ ಕರೆ ಕೇಂದ್ರವನ್ನು 080-26252625 (24್ಡ7) ಅಥವಾ ಮೊಬೈಲ್ ಸಂಖ್ಯೆೆ 7760990034 / 7760990035 (ಬೆಳಿಗ್ಗೆೆ 7.00 ರಿಂದ ರಾತ್ರಿಿ 10.00 ಗಂಟೆವರೆಗೆ) ಅಥವಾ ಬೆಂಗಳೂರು-ಒನ್ ಕರೆ ಕೇಂದ್ರವನ್ನು 080-49203888 ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

