ಸುದ್ದಿಮೂಲ ವಾರ್ತೆ ಬೆಂಗಳೂರು, ಜ.12:
ಬಳ್ಳಾಾರಿಯಲ್ಲಿ ಕಾಂಗ್ರೆೆಸ್ ಶಾಸಕರಿಂದ ನಡೆದ ಗಲಭೆಯನ್ನು ಖಂಡಿಸಿ ಜ.17ರಂದು ಬಳ್ಳಾಾರಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ರಾಜ್ಯ ನಾಯಕರೆಲ್ಲರೂ ಪಾಲ್ಗೊೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾಾರಿ ಸಮಾವೇಶದ ಬಗ್ಗೆೆ ಮಾಜಿ ಮುಖ್ಯಮಂತ್ರಿಿಗಳಾದ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ, ಸಂಸದ ಗೋವಿಂದ ಕಾರಜೋಳ ಸೇರಿ ಹಲವು ನಾಯಕರ ಜೊತೆ ಚರ್ಚೆ ಮಾಡಿದ್ದೇನೆ. ಎಲ್ಲರೂ ಸಮಾವೇಶಕ್ಕೆೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.
ಬಳ್ಳಾಾರಿಯಿಂದ ಬೆಂಗಳೂರುವರೆಗೆ ಪಾದಯಾತ್ರೆೆ ನಡೆಸುವ ಸಂಬಂಧ ಅನುಮತಿ ಕೇಳಿದ್ದೇನೆ. ಈ ಸಂಬಂಧ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಪಕ್ಷದ ರಾಜ್ಯಾಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.
ಜನವರಿ 1ರಂದು ಬಳ್ಳಾಾರಿಯಲ್ಲಿ ನಡೆದ ದುರ್ಘಟನೆ ಕಾಂಗ್ರೆೆಸ್ ನಾಯಕರ ಕುತಂತ್ರದಿಂದ ನಡೆದಿದೆ. ಘಟನೆಯಲ್ಲಿ ಒಬ್ಬ ಅಮಾಯಕನ ಸಾವು ಸಂಭವಿಸಿತು. ವಿಜಯೇಂದ್ರ ಅವರು ಕೂಡಲೇ ಬಳ್ಳಾಾರಿಗೆ ಬಂದು ನಮಗೆಲ್ಲಾ ಶಕ್ತಿಿ ತುಂಬಿದರು. ಕೇಂದ್ರ ಸಚಿವ ವಿ. ಸೋಮಣ್ಣ, ಪ್ರತಿಪಕ್ಷ ನಾಯಕರುಗಳಾದ ರ್ಆ. ಅಶೋಕ್, ಛಲವಾದಿ ನಾರಾಯಣಸ್ವಾಾಮಿ ಅನೇಕರು ಬಂದು ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.
ಇತಿಹಾಸ ಮರುಕಳಿಸುತ್ತದೆ ಎಂಬ ಮಾತು ಸತ್ಯ. ಆಗ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿದ್ದಾಗ ರೆಡ್ಡಿಿ ಕುಟುಂಬದ ವಿರುದ್ಧ ಸದನದಲ್ಲಿ ತೊಡೆ ತಟ್ಟಿಿ ಬಳ್ಳಾಾರಿವರೆಗೂ ಪಾದಯಾತ್ರೆೆ ನಡೆಸಿದರು. ಆದರೆ, ಇಂದು ಅವರ ಪಕ್ಷದ ಶಾಸಕ ಮತ್ತು ಅವರ ಅಂಗರಕ್ಷಕರು ಸಾಮಾನ್ಯ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಶ್ರೀರಾಮುಲು ಟೀಕಿಸಿದರು.
ಶಾಸಕ ನಾರಾ ಭರತ್ ರೆಡ್ಡಿಿ ದುರ್ವರ್ತನೆಗೆ ಸಿದ್ದರಾಮಯ್ಯ ಸಹಕಾರ ಕೊಡುತ್ತಿಿದ್ದಾರೆ. ಭರತ್ ರೆಡ್ಡಿಿ ಮೇಲೆ ಸೆಕ್ಷನ್ 302 ಕೇಸ್ ಹಾಕಬೇಕಿತ್ತು. ಅದರ ಬದಲಿಗೆ ಸೆಕ್ಷನ್ 307 ಕೇಸ್ ಹಾಕಿ ರಕ್ಷಣೆ ಮಾಡುತ್ತಿಿದ್ದಾರೆ. ಘಟನೆ ನಡೆದು 12 ದಿನ ಆದರೂ ನಾರಾ ಭರತ್ ರೆಡ್ಡಿಿ ಬಂಧನ ಆಗಿಲ್ಲ. ಒಬ್ಬ ಅಜ್ಞಾನಿ ಶಾಸಕನ ಪರ ಸರ್ಕಾರ ನಿಂತಿದೆ ಎಂದು ಕಿಡಿಕಾರಿದರು.
ಕಾಂಗ್ರೆೆಸ್ ಸರ್ಕಾರದ ನಡೆ ಮತ್ತು ಸ್ಥಳೀಯ ಶಾಸಕನ ದುರ್ವರ್ತನೆ ಖಂಡಿಸಿ ಪಾದಯಾತ್ರೆೆ ನಡೆಸಲು ಮುಂದಾಗಿದ್ದೆವು. ಈ ಬಗ್ಗೆೆ ಜನಾರ್ದನ ರೆಡ್ಡಿಿ ಅವರೂ ಪಕ್ಷದ ಮುಖಂಡರೊಂದಿಗೆ ಮಾತನಾಡಲು ಉದ್ದೇಶಿಸಿದ್ದಾರೆ. ಈ ಮಧ್ಯೆೆ ಜ.17 ರಂದು ಬಳ್ಳಾಾರಿಯಲ್ಲಿ ಸಮಾವೇಶ ಮಾಡುತ್ತೇವೆ ಎಂದು ಶ್ರೀರಾಮುಲು ಹೇಳಿದರು.

