ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.12:
ದೇಶದಲ್ಲಿ ಪ್ರಸ್ತುತ ಬಹು ಸಂಸ್ಕೃತಿ ಅಪಾಯದಲ್ಲಿದೆ ಎಂದು ಸಾಹಿತಿ ಹಾಗೂ ವೈಚಾರಿಕ ಚಿಂತಕ ಎಸ್.ಜಿ. ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.
ಅವರು ಸೋಮವಾರ ತಿಂಥಿಣಿ ಬ್ರಿಿಜ್ ಕಾಗಿನೆಲೆ ಮಹಾಸಂಸ್ಥಾಾನ ಕನಕ ಗುರು ಪೀಠದಲ್ಲಿ ಹಾಲುಮತ ಸಾಹಿತ್ಯ ಸಮ್ಮೇಳನ ಉದ್ಘಾಾಟನೆ ಮಾಡಿ ಮಾತನಾಡಿದರು.
ದೇಶದಲ್ಲಿ ಬಹು ಸಂಸ್ಕೃತಿ ಅಪಾಯದಲ್ಲಿ ಇದೆ ನಾವು ನಿಜವಾದ ಬಸವಣ್ಣನವರ ಶ್ರಮ ಸಂಸ್ಕೃತಿ ಅರ್ಥ ಮಾಡಿಕೊಳ್ಳಬೇಕು, 12ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ರೇವಣಸಿದ್ದ ಚಾತುರ್ವವರ್ಣದ ವಿರುದ್ದ ಹೋರಾಟ ಮಾಡಿದ್ದಾರೆ ಇಂತಹ ಚರಿತ್ರೆೆಯನ್ನು ಇಂದಿನ ಕೆಲವು ಜನ ದಾರಿ ತಪ್ಪಿಿಸುತ್ತಿಿದ್ದಾರೆ ಅಂತವರ ಬಗ್ಗೆೆ ನಾವು ಜಾಗೃತರಾಗಬೇಕು ಎಂದು ಹೇಳಿದರು.
ಹಾಲುಮತ ಸಮಾಜ ಪಶುಪಾಲನೆ ಮಾಡಿ ಬೆಳೆದಿದೆ, ಕುರುಬರಿಗೆ ಮತ್ತು ಹಾಲುಮತಕ್ಕೆೆ ವ್ಯತ್ಯಾಾಸ ಇದೆ. ಕರ್ನಾಟಕದಲ್ಲಿ 36 ಚರಿತ್ರೆೆಗಳಿವೆ ಇವುಗಳಲ್ಲಿ ಬಾಯಿಂದ ಬಾಯಿಗೆ ಬಂದ ಚರಿತ್ರೆೆ ಇವೆ.
ಪಾರ್ವತಿಯ ಮೊಲೆಹಾಲಿನಿಂದ ಹುಟ್ಟಿಿದ್ದರಿಂದ ಹಾಲುಮತ ಎನ್ನುವುದು ಪುರಾಣದಲ್ಲಿ ಇದೆ, ಹಾಲುಮತ ಜಾತಿ ಅಲ್ಲ ಅದು ಸಿದ್ದಾಂತ ಎಂದು ಪ್ರತಿಪಾದಿಸಿದರು.
ಹಾಲುಮತ ಪರಂಪರೆ ಬಹುತ್ವ ಪರಂಪರೆ, ಶ್ರಮ ಸಂಸ್ಕೃತಿಯ ಪರಂಪರೆ, ಇಲ್ಲಿ ಕಾಯಕ ಪರಂಪರೆ ಇದೆ. ದೇಶದ ಕೆಲವು ಪುಂಗಿದಾಸರು ಇತಿಹಾಸ ತಿರುಚಿ ವೈದಿಕ ಸಂಸ್ಕೃತಿ ಶ್ರೇಷ್ಠ ಎಂದು ಬಿಂಬಿಸುತ್ತಾಾರೆ ಆದರೆ ವೈದಿಕ ಸಂಸ್ಕೃತಿ ಸನಾತನ ದ ಗುಲಾಮಿ ಸಂಸ್ಕೃತಿ ಎಂದು ಟೀಕಿಸಿದರು.
ಬಿಎಂಟಿಸಿ ಉಪಾಧ್ಯಕ್ಷ ನಿಕೇತರಾಜ್ ಮೌರ್ಯ ಹಾಲುಮತ ಸಾಹಿತ್ಯ ಸಂಸ್ಕೃತಿ ಕುರಿತು ಹಾಗೂ ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಶೇಖರ ನುಗ್ಗಿಿಲಿ ಮತ್ತೊೊಂದು ವಿಷಯದ ಕುರಿತು ಮಾತನಾಡಿದರು.
ಸಾಹಿತಿ ಎ್ ಡಿ ಹಳ್ಳಿಿಕೇರಿ ಪ್ರಾಾಸ್ತಾಾವಿಕ ನುಡಿದರು.
ವೇದಿಕೆಯ ಮೇಲೆ ಚಂದ್ರಕಾಂತ ಬಿಜ್ಜರಗಿ,ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಗುಂಡಪ್ಪ ಸಾಹುಕಾರ್ ಉಪಸ್ಥಿಿತರಿದ್ದರು.
ಸಾನಿಧ್ಯವನ್ನು ನಿರಂಜನಾನಂದ ಸ್ವಾಾಮಿಗಳು ವಹಿಸಿದ್ದರು.
ಸ್ವಾಾಗತ ಶಿಕ್ಷಕ ಮಂಜುನಾಥ ಮಾಡಿದರೆ ನಿರೂಪಣೆ ಶಿಕ್ಷಕ ರೇವಣಸಿದ್ದಪ್ಪ ಪೂಜಾರಿ ಮಾಡಿದರು.
‘ಅಪಾಯದಲ್ಲಿ ಬಹುತ್ವ ಭಾರತ’

