ಸುದ್ದಿಮೂಲ ವಾರ್ತೆ ರಾಯಚೂರು, ಜ.13:
2026ರ ಜನವರಿ 29, 30 ಮತ್ತು 31ರಂದು ರಾಯಚೂರಿನಲ್ಲಿ ಜಿಲ್ಲಾಡಳಿತದಿಂದ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ನಿಮಿತ್ತ ಕವಿಗೋಷ್ಠಿಿ ನಡೆಸಲು ರಾಯಚೂರು ಜಿಲ್ಲಾಡಳಿತವು ರಾಯಚೂರು ಜಿಲ್ಲಾ ವ್ಯಾಾಪ್ತಿಿಯಲ್ಲಿನ ಕವಿಗಳಿಂದ ಸ್ವರಚಿತ ಕವಿತೆಗಳನ್ನು ಆಹ್ವಾಾನಿಸಿದ್ದು, ಕವಿತೆಗಳನ್ನು ಕಳುಹಿಸಲು ಜನವರಿ 14 ಕೊನೆಯ ದಿನವಾಗಿದೆ.
ಕವಿತೆಯು ಸ್ವತಂತ್ರ ರಚನೆಯಾಗಿರಬೇಕು. ಕವಿತೆ ಒಂದು ಪುಟ ಮೀರದಂತೆ ನುಡಿ ಅಥವಾ ಯುನಿಕೋಡ್ನಲ್ಲಿ ಟೈಪ್ ಮಾಡಿ ವರ್ಡ್ ಾರ್ಮೆಟ್ನಲ್ಲಿ ಇ-ವಿಳಾಸ ್ಟಜ್ಚಿ್ಠ್ಟಿಜ್ಟಿಜಞಜ್ಝಿಿ.್ಚಟಞ ಗೆ ಇ-ಮೇಲ್ ಮಾಡಬಹುದು. ಅಥವಾ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪತ್ರಿಿಕಾ ಭವನದ ಮೊದಲನೇ ಮಹಡಿ, ಪಂಡಿತ ಸಿದ್ದರಾಮ ಜಂಬಲದಿನ್ನಿಿ ಜಿಲ್ಲಾ ರಂಗಮಂದಿರ ಹಿಂದುಗಡೆ, ರೈಲ್ವೆೆ ನಿಲ್ದಾಾಣದ ರಸ್ತೆೆ, ರಾಯಚೂರು ಜಿಲ್ಲೆ, ರಾಯಚೂರು ಇಲ್ಲಿಗೆ ಪೋಸ್ಟ್ ಮಾಡಬಹುದು. ಅಥವಾ ಮೊಬೈಲ್ ಸಂಖ್ಯೆೆ 9916111356 ಅಥವಾ 9008462236 ಗೆ ವಾಟ್ಸ್ಆ್ಯಪ್ ಮಾಡಬಹುದಾಗಿದೆ.
ಕವಿತೆಯೊಂದಿಗೆ ಕಡ್ಡಾಾಯವಾಗಿ ತಮ್ಮ ಹೆಸರು, ಸ್ಥಳ, ವಿದ್ಯಾಾರ್ಹತೆ, ದೂರವಾಣಿ ಸಂಖ್ಯೆೆಯ ವಿವರ, ವಿಳಾಸದ ದಾಖಲೆಗಾಗಿ ಆಧಾರ್ ಕಾರ್ಡ್ ಝರಾಕ್ಸ ಪ್ರತಿ ಮತ್ತು ವಯಸ್ಸಿಿನ ದಾಖಲೆಗಾಗಿ ಎಸ್ಸೆೆಸ್ಸೆೆಲ್ಸಿಿ ಅಂಕಪಟ್ಟಿಿ ಅಥವಾ ಬೇರೆ ಯಾವುದೇ ದಾಖಲೆಗಳನ್ನು ಕಳುಹಿಸಬೇಕು. ಕವಿಗಳ ಆಯ್ಕೆೆಯಲ್ಲಿ ಆಯ್ಕೆೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಕೊನೆಯ ದಿನಾಂಕದ ನಂತರ ಬರುವ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ರಾಯಚೂರು ಜಿಲ್ಲಾ ಉತ್ಸವದ ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿಿ ಸಮಿತಿಯ ಪ್ರಕಟಣೆ ತಿಳಿಸಿದೆ.

