ದಯಾಶಂಕರ ಮೈಲಿ ಮೈಸೂರು, ಜ.13:
ರಾಜ್ಯದಲ್ಲಿ ಮುಖ್ಯಮಂತ್ರಿಿ ಕುರ್ಚಿ ಕದನದ ನಡುವೆಯೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೈಸೂರಿನ ಮಂಡಕಳ್ಳಿಿ ವಿಮಾನ ನಿಲ್ದಾಾಣದಲ್ಲಿ ಮಂಗಳವಾರ ಸಂಜೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ಅವರೊಂದಿಗೆ ಪ್ರತ್ಯೇಕವಾಗಿ ರಹಸ್ಯ ಮಾತುಕತೆ ನಡೆಸಿದರು.
ರಾಜ್ಯ ರಾಜಕಾರಣದಲ್ಲಿ ಈ ನಾಯಕರ ಮಾತುಕತೆ ತೀವ್ರ ಕುತೂಹಲ ಮೂಡಿಸಿದೆ. ಮಧ್ಯಾಾಹ್ನ ಸಿಎಂ ಮತ್ತು ಡಿಸಿಎಂ ಇಬ್ಬರು ಒಟ್ಟಿಿಗೆ ರಾಹುಲ್ಗಾಂಧಿ ಅವರಿಗೆ ಹೂಗುಚ್ಛ ನೀಡಿ ಸ್ವಾಾಗತಿಸಿ, ತಮಿಳುನಾಡಿನ ಕೂಡ್ಲೂರು ಕಾರ್ಯಕ್ರಮಕ್ಕೆೆ ಕಳುಹಿಸಿದರು.
ಕಾರ್ಯಕ್ರಮವನ್ನು ಮುಗಿಸಿ ತಮಿಳುನಾಡಿನಿಂದ ಸಂಜೆ ದೆಹಲಿಗೆ ಹೋಗಲು ಮತ್ತೆೆ ರಾಹುಲ್ಗಾಂಧಿ ಅವರು ಮಂಡಕಳ್ಳಿಿ ವಿಮಾನ ನಿಲ್ದಾಾಣಕ್ಕೆೆ ಬಂದರು. ಆಗ ವಿಮಾನ ನಿಲ್ದಾಾಣದ ರನ್ವೇನಲ್ಲೆ ಕೆಲ ಸೆಕೆಂಡ್ಗಳು ಸಿಎಂ ಸಿದ್ದರಾಮಯ್ಯರನ್ನು ಒಂದು ಬದಿಗೆ ಕರೆದುಕೊಂಡು ಹೋಗಿ ಚರ್ಚಿಸಿದ ಬಳಿಕ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೂ ಪ್ರತ್ಯೇಕವಾಗಿ ಮತ್ತೊೊಂದು ಬದಿಗೆ ಕರೆದೊಯ್ದು ಚರ್ಚಿಸಿದರು.
ರನ್ವೇನಲ್ಲೇ ರಹಸ್ಯ ಮಾತುಕತೆ ಏಕೆ?
ಹೀಗೆ ಪ್ರತ್ಯೇಕವಾಗಿ ರಾಹುಲ್ಗಾಂಧಿ ಅವರು ನಾಯಕದ್ವಯರನ್ನು ಪ್ರತ್ಯೇಕವಾಗಿ ರಹಸ್ಯವಾಗಿ ಮಾತನಾಡಿರುವುದು ಅನೇಕ ಪ್ರಶ್ನೆೆಗಳ ಜೊತೆಯಲ್ಲೇ ಕುತೂಹಲಗಳಿಗೂ ಕಾರಣವಾಗಿರುವುದು ಉಂಟು. ಅಧಿಕಾರ ಹಂಚಿಕೆ ಕುರಿತು ರಾಜ್ಯದ ನಾಯಕರಿಬ್ಬರು ಒಮ್ಮತಕ್ಕೆೆ ಏನೇ ಮಾಡಿದರೂ ಬಾರದೇ ಇರುವುದು, ಹೀಗೆ ಪ್ರತ್ಯೇಕವಾಗಿ ಮಾತನಾಡಲು ಕಾರಣವಾಗಿದೆ ಎಂದು ಹೇಳಲಾಗುತ್ತಿಿದೆ.
ಏರ್ಪೋಟ್ನಿಂದಲೇ ವೀರೇಂದ್ರ ಪಾಟೀಲ್ ಉಚ್ಚಾಾಟನೆ
1990ರಲ್ಲಿ ಬೆಂಗಳೂರಿನ ಏರ್ಪೋರ್ಟ್ನಿಂದಲೇ ರಾಜೀವ್ಗಾಂಧಿ ಅವರು ಅಂದಿನ ಮುಖ್ಯಮಂತ್ರಿಿ ವೀರೇಂದ್ರ ಪಾಟೀಲ್ರನ್ನು ಪದಚ್ಯುತಿಗೊಳಿಸಿದ್ದರು. ಈಗ ಅವರ ಪುತ್ರ ರಾಹುಲ್ಗಾಂಧಿ ಸಹ ಕರ್ನಾಟಕದ ಮುಖ್ಯಮಂತ್ರಿಿ ಮತ್ತು ಉಪಮುಖ್ಯಮಂತ್ರಿಿಯನ್ನು ಹೀಗೆ ರನ್ ವೇ ಮೇಲೆ ನಿಲ್ಲಿಸಿಯೇ ಮಾತುಕತೆ ನಡೆಸಿದ್ದು ರಾಜಕೀಯ ಕುತೂಹಲಕ್ಕೆೆ ಕಾರಣವಾಗಿದೆ.
ಸುಗಮವಾಗಿ ಇತ್ಯರ್ಥ ಮಾಡಲು ಈ ಕಸರತ್ತು
ದೇಶದಲ್ಲಿ ಕಾಂಗ್ರೆೆಸ್ ಅಧಿಕಾರದಲ್ಲಿ ಇರುವುದು ಮೂರು ರಾಜ್ಯಗಳಲ್ಲಿ ಮಾತ್ರ. ಅದರಲ್ಲೂ ತೆಲಂಗಾಣ ಮತ್ತು ಹಿಮಾಚಲ ಪ್ರದೇಶಕ್ಕಿಿಂತ ಹೆಚ್ಚಾಾಗಿ ಕರ್ನಾಟಕದಲ್ಲಿ ಅಧಿಕಾರ ಹೊಂದುವುದು ಇಂದಿನ ದಿನದಲ್ಲಿ ಎಲ್ಲಾ ದೃಷ್ಟಿಿ ಕೋನದಿಂದಲೂ ಕಾಂಗ್ರೆೆಸ್ ಅತಿ ಮುಖ್ಯ. ಒಂದು ವೇಳೆ ತಾವು ತೆಗೆದುಕೊಳ್ಳುವ ನಿರ್ಧಾರದಿಂದ ಹೆಚ್ಚು ಕಡಿಮೆಯಾದಲ್ಲಿ ಇದೇ ವರ್ಷ ಎದುರಾಗುವ ಪಶ್ಚಿಿಮ ಬಂಗಾಳ, ತಮಿಳುನಾಡು, ಕೇರಳ ಸೇರಿ ಪಂಚ ರಾಜ್ಯಗಳ ಚುನಾವಣೆಗಳನ್ನು ಎದುರಿಸಲು ತೊಂದರೆ ಆಗಬಹುದು ಎಂಬ ಆತಂಕದಿಂದಲೂ ಹೈಕಮಾಂಡ್ ಅಧಿಕಾರ ಹಂಚಿಕೆ ವಿಷಯವನ್ನು ಅತಿ ಸೂಕ್ಷ್ಮವಾಗಿ ನಿರ್ವಹಣೆ ಮಾಡಿ ಸುಗಮವಾಗಿ ಇತ್ಯರ್ಥ ಮಾಡಲು ಈ ಕಸರತ್ತು ನಡೆಸಲಾಗುತ್ತಿಿದೆ ಎಂಬ ಮಾತುಗಳನ್ನೂ ತಳ್ಳಿಿ ಹಾಕುವಂತಿಲ್ಲ.
ವಿಶ್ವಾಾಸಾರ್ಹ ಮೂಲಗಳ ಪ್ರಕಾರ, ದೆಹಲಿ ಮಟ್ಟದಲ್ಲಿ ಅಧಿಕಾರ ಹಸ್ತಾಾಂತರ, ಹಂಚಿಕೆ ಬಗ್ಗೆೆ ಹಲವು ಸುತ್ತಿಿನ ಮಾತುಕತೆ ನಡೆದಿದೆ. ಆದರೂ ಯಾವುದೇ ಒಮ್ಮತಕ್ಕೆೆ ಬರಲು ಸಾಧ್ಯವಾಗುತ್ತಿಿಲ್ಲ. ಹೀಗಾಗಿ ರಾಹುಲ್ಗಾಂಧಿ ಅವರು ಅದೂ ಏರ್ರ್ಪೋರ್ಟ್ನಲ್ಲಿ ಸಿಎಂ ಮತ್ತು ಡಿಸಿಎಂ ಅವರೊಂದಿಗೆ ಗುಪ್ತವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ರನ್ ವೇ ಮಾತುಕತೆ ಲಶ್ರುತಿ ನೀಡುವುದೇ ?
ಇದೇ ರಾಹುಲ್ಗಾಂಧಿ ಅವರು ವಿಮಾನ ನಿಲ್ದಾಾಣದ ರನ್ವೇನಲ್ಲೆ ಮಾತುಕತೆ ನಡೆಸಿರುವುದು ಲಶ್ರುತಿ ನೀಡುವುದೇ?, ಸುಗಮವಾಗಿ ಅಧಿಕಾರ ಹಂಚಿಕೆ ಅಥವಾ ಯಥಾಸ್ಥಿಿತಿ ಮುಂದುವರಿಯುವುದೋ ಮತ್ತು ಯಾವುದೇ ಪ್ರಕ್ರಿಿಯೆ ಸುಗಮವಾಗಿ ಆಗುವುದೋ? ಎಂಬ ಪ್ರಶ್ನೆೆಗಳಿಗೆ ಕೆಲ ದಿನ ದಿನಗಳು ಕಾದು ನೋಡಬೇಕಿದೆ.
ಮೈಸೂರು ವಿಮಾನ ನಿಲ್ದಾಾಣದಲ್ಲಿ ರಾಹುಲ್ ಗಾಂಧಿ ಅವರು ಮಧ್ಯಾಾಹ್ನ ಬಂದಾಗ ಮತ್ತು ಸಂಜೆ ಹೋಗುವಾಗ ಇದ್ದ ಸಮಯ ಕೇವಲ 15 ನಿಮಿಷ ಮಾತ್ರ. ಈ ನಡುವೆ ಸಿಎಂ ಹಾಗೂ ಡಿಸಿಎಂಗೆ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಕೇವಲ ಎರಡೂವರೆ ನಿಮಿಷಗಳಷ್ಟೇ ಅವಕಾಶ ಸಿಕ್ಕಿಿತ್ತು.
ಅಧಿಕಾರ ಹಂಚಿಕೆ ಕುರಿತು ಚರ್ಚೆಗಳು ಆರಂಭವಾದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಒಟ್ಟಾಾಗಿ ರಾಹುಲ್ ಗಾಂಧಿಯನ್ನು ಪ್ರತ್ಯೇಕವಾಗಿ ಭೇಟಿಯಾದುದು ಇದೇ ಮೊದಲ ಬಾರಿ ಎಂಬುದು ಗಮನಾರ್ಹ.
ನಾನೊಂದು ತೀರ.. ನೀನೊಂದು ತೀರ
ವಿಮಾನ ನಿಲ್ದಾಾಣದಲ್ಲಿ ಮಧ್ಯಾಾಹ್ನ ಬಂದಿಳಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಪುಷ್ಪಗುಚ್ಛ ನೀಡಿ, ಶಾಲು ಹೊದಿಸಿ ಬರಮಾಡಿಕೊಂಡರು ಸ್ವಾಾಗತಿಸಿದ ಮೇಲೆ ನಾನೊಂದು ತೀರ, ನೀನೊಂದು ತೀರ ಎಂಬಂತೆ ನಾಯಕದ್ವಯರು ಹೊರಟು ಹೋದರು.
ನಂತರ ಸಂಜೆಯವರೆಗೂ ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ಏಕಾಂಗಿಯಾಗಿ ಸಂಚರಿಸಿದರು. ರಾಹುಲ್ ಗಾಂಧಿಯನ್ನು ಹೆಲಿಕಾಪ್ಟರ್ ಹತ್ತಿಿಸಿ ಹೊರಬಂದ ಬಳಿಕ, ಸಿಎಂ ಮತ್ತು ಡಿಸಿಎಂ ಪ್ರತ್ಯೇಕ ದಾರಿಯಲ್ಲಿ ತೆರಳಿದರು. ವಿಮಾನ ನಿಲ್ದಾಾಣದ ಹೊರಗೆ ಬರುತ್ತಿಿದ್ದಂತೆ ಡಿಸಿಎಂ ದೂರ ನಡೆದು ಕಾರು ಹತ್ತಿಿ ಅಲ್ಲಿಂದ ಹೊರಟರು.

