ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ರಾಯಚೂರಿನ ಭಾರತೀಯ ವೈದ್ಯಕೀಯ ಸಂಘದಲ್ಲಿ ಪ್ಲಾಾಸ್ಟಿಿಕ್ ನಿಷೇಧಿಸಿ ಪರಿಸರ ಉಳಿಸಿ, ಸಾವಯವ ಸಾಮಾಗ್ರಿಿ ಬಳಸಿ ಆರೋಗ್ಯ ಬೆಳೆಸಿ ಧ್ಯೇಯದೊಂದಿಗೆ ಮೇಳ ಆಯೋಜಿಸಲಾಗಿತ್ತು.
ನಗರದ ಐಎಂಎ ಸಭಾಂಗಣದಲ್ಲಿ ಸಾವಯವ ಮೇಳ ಕಾರ್ಯಕ್ರಮಕ್ಕೆೆ ಐ.ಎಂ.ಎ. ಮಹಿಳಾ ವೈದ್ಯರ ಸಮಿತಿ, ಗ್ರೀನ್ ರಾಯಚೂರು ಸಹಯೋಗದೊಂದಿಗೆ ಸಂಕ್ರಾಾಂತಿ ಹಬ್ಬದ ಪ್ರಯುಕ್ತ ಪ್ಲಾಾಸ್ಟಿಿಕ್ ನಿಷೇಧಿಸಿ ಪರಿಸರ ಉಳಿಸಿ ಹಾಗೂ ಸಾವಯವ ಸಾಮಗ್ರಿಿ ಬಳಸಲು ಪ್ರೇರೆಪಿಸುವ ಕಾರ್ಯಕ್ರಮ ಗಮನ ಸೆಳೆಯಿತು.
ಪರಿಸರ ಕಾರ್ಯಕರ್ತರು ಉಮಾಪತಿ ಗಜಾನನ ಭಟ್ ಕೆ.ವಿ. ಶಿರಸಿ ಅವರು ಉಪನ್ಯಾಾಸ ನೀಡಿ, ಜೀವನಶೈಲಿ, ಆರೋಗ್ಯ ಮತ್ತು ಪರಿಸರ ಕುರಿತು ವಿವಿಧ ಸಸ್ಯಗಳು, ಪ್ರಾಾಣಿ ಪಕ್ಷಿಗಳು, ಮಣ್ಣಿಿನ ಗುಣಗಳು, ಶುದ್ಧ ನೀರಿನ ಗುಣಗಳ ಕುರಿತು ವಿವರಿಸಿ ನೆರೆದವರಿಗೆ ಮನವರಿಕೆ ಮಾಡಿಕೊಟ್ಟರು. ಶುದ್ಧ ಗಾಳಿ ಮತ್ತು ನೀರು ಬೇಕು, ದೇಶದ ತುಂಬೆಲ್ಲ ಹೆಮ್ಮಾಾರಿಯಂತೆ ಬೆಳೆದು ನಿಂತ ಪ್ಲಾಾಸ್ಟಿಿಕ್ ಬಳಕೆ ಕಡಿಮೆಯಾಗಬೇಕು ಎಂದರು.
ಮಣ್ಣೇ ಇಲ್ಲ ಎಂದಾದರೆ ಮನುಷ್ಯ ಬದುಕಲಾರ ಇಂದಿನ ದಿನಮಾನಗಳಲ್ಲಿ ಪಾಲಕರು ಮಕ್ಕಳಿಗೆ ಪ್ರಾಾಣಿ ಪಕ್ಷಿಗಳನ್ನು ಪರಿಸರದ ಮೂಲಕ ಅರಿವು ನೀಡಬೇಕಾಗಿದೆ, ಇಲ್ಲದಿದ್ದರೆ ಮಕ್ಕಳಿಗೆ ಚಿತ್ರದಲ್ಲಿ ಪರಿಚಯ ಮಾಡಿಸುವ ಅನಿವಾರ್ಯ ಬರಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಾವಯವ ಉತ್ಪನ್ನಗಳ ಪ್ರದರ್ಶನ, ಆಹಾರ ಮಳಿಗೆಗಳು ಮತ್ತು ಪರಿಸರ ಸ್ನೇಹಿ ಜೀವನಶೈಲಿಯ ಬಗ್ಗೆೆ ಚರ್ಚೆಗಳು ನಡೆದವು. ದೇಶೀಯ ತುಪ್ಪ, ದೇಶದ ಸಾವಯವ ವಸ್ತುಗಳು ಮತ್ತು ಕಾಳು, ಶುದ್ಧ ಅಡುಗೆ ಎಣ್ಣೆೆ, ಮನುಷ್ಯನ ಆರೋಗ್ಯಕ್ಕೆೆ ಶುದ್ಧ ಹಣ್ಣು, ಮುಂಜಾನೆಯ ಅಲ್ಪ ಉಪಹಾರಕ್ಕೆೆ ಬೇಕಾದ ಹಣ್ಣುಗಳು ಹಾಗೂ ಇತರ ಸಾವಯವ ಕೃಷಿಯಿಂದ ಬೆಳೆದ ವಿವಿಧ ಪದಾರ್ಥಗಳು ಪದರ್ಶನ ಮತ್ತು ಮಾರಾಟ ಮಾಡಲಾಯಿತು.
ಈ ಸಂದರ್ಭದಲ್ಲಿ ಐಎಂಎ. ಮಹಿಳಾ ವೈದ್ಯರ ಸಮಿತಿಯ ಅಧ್ಯಕ್ಷೆ ಡಾ. ಶ್ರೀಲತಾ, ಉಪಾಧ್ಯಕ್ಷೆ ಡಾ. ಪ್ರಿಿಯಾ ಭಾಲ್ಕಿಿ, ಕಾರ್ಯದರ್ಶಿ ಡಾ. ತೃಪ್ತಿಿ ಪಾಟೀಲ, ಸಹ ಕಾರ್ಯದರ್ಶಿ ಡಾ. ಶಿಲ್ಪಾಾ ನಾಗಲಾಪೂರ, ಐಎಂಎ ಅಧ್ಯಕ್ಷ ಡಾ. ಶ್ರೀ ಶೈಲೇಶ ಅಮರಖೇಡ, ಸಹ ಕಾರ್ಯದರ್ಶಿ ಡಾ. ಶಿಲ್ಪಾಾ ಜಯಪ್ರಕಾಶ, ರಾಜೇಂದ್ರ ಶಿವಾಳೆ, ಸರಸ್ವತಿ ಕಿಲಕಿಲೆ, ಹಾಪಕಾಮ್ಸ್ನ ರಾಜ್ಯ ನಿರ್ದೇಶಕ ಶಂಕರರೆಡ್ಡಿಿ, ಡಾ. ಮಲ್ಲಾರೆಡ್ಡಿಿ, ಸಾವಯವ ವಿಜ್ಞಾನಿಗಳು, ವಿವಿಧ ಉತ್ಪನ್ನಗಳ ಮಾರಾಟಗಾರರು ಉಪಸ್ಥಿಿತರಿದ್ದರು.
ಸಾವಯವ ಆಹಾರ ಮೇಳ ಪರಿಸರ ಪೂರಕ ಜೀವನ ಶೈಲಿಯೊಂದೆ ಆರೋಗ್ಯಕರ ಬದುಕಿಗೆ ಮಾರ್ಗ – ಭಟ್

