ಸುದ್ದಿಮೂಲ ವಾರ್ತೆ ರಾಯಚೂರು, ಜ.13
ಜನವರಿ 29, 30 ಹಾಗೂ 31ರಂದು ನಿಗದಿಯಾದ ರಾಯಚೂರು ಉತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಜಿಲ್ಲಾಧಿಕಾರಿ ನಿತೀಶ್ ಕೆ. ಅವರ ಅಧ್ಯಕ್ಷತೆಯಲ್ಲಿ ಜನವರಿ 13ರಂದು ಎಡೆದೊರೆ ನಾಡು ರಾಯಚೂರು ಉತ್ಸವ-2026ರ ಮತ್ತೊೊಂದು ಸುತ್ತಿಿನ ಸಿದ್ಧತಾ ಸಭೆ ನಡೆಯಿತು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಮೂರನೇ ಸುತ್ತಿಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಉತ್ಸವದ ಹಿನ್ನೆೆಲೆಯಲ್ಲಿ ಈಗಾಗಲೇ ಎಲ್ಲ ರೀತಿಯಲ್ಲಿ ಸಿದ್ದತೆಗಳು ನಡೆಯುತ್ತಿಿದ್ದು, ಇನ್ನಷ್ಟು ಚುರುಕುಗೊಳ್ಳಬೇಕು. ಮುಖ್ಯವಾಗಿ ಜನೋತ್ಸವ ರೀತಿಯಲ್ಲಿ ಉತ್ಸವ ನಡೆಸಲು ಜಿಲ್ಲಾಡಳಿತವು
ಬದ್ಧವಾಗಿದೆ. ನಾವು ಸಹ ಉತ್ಸವದಲ್ಲಿ ಭಾಗವಹಿಸುತ್ತೇವೆ. ನಮಗೂ ಉತ್ಸವದ ಕಾರ್ಯ ವಹಿಸಿ ಎಂದು ತಿಳಿಸುವ ಜಿಲ್ಲೆಯ ಎಲ್ಲ ಸಂಘ-ಸಂಸ್ಥೆೆಗಳ, ಗಣ್ಯರ, ನಾಗರಿಕರ, ಯುವಕರ, ನೌಕರರ ಅಭಿಲಾಷೆಯಂತೆ ಎಲ್ಲರ ಸಹಭಾಗಿತ್ವದೊಂದಿಗೆ ಉತ್ಸವ ನಡೆಯುವಂತೆ ಕಾರ್ಯಯೋಜನೆ ರೂಪಿಸಿ ಸಂಬಂಧಿಸಿದ ಆಯಾ ಸಮಿತಿಗಳಲ್ಲಿನ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯನುಷ್ಠಾಾನಗೊಳಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಕವಿಗಳು, ಲೇಖಕರು, ಚಿಂತಕರು ಮತ್ತು ಬುದ್ಧಿಿಜೀವಿಗಳ ಮತ್ತು ಜಾನಪದ ಸೇರಿದಂತೆ ಎಲ್ಲ ಬಗೆಯ ಕಲಾವಿದರಿಗೆ ಉತ್ಸವದಲ್ಲಿ ಅವಕಾಶ ಸಿಗಬೇಕು. ಈ ಕಾರ್ಯವನ್ನು ಆಯಾ ಸಮಿತಿಯ ಸದಸ್ಯರು ಪಾರದರ್ಶಕವಾಗಿ ಮಾಡಬೇಕು. ಪುಸ್ತಕ ಓದುವ ಸಂಸ್ಕೃತಿಗೆ ಆದ್ಯತೆ ಸಿಗುವ ದಿಶೆಯಲ್ಲಿ ಪುಸ್ತಕ ಪ್ರದರ್ಶನ ಮಳಿಗೆ ನಿರ್ಮಾಣ ಸೇರಿದಂತೆ ನಾನಾ ಬಗೆಯ ಕಾರ್ಯಗಳ ಮೂಲಕ ಉತ್ಸವವು ಅಚ್ಚುಕಟ್ಟಾಾಗಿ ನಡೆಯುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಎಲ್ಲ ಅತಿಥಿ ಗಣ್ಯರಿಗೆ ಶಿಷ್ಠಾಾಚಾರದಂತೆ ಉತ್ಸವಕ್ಕೆೆ ಆಹ್ವಾಾನಿಸುವ ಕಾರ್ಯವಾಗಬೇಕು. ನಗರದ ರೈಲ್ವೆೆ ನಿಲ್ದಾಾಣ, ಜಿಲ್ಲೆಯ ಎಲ್ಲ ಬಸ್ ನಿಲ್ದಾಾಣಗಳಲ್ಲಿ ಮತ್ತು ಇತರೇ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಬ್ಯಾಾನರ್ ಅಳವಡಿಸಿ ಪ್ರಚಾರ ಕಾರ್ಯಕ್ಕೆೆ ಒತ್ತು ಕೊಡಬೇಕು. ಹೊರಗಡೆಯಿಂದ ಉತ್ಸವಕ್ಕೆೆ ಆಗಮಿಸುವ ಕಲಾವಿದರು ಮತ್ತು ಇನ್ನಿಿತರರಿಗೆ ಸರಿಯಾದ ರೀತಿಯಲ್ಲಿ ವಸತಿ ಗೃಹಗಳ ವ್ಯವಸ್ಥೆೆ ಮಾಡಬೇಕು ಎಂದು ಸೂಚನೆ ನೀಡಿದರು.
ಉತ್ಸವದಲ್ಲಿ ಕೃಷಿ, ಕರಕುಶಲ, ಲಪುಷ್ಪ, ಆಹಾರ ಮೇಳ, ಮತ್ಸ್ಯ ಮೇಳ, ಚಿತ್ರಕಲೆ ಪ್ರದರ್ಶನ ಹಮ್ಮಿಿಕೊಳ್ಳಲಾಗಿದ್ದು, ಎಲ್ಲಾ ಪ್ರದರ್ಶನಗಳು ಅಚ್ಚುಕಟ್ಟಾಾಗಿ ನಡೆಯಬೇಕು. ರೈತರನ್ನು ಆಕರ್ಷಿಸುವ ಕೃಷಿ ಉತ್ಸವ ಆಯೋಜಿಸಬೇಕು ಎಂದು ಸೂಚನೆ ನೀಡಿದರು.
ರಾಯಚೂರು ಉತ್ಸವದಲ್ಲಿ ನಾನಾ ಸ್ಥಳಗಳ ಮಾಹಿತಿ ಜನತೆಗೆ ಸಿಗುವ ನಿಟ್ಟಿಿನಲ್ಲಿ ಅಲ್ಲಲ್ಲಿ ಸೂಚನಾ ಲಕಗಳನ್ನು ಹಾಕಬೇಕು. ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್ ಹಾಗೂ ಇತರೆ ಸ್ವಯಂ ಸೇವಕ ಸಂಘಗಳ ಸಹಾಯ-ಸಹಕಾರ ಪಡೆಯಬೇಕು ಎಂದು ತಿಳಿಸಿದರು.
ಈ ವೇಳೆ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರು ಮಾತನಾಡಿ, ರಾಯಚೂರು ಉತ್ಸವ ಹಿನ್ನೆೆಲೆಯಲ್ಲಿ ಈಗಾಗಲೇ ರಾಯಚೂರು ಸಿಟಿಯ ಸೌಂದರ್ಯೀಕರಣ ಕಾರ್ಯ ಭರ್ಜರಿ ನಡೆದಿದೆ. ರಸ್ತೆೆ ಅಗಲೀಕರಣ, ದುರಸ್ಥಿಿ ಕಾರ್ಯ ನಡೆದಿದ್ದು ಜನತೆ ಸಹಕಾರ ನೀಡಬೇಕು. ನಗರದ ಎಲ್ಲ ಮುಖ್ಯರಸ್ತೆೆಗಳು ಸುಂದರವಾಗಿ ಕಾಣುವಂತೆ ಪಾಲಿಕೆ ಕೈಗೊಂಡ ಕಾರ್ಯಕ್ಕೆೆ ಜನತೆ ಸಹಕರಿಸಬೇಕು. ಕಸ ಎಲ್ಲೆಂದರಲ್ಲಿ ಎಸೆಯಬಾರದು. ರಾಯಚೂರು ಸಿಟಿ ಸೇರಿದಂತೆ ಜಿಲ್ಲೆಯ ಎಲ್ಲ ವ್ಯಾಾಪಾರಸ್ಥರು ಈಗಿನಿಂದಲೇ ರಾಯಚೂರು ಉತ್ಸವದ ಅಲಂಕಾರ ಕಾರ್ಯಕ್ಕೆೆ ಕಾರ್ಯಯೋಜನೆ ರೂಪಿಸಿ ಸಹಕರಿಸಬೇಕು ಎಂದು ಎಲ್ಲ ವ್ಯಾಾಪಾರಸ್ಥರಲ್ಲಿ ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶರಣಬಸವರಾಜ್, ತಹಸೀಲ್ದಾಾರರಾದ ಸುರೇಶ್ ವರ್ಮ, ಅಮರೇಶ ಬಿರಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಸಭೆಯಲ್ಲಿ ಇದ್ದರು.
ರಾಯಚೂರು ಉತ್ಸವ : ಮತ್ತೊೊಂದು ಸುತ್ತಿನ ಸಭೆ ಸಿದ್ಧತೆ ಅಚ್ಚುಕಟ್ಟಾಾಗಿ ಆಗಲಿ – ಡಿಸಿ ನಿತೀಶ್ ಕೆ

