ಸುದ್ದಿಮೂಲ ವಾರ್ತೆ ಸಿಂಧನೂರು, ಜ.12:
ನಗರದ ಗಂಗಾವತಿ ರಸ್ತೆೆಯ ಐಕ್ಯೂ ಇಂಟರ್ನ್ಯಾಾಷನಲ್ ಶಾಲೆಯಲ್ಲಿ ವಿವಿಧ ಜನಪದ ಕಲಾ ಪ್ರದರ್ಶನ, ಆಹಾರ ಮೇಳದೊಂದಿಗೆ ಸಂಕ್ರಾಾಂತಿ ಸಂಭ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಂಗಾರಿ ಕ್ಯಾಾಂಪಿನ ಸದಾನಂದ ಶರಣರು ಮಾತನಾಡಿ, ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವುದನ್ನು ತಪ್ಪಿಿಸಿ ಅವರಿಗಾಗಿ ಒಂದು ಗಂಟೆ ಸಮಯ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಶಾಲೆಯ ಅಧ್ಯಕ್ಷ ರಾಮಚಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಖಜಾಂಚಿ ಸುಗಣ, ಅಡಳಿತಾಧಿಕಾರಿ ಕೆ.ವಿ.ರಾಘವೇಂದ್ರ, ಯೋಗ ಗುರು ಜಿ. ಅರುಣಾ, ಡಾ. ಯೂನಿಸ್, ಪ್ರಾಾಚಾರ್ಯ ಜಿ.ರಾಜಶೇಖರ್, ಉಪ ಪ್ರಾಾಚಾರ್ಯ ಬಸವರಾಜ ಅಮರಾಪುರ ಭಾಗವಹಿಸಿದ್ದರು.
ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಲಾಗಿದ್ದ 1 ರಿಂದ 10ನೇ ತರಗತಿ ವಿದ್ಯಾಾರ್ಥಿಗಳ ಐ-ಸೆಟ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾಾನಗಳಿಸಿದ ಮಕ್ಕಳಿಗೆ 10 ಸಾವಿರ ರೂಪಾಯಿ ಚೆಕ್, ದ್ವಿಿತೀಯ ಸ್ಥಾಾನ ಗಳಿಸಿದ ಮಕ್ಕಳಿಗೆ 6 ಸಾವಿರ ರೂಪಾಯಿ ಚೆಕ್ ಹಾಗೂ ತೃತೀಯ ಸ್ಥಾಾನ ಗಳಿಸಿದ ಮಕ್ಕಳಿಗೆ 3 ಸಾವಿರ ರೂಪಾಯಿ ಚೆಕ್ ವಿತರಿಸಲಾಯಿತು.
ಗಮನ ಸೆಳೆದ ಆಹಾರ ಮೇಳ : ಸಂಕ್ರಾಾಂತಿ ಉತ್ಸವದ ಅಂಗವಾಗಿ ವಿದ್ಯಾಾರ್ಥಿಗಳಿಂದ ಹಮ್ಮಿಿಕೊಂಡಿದ್ದ ಆಹಾರ ಮೇಳ ಪಾಲಕರ ಗಮನ ಸೆಳೆಯಿತು. ವಿಭಿನ್ನ ವಾದ ಆಹಾರ ಪದಾರ್ಥಗಳು ಕಾರ್ಯಕ್ರಮಗಳಲ್ಲಿ ಭಾಗ ವಹಿಸಿದ್ದ ಪಾಲಕರ ಬಾಯಿಯಲ್ಲಿ ನೀರು ಬರುವಂತೆ ಮಾಡಿದವು. ದೇಶಿಯ ಆಹಾರ ಉತ್ಪನ್ನಗಳು, ಚಾಟ್ಸ್, ತಿಂಡಿ ತಿನಿಸುಗಳು ಆಕರ್ಷಕವಾಗಿದ್ದವು.
ಗಮನ ಸೆಳೆದ ಆಹಾರ ಮೇಳ ಐಕ್ಯೂ ಇಂಟರ್ನ್ಯಾಷನಲ್ ಶಾಲೆಯಲ್ಲಿ ಸಂಕ್ರಾಾಂತಿ ಸಂಭ್ರಮ

