ಸುದ್ದಿಮೂಲ ವಾರ್ತೆ ಮಾನ್ವಿ, ಜ.12:
ಮಾನ್ವಿಿ ಪಟ್ಟಣದ ಕೋನಾಪುರಪೇಟೆ, ಅಂಬೇಡ್ಕರ್ ನಗರ ವ್ಯಾಾಪ್ತಿಿ ಪ್ರದೇಶಗಳ ಅಭಿವೃದ್ಧಿಿಗಾಗಿ ಒತ್ತಾಾಯಿಸಿ ಸೋಮವಾರ
ಸಮಾಜ ಸೇವಕ ಗುರುರಾಜ ನಾಗಲಾಪುರ ನೇತೃತ್ವದಲ್ಲಿ ಈ ಭಾಗದ ನಿವಾಸಿಗಳು ಅಂಬೇಡ್ಕರ್ ನಗರದ ಚೀಕಲಪರ್ವಿ ರಸ್ತೆೆಯಲ್ಲಿ ಉಪವಾಸ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರುರಾಜ ನಾಗಲಾಪುರ ಪಟ್ಟಣದ ಹೃದಯ ಭಾಗ ಕೋನಾಪುರಪೇಟೆ ಮತ್ತು ಅಂಬೇಡ್ಕರ್ ನಗರ ವ್ಯಾಾಪ್ತಿಿಯ ಪ್ರದೇಶಗಳು ಅನೇಕ ವರ್ಷಗಳಿಂದ ಮೂಲಭೂತ ಸೌಲಭ್ಯ ಮತ್ತು ಅಭಿವೃದ್ದಿಯಿಂದ ವಂಚಿತವಾಗಿವೆ. ಇಲ್ಲಿನ ಜನರು ಅನೇಕ ಸಮಸ್ಯೆೆಗಳನ್ನು ಎದುರಿಸುತ್ತಿಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆೆಗಳಿಗೆ ಸ್ಪಂದಿಸದೇ ತೀವ್ರ ನಿರ್ಲಕ್ಷ ಹೊಂದಿದ್ದಾರೆ.
ಜನಸಂದಣಿ, ಕಿರಿದಾದ ರಸ್ತೆೆ ಮತ್ತು ತೀವ್ರ ಸಂಚಾರದಿಂದ ಟ್ರಾಾಫಿಕ್ ಸಮಸ್ಯೆೆ, ರಸ್ತೆೆ ಅಗಲೀಕರಣ ಸಮಸ್ಯೆೆ, ಕುಡಿಯುವ ನೀರಿನ ಸಮಸ್ಯೆೆ, ನಿರಂತರ ವಿದ್ಯುತ್ ಸರಬರಾಜು, ಸರಕಾರಿ ಆಸ್ಪತ್ರೆೆಯಲ್ಲಿ ವೈದ್ಯರ ಕೊರತೆ, ರಸ್ತೆೆ ಒತ್ತುವರಿ, ಕಸ ವಿಲೇವಾರಿ ಘಟಕ, ವಿಪರೀತ ಧೂಳು ಮುಂತಾದ ಗಂಭೀರ ಸಮಸ್ಯೆೆಗಳನ್ನು ಇಲ್ಲಿನ ಜನ ಅನೇಕ ವರ್ಷಗಳಿಂದ ಅನುಭವಿಸುತ್ತಿಿದ್ದಾರೆ ಎಂದು ತೀವೃ ಅಸಮಾಧಾನ ವ್ಯಕ್ತಪಡಿಸಿದರು.
ಉಪವಾಸ ಧರಣಿ ಸ್ಥಳಕ್ಕೆೆ ಆಗಮಿಸಿದ ತಹಸೀಲ್ದಾಾರ್ ಅವರಿಗೆ ಮನವಿ ಸಲ್ಲಿಸಿದ ಧರಣಿ ನಿರತರು ಕೋನಾಪುರಪೇಟೆ-ಚೀಕಲಪರ್ವಿ ರಸ್ತೆೆ ಅಗಲೀಕರಣ ಮಾಡಿ ವಾಹನ ದಟ್ಟಣೆ ನಿವಾರಣೆಗಾಗಿ ಬೈಪಾಸ್ ರಸ್ತೆೆ ನಿರ್ಮಾಣ ಮಾಡಬೇಕು, ಪುರಸಭೆ ವತಿಯಿಂದ ಎರಡು ದಿನಕ್ಕೊೊಮ್ಮೆೆ ನಿರಂತರವಾಗಿ ಶುದ್ದ ಕುಡಿಯುವ ನೀರಿನ ಪೂರೈಕೆ ಮಾಡಬೇಕು, ರಸ್ತೆೆಯಲ್ಲಿ ಧೂಳು ಬಾರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು, ಟೌನ್ ಹಾಲ್ ಎದುರುಗಡೆ ಇರುವ ಡಾಂಬರು ರಸ್ತೆೆ ಮತ್ತು ಕೆನಾಲ್ ಬದಿಯಲ್ಲಿ ಅನಧಿಕೃತವಾಗಿ ಇಟ್ಟಿಿರುವ ಡಬ್ಬಾಾ ಅಂಗಡಿಗಳನ್ನು ತೆರವುಗೊಳಿಸಿ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ವಾಕಿಂಗ್ ಟ್ರ್ಯಾಾಕ್ ಹಾಗೂ ಉದ್ಯಾಾನವನ ನಿರ್ಮಿಸಬೇಕು, ಸರಕಾರಿ ಸಾರ್ವಜನಿಕ ಆಸ್ಪತ್ರೆೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಿಸುವುದಕ್ಕಾಾಗಿ ಖಾಲಿ ಇರುವ ವೈದ್ಯರ ಹಾಗೂ ಸಿಬ್ಬಂದಿಗಳ ಹುದ್ದೆಗಳನ್ನು ತುಂಬುವುದಕ್ಕೆೆ ಅಗತ್ಯ ಕ್ರಮ ಕೈಗೊಳ್ಳಬೇಕು, ಐತಿಹಾಸಿಕ ಸಂಜೀವರಾಯ ದೇವಸ್ಥಾಾನದ ಹತ್ತಿಿರ ಹಾಗೂ ಮುಸ್ಟೂರು ರಸ್ತೆೆಯಲ್ಲಿ ಹಾಕುತ್ತಿಿರುವ ನಗರದ ಕಸ ಬಂದ್ ಮಾಡಿ ಘನತ್ಯಾಾಜ್ಯ ವಿಲೇವಾರಿ ಘಟಕ ಬೇರೆ ಕಡೆ ಸ್ಥಳಾಂತರ ಮಾಡಬೇಕು, ಕೋನಾಪುರಪೇಟೆ, ಅಂಬೇಡ್ಕರ್ ನಗರದ ನಿವಾಸಿಗಳಿಗೆ ಕಲ್ಪಿಿಸಿರುವ ವಿದ್ಯುತ್ ಲೈನ್ ಗಳಿಗೆ ಕ್ರಷರ್ ಮಿಷನ್ ಹಾಗೂ ಕೈಗಾರಿಕೆಗಳಿಗೆ ಸಂಪರ್ಕ ನೀಡಿದ್ದು ಇದನ್ನು ತೆಗೆದು ಪ್ರತ್ಯೇಕ ವಿದ್ಯುತ್ ಸಂಪರ್ಕ ಕೊಡಬೇಕು, ಕೋನಾಪುರಪೇಟೆ ರಸ್ತೆೆಗೆ ರಾತ್ರಿಿ ವೇಳೆ ಜನರಿಗೆ ಅನುಕೂಲವಾಗುವಂತೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂಬ ಹಲವಾರು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ತಹಸೀಲ್ದಾಾರ್ ಹಾಗೂ ಇತರೆ ಅಧಿಕಾರಿಗಳು ಈ ಧರಣಿ ನಿರತರ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಧರಣಿ ನಿರತರು ಉಪವಾಸ ಧರಣಿ ಕೈ ಬಿಟ್ಟರು.
ಈ ಧರಣಿಯಲ್ಲಿ ಮುಖಂಡರಾದ ರಾಮಣ್ಣ ನಾಯಕ, ವಿಶ್ವನಾಥ ರಾಯಪ್ಪ ವಕೀಲರು, ಸುದರ್ಶನ ವಕೀಲರು, ಕೆ,ಶಿವಕುಮಾರ, ಚಂದ್ರು ಜಾನೇಕಲ್, ವೆಂಕಟೇಶ, ವೀರೇಶ ಬುರಾಹನಪುರ, ಮಂಜುನಾಥ ನಾಯಕ, ಹನುಮೇಶ ನಾಯಕ, ವೀರೇಶ, ಶಿವಪ್ಪ, ಅನಿಲ್ ಗೌಡ, ರೇಣುಕಾ ರಾಜ ಸೇರಿದಂತೆ ಕೋನಾಪುರ ಪೇಟೆಯ ಮುಖಂಡರು, ನಿವಾಸಿಗಳು ಭಾಗವಹಿಸಿದ್ದರು.
ಕೋನಾಪುರಪೇಟೆ ಏರಿಯಾ, ಅಂಬೇಡ್ಕರ್ ನಗರ ಅಭಿವೃದ್ಧಿಗಾಗಿ ಒತ್ತಾಯಿಸಿ ಉಪವಾಸ ಧರಣಿ

