ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ಜಿಲ್ಲಾ ಉತ್ಸವದಲ್ಲಿ ಕವಿಗೋಷ್ಠಿಿ ನಡೆಸಲು ಜಿಲ್ಲಾಡಳಿತ ಜಿಲ್ಲೆಯ ಕವಿಗಳಿಗೆ ಕವನಗಳನ್ನು ಕಳುಹಿಸಲು ನಿಯಮಗಳನ್ನು ಓದಿದಾಗ ದಾಖಲೆ ಕೇಳಿದ್ದು ಜಿಲ್ಲಾಾಡಳಿತ ನೌಕರಿ ಕೊಡುತ್ತದೆಯೇ ಎಂದು ಹಿರಿಯ ಸಾಹಿತಿ ಪಲುಗುಲ ನಾಗರಾಜ ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.
ಕವಿಗೋಷ್ಟಿಿಗೆ ಹೆಸರು, ಸ್ಥಳ, ವಿದ್ಯಾಾರ್ಹತೆ, ದೂರವಾಣಿ ಸಂಖ್ಯೆೆ, ವಯಸ್ಸಿಿನ ದಾಖಲೆ. 10ನೇ ತರಗತಿ ಅಂಕ ಪಟ್ಟಿಿ ಮತ್ತು ವಿಳಾಸದ ಎಲ್ಲ ದಾಖಲೆಗಳನ್ನು ಕಡ್ಡಾಾಯವಾಗಿ ಕಳಿಸುವಂತೆ ಸೂಚನೆ ಬಂದಿದ್ದು ಎಂತಹ ಅಜ್ಞಾನದ ವ್ಯವಸ್ಥೆೆ ನೋಡಿ, ಇವರೇನು ಕವಿಗೋಷ್ಠಿಿಗೆ ಕರೆಯುತ್ತಿಿದ್ದಾರೋ..? ಸರ್ಕಾರಿ ನೌಕರಿ ಕೊಡಲು ಕರೆಯುತ್ತಿಿದ್ದಾರೋ ? ತಿಳಿಯುತ್ತಿಿಲ್ಲ. ಒಬ್ಬ ಕವಿ ಅಥವಾ ಸಾಹಿತಿಗೆ ಅಕ್ಷರ ಜ್ಞಾನ ಇದ್ದರೆ ಸಾಕಲ್ಲವೇ ! ಎಸ್ ಎಸ್ ಎಲ್ ಸಿ ಓದಿದರೆ ಮಾತ್ರ ಕವಿಗೋಷ್ಠಿಿಯಲ್ಲಿ ಭಾಗವಹಿಸಬೇಕೆ ? ಅದಕ್ಕಿಿಂತ ಕಡಿಮೆ ಓದಿದವರು ಭಾಗವಹಿಸುವಂತಿಲ್ಲವೇ ? ಅಥವಾ ಕಡಿಮೆ ಓದಿದವರು ಕವನಗಳನ್ನು ಬರೆಯಬಾರದೇ ? ಅಂತಹ ಕವನಗಳು ಅರ್ಹತೆ ಪಡೆಯುವುದಿಲ್ಲವೇ ?.
ನೋಡಿ ಹೇಗಿದೆ ಸರ್ಕಾರಿ ಕಾರ್ಯಕ್ರಮದ ವ್ಯವಸ್ಥೆೆ, ಹಿಂದೆ ಓದಲು ಬರೆಯಲು ಬರೆಯದೆ ಕೇವಲ ತಮ್ಮ ಕಂಠದ ಮೂಲಕ ಹಾಡುಗಳನ್ನು ಕಟ್ಟಿಿ ಹಾಡುತ್ತಿಿದ್ದರು ಅದುವೇ ಜನಪದ, ಅದೆಷ್ಟೋೋ ಅವಧೂತರು ತಮ್ಮ ಜ್ಞಾನದ ಮೂಲಕ ಕವನಗಳನ್ನು ಕಟ್ಟಿಿ ಈ ಲೋಕಕ್ಕೆೆ ಅರ್ಪಣೆ ಮಾಡಿದ್ದಾರೆ. ಒಂದನೇ ಎರಡನೇ ತರಗತಿ ಓದಿದವರು ಸಹ ಉತ್ತಮ ಕವನಗಳನ್ನು ಬರೆದವರೂ ಇದ್ದಾರೆ ಹೀಗಿರುವಾಗ ಜಿಲ್ಲಾಡಳಿತ ಕವಿಗೋಷ್ಠಿಿಗೆ ಕಟ್ಟುಪಾಡುಗಳನ್ನು ಹಾಕಿರುವುದು ಎಷ್ಟರ ಮಟ್ಟಿಿಗೆ ಸರಿ.
ಕವನಗಳನ್ನು ಕಳಿಸಲು ಕೇವಲ 4 ದಿನ ಮಾತ್ರ ಕಾಲಾವಧಿ ನೀಡಿರುತ್ತಾಾರೆ, ಜಿಲ್ಲಾ ಉತ್ಸವ ಕವಿಗೋಷ್ಠಿಿ ಬಗ್ಗೆೆ ಆ ಕವಿ/ಸಾಹಿತಿ ಗೆ ಮಾಹಿತಿ ತಲುಪುವುದಾರೂ ಹೇಗೆ ?. ಜಿಲ್ಲೆಯವರು ಎನ್ನುವುದಕ್ಕಾಾಗಿ ಆಧಾರ ಕಾರ್ಡ್ ಒಂದಿದ್ದರೆ ಸಾಕಲ್ಲವೇ… ಅದರಲ್ಲಿ ಎಲ್ಲವೂ ಮಾಹಿತಿ ಸಿಗುವುದಿಲ್ಲವೇ ? ಇಂತಹ ಬೇಜವಾಬ್ದಾಾರಿ ನೀತಿ ನಿಯಮಗಳು ಸಾಹಿತ್ಯಕ್ಕೆೆ ಮತ್ತು ಸಾಹಿತಿಗಳಿಗೆ ರಾಯಚೂರು ಜಿಲ್ಲಾ ಉತ್ಸವ ಅವಮಾನ ಮಾಡಿದಂತೆ ಕೂಡಲೇ ನಿಯಮ ಸರಳಿಕರಿಸಲು ಜಿಲ್ಲಾಧಿಕಾರಿ ಮುಂದಾಗಬೇಕು ಎಂದು ಸಾಹಿತಿ ಪಲುಗುಲ ನಾಗರಾಜ ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.
ಕವಿಗೋಷ್ಠಿಗೆ ದಾಖಲೆ ಇವರೇನು ಸರಕಾರಿ ನೌಕರಿ ಕೋಡುತ್ತಾರೆಯೇ – ಪಲುಗುಲ ಪ್ರಶ್ನೆ

