ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಜಿಲ್ಲೆೆಯ ಪೊಲೀಸರಲ್ಲಿ ಶಿಸ್ತಿಿನ ಜೊತೆಗೆ ಪ್ರತಿ ಠಾಣಾ ವ್ಯಾಾಪ್ತಿಿಯಲ್ಲಿರುವ ಅಪರಾಧ ಚಟುವಟಿಕೆಯಲ್ಲಿರುವವರ ಮೊಬೈಲ್ ಪರಿಶೀಲಿಸಲು, ಗಾಂಜಾ ಮಾರಾಟ, ಸೇವನೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದರು.
ಅವರಿಂದು ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಹೊಸದಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಜಿಲ್ಲೆೆ ವಿವಿಧ ಠಾಣೆಗಳಿಗೆ ಭೇಟಿ ನೀಡಿದ್ದು ಪೊಲೀಸರಲ್ಲಿ ಶಿಸ್ತುಘಿ, ಹಗಲು ರಾತ್ರಿ ಗಸ್ತು ಕಠಿಣವಾಗಿ ನಿರ್ವಹಿಸದಿರುವುದು ಗಮನಕ್ಕೆೆ ಬಂದಿದ್ದು ಸರಿಪಡಿಸಿಕೊಳ್ಳಲು ಸಲಹೆ ನೀಡಲಾಗಿದೆ.
ಅಲ್ಲದೆ, ವಿವಿಧ ಠಾಣೆಯಲ್ಲಿ ಅಪರಾಧ ಮನಸ್ಥಿಿತಿಯವರ ಪುನರ್ ಪರಿಶೀಲನೆ ಮಾಡಲಾಗುವುದು ಅವರ ವರ್ತನೆ, ನಡವಳಿಕೆ ಮೇಲೆ ನಿಗಾ ಇರಿಸುವ ಜೊತೆಗೆ ಮೊಬೈಲ್ ಪರಿಶೀಲಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 1300 ಪೊಲೀಸ್ ಮಂಜೂರಾತಿ ಹುದ್ದೆಗಳಿದ್ದು 198 ಹುದ್ದೆೆಗಳು ಖಾಲಿ ಇದ್ದು ಹೆಚ್ಚಿಿನ ಸೇವೆಗಾಗಿ ನಿವೃತ್ತ ಪೊಲೀಸರ ಜೊತೆ ಸ್ವಯಂ ಸೇವಾ ಪಡೆ ರಚಿಸುವ ಉದ್ದೇಶವಿದೆ. ಅಲ್ಲದೆ, ಎಲ್ಲ ಠಾಣೆ ವ್ಯಾಾಪ್ತಿಿಯಲ್ಲಿ ಸುಮಾರು 80 ಸಾವಿರ ಸಿಸಿ ಕ್ಯಾಾಮರ ಅಳವಡಿಸಿಕೊಂಡ ಮಾಹಿತಿ ಇದ್ದುಘಿ. ಅಂಗಡಿ, ಬ್ಯಾಾಂಕ್, ಚಿನ್ನ ಬೆಳ್ಳಿಿ ವ್ಯಾಾಪಾರಿ ಮಳಿಗೆ ಸೇರಿ ಪ್ರಮುಖ ಸ್ಥಳಗಲ್ಲಿ ಸಿಸಿ ಕ್ಯಾಾಮೆರಾ ಕಡ್ಡಾಾಯವಾಗಿ ಅಳವಡಿಸಿಕೊಂಡು ಸುರಕ್ಷತೆಗೆ ಹೆಚ್ಚಿಿನ ಒತ್ತು ನೀಡಬೇಕಾಗಿದೆ.
ಗಾಂಜಾ, ಅಕ್ರಮ ಸೆಂದಿ ತಯಾರಿಕೆ, ಮಾರಾಟದ ಬಗ್ಗೆೆ ಮಾಹಿತಿ ಇದ್ದು ಆ ಬಗ್ಗೆೆ ಸಂಬಂಧಿಸಿದ ಇಲಾಖೆಗಳ ಜೊತೆ ಸಮನ್ವಯತೆ ಸಭೆ ಮಾಡಿ ಜಂಟಿ ಕಾರ್ಯಾಚರಣೆ ಮೂಲಕ ಕಠಿಣ ಕ್ರಮ ಜರುಗಿಸಲಾಗುವುದು.
ನಗರದ ಪಟೇಲ್ ರಸ್ತೆೆಯಲ್ಲಿ ಸರಕು ಸಾಗಾಣಿಕೆ ಬೃಹತ್ ವಾಹನಗಳ ಪ್ರವೇಶ ಹಗಲಲ್ಲಿ ನಿರ್ಬಂಧಿಸುವ ಬಗ್ಗೆೆ ಪರಿಶೀಲಿಸಿದ್ದು ಸಮಯ ನಿಗದಿ, ತೀನ್ ಕಂದೀಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಪಾದಾಚಾರಿ ರಸ್ತೆೆ ಅತಿಕ್ರಮಣ, ಬೃಹತ್ ವಾಣಿಜ್ಯ ಸಮುಚ್ಛಯಗಳು , ಮಾಲ್ಗಳು ಮುಂತಾದವುಗಳಿಂದ ರಸ್ತೆೆ, ಚರಂಡಿ ಒತ್ತುವರಿ ಬಗ್ಗೆೆ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ಮಾಡಿ ಸುಲಭ ಸಂಚಾರಕ್ಕಾಾಗಿ ಶೀಘ್ರವೆ ಕಾರ್ಯಾಚರಣೆ ಮಾಡಲಾಗುತ್ತದೆ ಎಂದರು.
ಮಂಗಳ ಮುಖಿಯರು ರಸ್ತೆೆಗಳಲ್ಲಿ, ಅಂಗಡಿಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಹಣ ವಸೂಲಿ ಮಾಡುತ್ತಿಿರುವ ಬಗ್ಗೆೆ ಗಮನಿಸಿದ್ದು ಅವರಿಗೆ ತಿಳುವಳಿಕೆ ನೀಡಲಾಗುವುದು ಸರಿಪಡಿಸಿಕೊಳ್ಳದಿದ್ದರೆ ಕ್ರಮ ವಹಿಸುತ್ತೇವೆ ಎಂದ ಅವರು, ಸಾರ್ವಜನಿಕರು ಅಪರಾಧ, ಅಕ್ರಮಗಳ ಬಗ್ಗೆೆ ಪೊಲೀಸರ ಜೊತೆ ಕೈ ಜೋಡಿಸಿದರೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಅನುಕೂಲ ಆಗಲಿದೆ.
ಆನ್ಲೈನ್ ವಂಚನೆಗಳಿಗೆ ಜನ ಬಲಿಯಾಗದೆ ಎಚ್ಚರಿಕೆಯಿಂದ ಇರಬೇಕಲ್ಲದೆ, ಯಾವುದೆ ಅಪರಿಚಿತರ ಕರೆ, ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕಿಸಿದರೆ ಪ್ರತಿಕ್ರಿಿಯಿಸದಂತೆ ಸಲಹೆ ನೀಡಿದರು.
ರಾಯಚೂರು ವಿಭಾಗದ ಡಿಎಸ್ಪಿ ಶಾಂತವೀರ, ಸೆನ್ ಠಾಣೆಯ ಡಿಎಸ್ಪಿ ವೆಂಕಟೇಶ, ವಿವಿಧ ಠಾಣೆಗಳ ಸಿಪಿಐಗಳಾದ ನಿಂಗಪ್ಪ, ಸಾಬಯ್ಯ, ಉಮೇಶ ಕಾಂಬ್ಳೆೆ, ಪಿಎಸ್ಐಗಳಾದ ಮಂಜುನಾಥ, ಮಹೇಶ ಪಾಟೀಲ, ವೆಂಕಟೇಶ ಇತರರಿದ್ದರು.
ನಗರದೊಳಗೆ ಬೃಹತ್ ವಾಹನ ಸಂಚಾರಕ್ಕೆೆ ಸಮಯ ನಿಗದಿ ಜಿಲ್ಲೆೆಯ ಅಪರಾಧ, ಅಕ್ರಮಗಳ ವಿರುದ್ಧ ಕಠಿಣ ಕಾನೂನು ಕ್ರಮ- ಅರುಣಾಂಗ್ಷು ಗಿರಿ

