ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಅರೆಬರೆ ರಸ್ತೆೆ ಹಾಗೂ ಚರಂಡಿಯಲ್ಲಿ ವೃದ್ದೆೆಯೊಬ್ಬರು ಬಿದ್ದು ಚಿಕಿತ್ಸೆೆ ಲಿಸದೆ ಸಾವನ್ನಪ್ಪಿಿದ ದುರ್ಘಟನೆ ಜಿಲ್ಲೆೆಯ ಕುರ್ಡಿ ಗ್ರಾಾಮದಲ್ಲಿ ಜರುಗಿದ್ದುಘಿ, ತಪ್ಪುು ಮುಚ್ಚಿಿಕೊಳ್ಳಲು ಸಂಧಾನ ಮಾಡಿಕೊಳ್ಳಲಾಗಿದೆ ಎಂಬ ಚರ್ಚೆ ಸಾಗಿದೆ.
ಮೃತ ವೃದ್ದೆೆಯನ್ನು ಅರೋಲಿಯ ಗಂಗಮ್ಮ ದೊಡ್ಡ ಯಂಕಯ್ಯ(79) ಎಂದು ತಿಳಿದು ಬಂದಿದೆ.ವೃದ್ದ ಮಹಿಳೆ ಅರೋಲಿಯಿಂದ ಕುರ್ಡಿಯ ಸರ್ಕಾರಿ ಬ್ಯಾಾಂಕಿಗೆ ಆಗಮಿಸಿ ಊರಿಗೆ ಮರಳಲು ಅರೋಲಿಗೆ ಸಂಪರ್ಕಿಸುವ ಮುಖ್ಯ ರಸ್ತೆೆಗೆ ಆಗಮಿಸಿದಾಗ ಅರೆ ಬರೆ ನಿರ್ಮಿಸಿದ್ದ ಚರಂಡಿಯಲ್ಲಿ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದರು.
ವೃದ್ದೆೆ ಬಿದ್ದಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವೂ ದೌಡಾಯಿಸಿ ಮೇಲಕ್ಕೆೆತ್ತಿಿ ಸರ್ಕಾರಿ ಆಸ್ಪತ್ರೆೆಗೆ ದಾಖಲಿಸುವ ವೇಳೆಗೆ ಸಾವನ್ನಪ್ಪಿಿರುವುದಾಗಿ ಗೊತ್ತಾಾಗಿದೆ.
ಕಳೆದೊಂದು ವರ್ಷದಿಂದ ಕುರ್ಡಿ-ಅರೋಲಿ ಸಂಪರ್ಕಿಸುವ ಕುರ್ಡಿಯ ಚರ್ಚ್ ಮುಂಭಾಗದಿಂದ ಹಾದು ಹೋಗುವ ರಸ್ತೆೆ ಎಸ್ಎಸ್ಡಿಪಿ ಯೋಜನೆಯಡಿ ದುರಸ್ತಿಿ ಹಾಗೂ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣದ ಗುತ್ತಿಿಗೆ ಪಡೆದಿರುವ ಗುತ್ತಿಿಗೆದಾರರು ಪೂರ್ಣಗೊಳಿಸದೆ ಬಿಟ್ಟಿಿರುವುದೆ ಇಂದು ವೃದ್ದೆೆಯ ಸಾವಿಗೆ ಕಾರಣ ಎಂದು ಗ್ರಾಾಮಸ್ಥರು ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.
ಲೋಕೋಪಯೋಗಿ ಇಲಾಖೆಯ ಎಇಇ, ಜೆಇ ಹಾಗೂ ಗುತ್ತಿಿಗೆದಾರರ ನಿಷ್ಕಾಾಳಜಿ ತೋರಿದ್ದು ತಕ್ಷಣ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಕುಟುಂಬಕ್ಕೆೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾಾರೆ.
ಸಂಧಾನ ? :
ರಸ್ತೆೆಯ ಪಕ್ಕದ ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿಿದ ವೃದ್ದೆೆಯ ಕುಟುಂಬದವರ ಸಂಪರ್ಕಿಸಿರುವ ಗುತ್ತಿಿಗೆದಾರರು, ಅಧಿಕಾರಿಗಳು ತಮ್ಮ ತಪ್ಪುು ಮುಚ್ಚಿಿಕೊಳ್ಳಲು, ಪೊಲೀಸರಿಗೆ ದೂರು ನೀಡದಂತೆ ಒತ್ತಡ ಹಾಕಿ ಸಂಧಾನ ಮಾಡಿದ್ದಾಾರೆ ಎಂಬ ಮಾತು ಹರಿದಾಡುತ್ತಿಿದೆ.
ಹೀಗಾಗಿ, ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿಿದ ವೃದ್ದೆೆಯ ಕುಟುಂಬದವರೂ ಬಡವರಾಗಿರುವುದರಿಂದ ಠಾಣೆಗೆ ದೂರು ನೀಡದಂತೆ ಪ್ರಭಾವ ವಹಿಸಿ ಒಂದಷ್ಟು ಹಣ ಪರಿಹಾರ ರೂಪದಲ್ಲಿ ನೀಡುವ ಭರವಸೆಗೆ ಕುಟುಂಬವೂ ವೌನವಹಿಸಿದೆ ಎಂಬ ಚರ್ಚೆ ಸಾರ್ವಜನಿಕರ ಮಧ್ಯೆೆ ನಡೆದಿದೆ.
ಗುತ್ತಿಗೆದಾರ, ಅಧಿಕಾರಿಗಳ ತಪ್ಪುು ಮುಚ್ಚಿಕೊಳ್ಳಲು ಸಂಧಾನ? ಕುರ್ಡಿ : ಚರಂಡಿಯಲ್ಲಿ ಬಿದ್ದ ಅರೋಲಿಯ ವೃದ್ದೆ ಸಾವು

