ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಯಚೂರು ಜಿಲ್ಲಾಾ ಪಂಚಾಯಿತಿ ವಿವಿಧ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆೆ ಆಯ್ಕೆೆಯಾಗಿದ್ದಾಾರೆ.
ರಾಯಚೂರಿ ನಲ್ಲಿ ಜ.8 ಹಾಗೂ 9ರಂದು ಮಹಾತ್ಮಗಾಂಧಿ ಜಿಲ್ಲಾಾ ಕ್ರೀಡಾಂಗಣದಲ್ಲಿ ನಡೆದ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಯಚೂರು ಜಿಲ್ಲಾ ಪಂಚಾಯತಿ ಸಿಬ್ಬಂದಿಗಳಾದ ವೀರೇಶ, ರಂಗಣ್ಣ ಅವರು ಕೇರಂನಲ್ಲಿ ಸತೀಶಕುಮಾರ, ಮಾನಸ ಮನೋಜ ಅವರು ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದ ಬ್ಯಾಾಡ್ಮಿಿಂಟನ್ ಸ್ಪರ್ಧೆಯಲ್ಲಿ ಹಾಗೂ ಕು.ಅಕ್ಷಿತಾ ಭರತನಾಟ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾಾರೆ.
ವಿಜೇತರಾದ ಸಿಬ್ಬಂದಿಗಳು ರಾಜ್ಯ ಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆೆಯಾಗಿದ್ದಾಾರೆ. ವಿಜೇತರಾದ ಸಿಬ್ಬಂದಿಗಳಿಗೆ ಸಿಇಓ ಹಾಗೂ ಡಿಸಿಇಓ ಇತರೆ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾಾರೆ.
ನೌಕರರ ಕ್ರೀಡಾಕೂಟ ಜಿ.ಪಂ ಸಿಬ್ಬಂದಿ ರಾಜ್ಯಮಟ್ಟಕ್ಕೆ ಆಯ್ಕೆ

