ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ರಾಯಚೂರು ಜಿಲ್ಲೆಯಲ್ಲಿ ಜನವರಿ-2026ರ ಮಾಹೆಯಲ್ಲಿ ಜರುಗುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಕಾರ್ಯಕ್ರಮದಲ್ಲಿ ವಿವಿಧ ಕ್ರೀೆಡೆಗಳನ್ನು ಆಯೋಜಿಸಲಾಗಿದೆ.
ಜನವರಿ 27ರ ಬೆಳೆಗ್ಗೆೆ 6 ಗಂಟೆಗೆ ಸೈಕ್ಲಾಾಥಾನ್ ಆಯೋಜನೆ ಮಾಡಲಾಗಿದೆ. ಪ್ರಥಮ ಬಹುಮಾನ 10 ಸಾವಿರ ಹಾಗೂ ದ್ವಿಿತೀಯ ಬಹುಮಾನ 5ಸಾವಿರ ರೂ.ಗಳನ್ನು ನೀಡಲಾಗುವುದು. ಆಸಕ್ತರು ಈ ಸ್ಪರ್ಧೆಯ ನೋಡಲ್ ಅಧಿಕಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರ ಮೊಬೈಲ್ ಸಂಖ್ಯೆೆ: 9972316895 ಅಥವಾ ಜಿಲ್ಲಾ ಶಸ್ತ ಚಿಕಿತ್ಸಕ ಡಾ.ವಿಜಯಶಂಕರ್ ಮೊಬೈಲ್ ಸಂಖ್ಯೆೆ: 9448427601ಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ.
ಕ್ರೀಡೆಗಳಲ್ಲಿ ಆಸಕ್ತರು ಭಾಗವಹಿಸಿ ರಾಯಚೂರು ಜಿಲ್ಲೆ ಹೆಮ್ಮೆೆಪಡುವಂತಹ ಕ್ರೀಡೋತ್ಸವ ಮೂಡಿಬರಲು ಸಹಕರಿಸಿ ರಾಯಚೂರು ಉತ್ಸವ ಯಶಸ್ವಿಿಗೊಳಿಸಲು ಎಲ್ಲಾ ಕ್ರೀಡಾಪಟುಗಳು ಮತ್ತು ಸಾರ್ವಜನಿಕರಲ್ಲಿ ವಿನಂತಿಸಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

