ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಅಂಗಾಂಗ ದಾನ ಕುರಿತಂತೆ ವ್ಯಾಾಪಕ ಅರಿವು ಮೂಡಿಸುವ ಅಗತ್ಯವಿದೆ ಎಂದು ಚಿಕಿತ್ಸಕ ತಜ್ಞ ವೈದ್ಯರ 2026-27 ನೇ ಸಾಲಿನ ಚುನಾಯಿತ ರಾಷ್ಟ್ರೀಯ ಅಧ್ಯಕ್ಷ ಡಾ.ಅಶೋಕ ತನೇಜಾ ಹೇಳಿದರು.
ಇತ್ತೀಚೆಗೆ ತುಂಗೆ ಕೃಷ್ಣ ಕ್ಲಬ್ ಆವರಣದಲ್ಲಿ ಭಾರತೀಯ ಚಿಕಿತ್ಸಕ ತಜ್ಞ ವೈದ್ಯರ ರಾಯಚೂರು ಶಾಖೆ ವತಿಯಿಂದ ಚಿಕಿತ್ಸಕ ತಜ್ಞ ವೈದ್ಯರ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ 12ನೇ ಡಾ ಶಂಕರಗೌಡ ಅಮರಖೇಡ ಸ್ಮಾಾರಕ ದತ್ತಿಿ ಉಪನ್ಯಾಾಸ ನೀಡಿದ ಅವರು ಅಂಗಾಂಗ ದಾನ ಮತ್ತು ಕಸಿ ಕುರಿತು ಉಪನ್ಯಾಾಸ ನೀಡಿದರು.
ವಿಶ್ವದಲ್ಲಿ ಅನೇಕ ರಾಷ್ಟ್ರಗಳಲ್ಲಿ ಅಂಗಾಂಗ ದಾನ ಮತ್ತು ಕಸಿ ಭಾರತಕ್ಕಿಿಂತ ಹೆಚ್ಚು ಆಗುತ್ತದೆ. ನಮ್ಮ ದೇಶದಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿಿರುವವರ ಸಂಖ್ಯೆೆ ಹೆಚ್ಚುತ್ತಿಿದೆ. ಅಂಗಾಂಗ ದಾನದ ಕುರಿತು ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಾಯಪಟ್ಟರು.
ಅನೇಕ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆೆಗಳಲ್ಲಿ ಕಸಿ ಮಾಡುವ ಮತ್ತು ಮರು ಜೋಡಿಸುವ ಸೌಲಭ್ಯಗಳಿವೆ. ಅದರ ಸದುಪಯೋಗ ಆಗಬೇಕು ಎಂದ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡ ರೋಗಿಗಳಿಗೆ ವಿಶೇಷ ಅನುದಾನ ಮೂಲಕ ಸಹಾಯ ನೀಡುತ್ತಿಿರುವುದು ಶ್ಲಾಾಘನೀಯ ಎಂದರು.
ದತ್ತಿಿ ಉಪನ್ಯಾಾಸವನ್ನು ಡಾ ನಂದಿನಿ ಚಟರ್ಜಿ, ಡಾ ಶಂಕರಪ್ಪ ಮುದಗಲ್ ಮತ್ತು ಡಾ ಎನ್ ಎಸ್ ಜವಳಿ ನಿರ್ವಹಿಸಿದರು.
ಕಾರ್ಯಕ್ರಮ ಉದ್ಘಾಾಟಿಸಿದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಮತ್ತು ರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕೆಯ ಪ್ರಧಾನ ಸಂಪಾದಕ ಡಾ. ನಂದಿನಿ ಚಟರ್ಜಿ ಅವರು ರಾಷ್ಟ್ರೀಯ ಸ್ತರದಲ್ಲಿ ಆಗುತ್ತಿಿರುವ ಬೆಳವಣಿಗೆ ಕುರಿತು ಮಾಹಿತಿ ನೀಡಿದರು. ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ತಮ್ಮ ಸಂಶೋಧನೆಯನ್ನು ಪ್ರಕಟಣೆ ಮಾಡಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಾಾಧ್ಯಕ್ಷ ಡಾ. ಮಹಾಲಿಂಗಪ್ಪ ಅವರು ಎಲ್ಲಾ ತಜ್ಞ ವೈದ್ಯರು ಸಕ್ರಿಿಯವಾಗಿ ಭಾಗವಹಿಸಲು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ ರಾಮಕೃಷ್ಣ ಎಂ ಆರ್ ಅವರು ಭಾರತೀಯ ಚಿಕಿತ್ಸಕ ತಜ್ಞ ವೈದ್ಯರ ಸಂಘ ರಾಯಚೂರು ಶಾಖೆಯ ಮುಂದಿನ ವರುಷದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕುಮಾರಿ ಶ್ರೇೇಯಾ ಸಗರದ ಪ್ರಾಾರ್ಥಿಸಿದರು. ಡಾ ಹರಿಪ್ರಸಾದ್ ಸ್ವಾಾಗತಿಸಿದರು. ಡಾ ಎಸ್ ಎಸ್ ರೆಡ್ಡಿಿ ಅವರು ಪ್ರಾಾಸ್ತಾಾವಿಕವಾಗಿ ಮಾತನಾಡಿದರು ಹಲವು ವೈದ್ಯರನ್ನು ಸನ್ಮಾಾನಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಶಾಖೆಯ ಕಾರ್ಯದರ್ಶಿ ಡಾ. ಮೋಹನ್ ಕುಮಾರ್ ಮತ್ತು ಖಜಾಂಚಿ ಡಾ ವಿಶ್ವನಾಥ ಕೆ ಉಪಸ್ಥಿಿತರಿದ್ದರು.
ಡಾ. ಸುರೇಶ ಸಗರದ ಅವರ ನೇತೃತ್ವದಲ್ಲಿ ಡಾ ನೇಹಾ ಸುಖಾಣಿ, ಡಾ. ಪ್ರಿಿಯಾ ಭಾಲ್ಕಿಿ ಮತ್ತು ರಿಮ್ಸ್ ವಿದ್ಯಾಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಚಿಕಿತ್ಸಕ ತಜ್ಞ ವೈದ್ಯರ ಸಂಘ ಕರ್ನಾಟಕ ರಾಜ್ಯ ಶಾಖೆಯ ಕಾರ್ಯಕಾರಿಣಿ ಸದಸ್ಯರು ಮತ್ತು ರಾಯಚೂರು ಶಾಖೆಯ ಸದಸ್ಯರು, ಸ್ನಾಾತಕೋತ್ತರ ವಿದ್ಯಾಾರ್ಥಿಗಳು ಭಾಗವಹಿಸಿದ್ದರು. ರಾಯಚೂರು ಶಾಖೆಯ ಖಜಾಂಚಿ ಡಾ ಮಂಜುನಾಥ ಹಟ್ಟಿಿ ವಂದಿಸಿದರು.
ಚಿಕಿತ್ಸಕ ತಜ್ಞ ವೈದ್ಯರ ದಿನಾಚರಣೆ ‘ಅಂಗಾಂಗ ದಾನ ಅರಿವು ಅಗತ್ಯ’

