ಸುದ್ದಿಮೂಲ ವಾರ್ತೆ ಮೈಸೂರು, ಜ.13:
ಪಕ್ಷದ ವರಿಷ್ಠ ರಾಹುಲ್ಗಾಂಧಿ ಬಂದರು, ತಮಿಳುನಾಡಿನ ಗೂಡ್ಲೂರು ಕಾರ್ಯಕ್ರಮಕ್ಕೆೆ ತೆರಳಿದರು. ರಾಹುಲ್ಗಾಂಧಿ ಕಮಿಂಗ್ ಅಂಡ್ ಗೋಯಿಂಗ್ ಅಷ್ಟೇ. ಯಾವ ಸಭೆಯೂ ಇಲ್ಲ, ಅಧಿಕಾರ ಹಸ್ತಾಾಂತರ ಸೇರಿದಂತೆ ಯಾವ ರಾಜಕೀಯ ಮಾತುಕತೆಯೂ ಇಲ್ಲ, ಚರ್ಚೆಯೂ ಇಲ್ಲ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಮಂಡಕಳ್ಳಿಿ ವಿಮಾನ ನಿಲ್ದಾಾಣದಲ್ಲಿ ಮಂಗಳವಾರ ರಾಹುಲ್ಗಾಂಧಿ ಅವರನ್ನು ಸ್ವಾಾಗತಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಂಜೆಯೂ ಯಾವ ಮಾತುಕತೆ ನಡೆಯಲಿಲ್ಲ. ನಾನೇ ಬಂದು ಬೀಳ್ಕೊೊಟ್ಟೆೆ. ಅಷ್ಟೇ ಇನ್ನೇನು ಇಲ್ಲ ಎಂದು ಪ್ರಶ್ನೆೆಯೊಂದಕ್ಕೆೆ ಉತ್ತರಿಸಿದರು.
ಇದೇ ವೇಳೆ ಅಧಿಕಾರ ಹಸ್ತಾಾಂತರ ವಿಷಯ ಪ್ರಸ್ತಾಾಪಿಸುತ್ತಿಿದ್ದಂತೆ ಕೊಂಚ ಸಿಡಿಮಿಡಿಗೊಂಡ ಸಿಎಂ, ಯಾರೋ ಎಂಎಲ್ಎಗಳು ಏನು ಗೊತ್ತಿಿಲ್ಲದೆ ಏನೋ ಹೇಳುತ್ತಾಾರೆ. ಅವರಿಗೆ ಏನು ಗೊತ್ತು ರೀ. ಅಧಿಕಾರ ಹಂಚಿಕೆ ವಿಚಾರ ಊಹಾಪೋಹಗಳ ಬಗ್ಗೆೆ ಚರ್ಚೆ ಮಾಡುತ್ತಿಿರುವುದು ಮಾಧ್ಯಮದವರು ಮಾತ್ರ ಎಂದು ಅಸಮಾಧಾನದಿಂದಲೇ ಹೇಳಿದರು
ಮಾತನಾಡಬೇಕಿರುವುದು ನಾನು ಮತ್ತು ಡಿಸಿಎಂ
ನಮ್ಮಲ್ಲಿ ಯಾವ ಗೊಂದಲವೂ ಇಲ್ಲ ಯಾವ ಸಮಸ್ಯೆೆಯೂ ಇಲ್ಲ. ಎಂಎಲ್ಎಗಳು ಏನೇನೊ ಹೇಳ್ತಾಾರೆ, ಮಾತನಾಡುತ್ತಾಾರೆ. ಮಾತನಾಡಬೇಕಿರುವುದು ನಾನು ಮತ್ತು ಡಿ.ಕೆ.ಶಿವಕುಮಾರ್. ನಾನೇನಾದ್ರು ಮಾತನಾಡಿದ್ದೀನಾ. ಡಿ.ಕೆ.ಶಿವಕುಮಾರ್ ಏನಾದ್ರು ಮಾತನಾಡಿದ್ದಾರಾ. ಯಾರೋ ಮಾಹಿತಿ ಇಲ್ಲದ ಎಂಎಲ್ಎಗಳು ಹೇಳಿದ್ದನ್ನು ಕೇಳಿದರೆ ಹೇಗೆ? ಎಂದು ಪ್ರಶ್ನಿಿಸಿದರು.
ನಮ್ಮಲ್ಲಿ ಯಾವ ಗೊಂದಲಗಳು ಇಲ್ಲ. ಯಾವ ಬೇರೆ ರೀತಿಯ ಚರ್ಚೆಗಳು ಇಲ್ಲ. ಇರುವುದೆಲ್ಲ ಮಾಧ್ಯಮಗಳಲ್ಲಿ. ಖರ್ಗೆ ಜೊತೆ ಮಾತನಾಡಿದ್ದೇನೆ. ಡಿ. ಕೆ .ಶಿವಕುಮಾರ್ ಜೊತೆಯಲ್ಲೂ ಮಾತನಾಡಿದ್ದೇನೆ. ಎಲ್ಲೂ ಯಾವತ್ತು ಯಾರ ಅಪಸ್ವರಗಳು ಇಲ್ಲ, ಯಾವ ಸಮಸ್ಯೆೆಗಳು ಇಲ್ಲ. ಏನೇ ತೀರ್ಮಾನಗಳಿದ್ದರೂ ಅದನ್ನು ಹೈಕಮಾಂಡ್ ಮಾಡುತ್ತದೆ ಎಂದು ಪ್ರತಿಪಾದಿಸಿದರು.
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಾಮಿ ಇತ್ತೀಚೆಗೆ ಪೂರ್ಣ ಪ್ರಮಾಣದಲ್ಲಿ ಸಕ್ರಿಿಯರಾಗಿರುವ ಬಗ್ಗೆೆ ಪ್ರತಿಕ್ರಿಿಯಿಸಿದ ಸಿಎಂ, ಕುಮಾರಸ್ವಾಾಮಿಗೆ ಆರೋಗ್ಯ ಸುಧಾರಿಸಲಿ. ಅವರಿಗೆ ಹುಷಾರಿಲ್ಲ ಎಂದು ಕೇಳಿದೆ. ಈಗ ಅವರು ಹುಷಾರಾಗಿದ್ದಾರೆ. ಕುಮಾರಸ್ವಾಾಮಿ ಏನು ರಾಜ್ಯ ರಾಜಕಾರಣಕ್ಕೆೆ ಬರುತ್ತೇನೆ ಎಂದು ಹೇಳಿಲ್ಲ. ನೀವೇ ಮಾಧ್ಯಮದವರು ಅವರ ಹಾವ ಭಾವ ನೋಡಿ ಮಾತಿನ ಏರಿಳಿತ ನೋಡಿ ಹೇಳುತ್ತಿಿದ್ದೀರಾ. ಆ ರೀತಿಯಾಗಿ ಹಾವ ಭಾವದ ಮೇಲೆ ಎಲ್ಲಾ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದರು.
ಬಿಜೆಪಿ-ಜೆಡಿಎಸ್ ಒಂದಾಗಿ ಎದುರಿಸಿದರೂ ಸಮಸ್ಯೆೆ ಇಲ್ಲ
ಗ್ರೇೇಟರ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ ನಡೆಸಲು ಸಿದ್ದರಾಗಿದ್ದೇವೆ. ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿದರೂ ನಮಗೆ ಸಮಸ್ಯೆೆ ಇಲ್ಲ. ಇರುವುದು ಎರಡೇ, ಒಂದು ಕಾಂಗ್ರೆೆಸ್ ಮತ ಮತ್ತೊೊಂದು ಕಾಂಗ್ರೆೆಸ್ ವಿರೋಧಿ ಮತ. ಇಲ್ಲಿ ಜೆಡಿಎಸ್ ಮತ ಬೇರೆ ಬಿಜೆಪಿ ಮತ ಬೇರೆ ಎಂದಿರುವುದಿಲ್ಲ. ಎರಡು ಪಕ್ಷದ ಮತಗಳು ಒಂದೇ ಅಭ್ಯರ್ಥಿಗೆ ಬಿದ್ದರೆ ಕಾಂಗ್ರೆೆಸ್ಗೆ ಸಮಸ್ಯೆೆಯಾಗುತ್ತದೆ ಎಂಬುದು ತಪ್ಪುು ಅಭಿಪ್ರಾಾಯ ಎಂದು ವ್ಯಾಾಖ್ಯಾಾನ ಮಾಡಿದರು.
ವಿಶೇಷ ಅಧಿವೇಶನ ತೀರ್ಮಾನ
ವಿಶೇಷ ಅಧಿವೇಶನ ಕರೆಯುವ ಬಗ್ಗೆೆ ನಾಳೆ (ಜ. 14) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡ್ತೇವೆ. ಅಧಿವೇಶನದ ದಿನಾಂಕದ ಬಗ್ಗೆೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಸದ್ಯಕ್ಕೆೆ ನಾನೇನು ದೆಹಲಿಗೆ ಹೋಗುತ್ತಿಿಲ್ಲ
ಹೈಕಮಾಂಡ್ ತೀರ್ಮಾನಕ್ಕೆೆ ನಾನು ಮತ್ತು ಡಿ.ಕೆ .ಶಿವಕುಮಾರ್ ಬದ್ದ ಎಂದು ಹೇಳಿದ್ದೇವೆ. ಸದ್ಯಕ್ಕೆೆ ನಾನೇನು ದೆಹಲಿಗೆ ಹೋಗುತ್ತಿಿಲ್ಲ. ವರಿಷ್ಠರು ಕರೆದರೆ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾರ್ಚ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಬಜೆಟ್ ಮಂಡಿಸುತ್ತೇನೆ. ಅದಕ್ಕೆೆ ಎಲ್ಲಾ ತಯಾರಿಗಳು ನಡೆದಿದೆ. ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರದ ಸಾಧನಾ ಸಮಾವೇಶ ಮಾಡುತ್ತೇವೆ. ೆಬ್ರವರಿ 13 ರಂದು ಹಾವೇರಿಯಲ್ಲಿ ಸಮಾವೇಶ ಮಾಡಲು ತಯಾರಿ ನಡೆಯುತ್ತಿಿದೆ ಎಂದು ತಿಳಿಸಿದರು.

