ಸುದ್ದಿಮೂಲ ವಾರ್ತೆ ಕವಿತಾಳ, ಜ.13:
ಸಮೀಪದ ಯತಗಲ್ ಗ್ರಾಾಮಕ್ಕೆೆ ಮಂಗಳವಾರ ಭೇಟಿ ನೀಡಿದ ಶಾಸಕ ಆರ್ .ಬಸನಗೌಡ ತುರ್ವಿಹಾಳ ಅವರು ಉದ್ದೇಶಿತ ಪರಿಶಿಷ್ಟ ಪಂಗಡ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆೆ ಸ್ಥಳ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಧರತೀ ಆಬಾ ನವಜಾತಿಯ ಗ್ರಾಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಪರಿಶಿಷ್ಟ ಪಂಗಡ ವಸತಿ ನಿಲಯ ಯಾತಗಲ್ ಗ್ರಾಾಮಕ್ಕೆೆ ಮಂಜುರು ಆಗಿರುವದರಿಂದ ಕಟ್ಟಡ ನಿರ್ಮಾಣಕ್ಕೆೆ ಅರಣ್ಯ ಇಲಾಖೆ ವ್ಯಾಾಪ್ತಿಿಯಲ್ಲಿ ಬರುವ 6 ಎಕರೆ ಜಾಗ ಗುರುತಿಸಲಾಗಿದೆ ಎಂದರು. ಜಮೀನು ದಾಖಲೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಉಪ ಅರಣ್ಯ ಸಂರಕ್ಷಣೆ ಅಧಿಕಾರಿ ಸುರೇಶ ಬಾಬು ಅವರು ಮಾತನಾಡಿ ಅಗತ್ಯ ಭೂಮಿ ನೀಡಲು ಇಲಾಖೆ ಸಿದ್ದವಿದ್ದು ಅದೇ ವಿಸ್ತೀರ್ಣದಷ್ಟು ಸರ್ಕಾರಿ ಭೂಮಿ ಇಲಾಖೆಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಆರ್ ಎ್ ಓ ತಾಲೂಕು ವಲಯ ಅರಣ್ಯ ಅಧಿಕಾರಿ ಪುರುಷೋತ್ತಮ, ತಾಲೂಕು ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ಮಹಾಲಿಂಗಪ್ಪ, ಸಿ ಆರ್ ಪಿ ಸೌಮ್ಯ, ಪಿ ಡಬ್ಲ್ಯೂ ಡಿ ಇಲಾಖೆ ಜೆ ಇ ವೀರಭದ್ರಗೌಡ, ಗ್ರಾಾಮ ಪಂಚಾಯತಿ ಅಭಿವೃದ್ಧಿಿ ಅಧಿಕಾರಿ ತಿಮ್ಮಪ್ಪ ನಾಯಕ, ಗ್ರಾಾಮ ಅಭಿವೃದ್ಧಿಿ ಅಧಿಕಾರಿ ನಿಂಗಪ್ಪ, ಮುಖಂಡರಾದ ಬಲವಂತರಾಯ ಗೌಡ ವಟಗಲ್, ಮೃತ್ಯುಂಜಯ ಸ್ವಾಾಮಿ, ಕರಿಯಪ್ಪ ಯಾಕ್ಲಾಾಸಪುರ, ಯಮನೂರು ನಾಯಕ ಯಾತಗಲ್, ಭೀಮಣ್ಣ ನಾಯಕ ಕಾಚಾಪುರು, ಮೌನೇಶ ಅಮೀನಗಡ, ಮಲ್ಲಪ್ಪ ನೆಲಕೋಳ ಮತ್ತು ಗ್ರಾಾಮದ ಮುಖಂಡರು ಹಾಗೂ ಯುವಕರು ಇದ್ದರು.
ಯತಗಲ್ : ಉದ್ದೇಶಿತ ಎಸ್.ಟಿ.ಹಾಸ್ಟೆಲ್ ಸ್ಥಳ ಪರಿಶೀಲಿಸಿದ ಶಾಸಕರು

