ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.13:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಾಯದ ಪರವಾಗಿ ಇದ್ದಾಾರೆ ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗದ ಕಲ್ಬುರ್ಗಿ ಪೀಠದ ಆಯುಕ್ತ ಬಿ. ವೆಂಕಟಸಿಂಗ್ ಅಭಿಪ್ರಾಾಯ ವ್ಯಕ್ತಪಡಿಸಿದರು.
ಅವರು ಮಂಗಳವಾರ ತಿಂಥಿಣಿ
ಬ್ರಿಿಜ್ನ ಕಾಗಿನೆಲೆ ಕನಕ ಗುರು ಪೀಠದಲ್ಲಿ 2ನೇ ದಿನದ ಹಾಲುಮತ ಸಾಹಿತ್ಯ ಸಮ್ಮೇಳನದ ಹಾಲುಮತ ಸಿದ್ದ ಪರಂಪರೆಯ ವಿಚಾರ ಗೋಷ್ಠಿಿಯಲ್ಲಿ ಮಾತನಾಡಿ, ಹಾಲುಮತ ಸಮಾಜ ನಂಬಿಕಸ್ಥ ಸಮಾಜವಾಗಿದೆ, ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ ಎಂಬ ನಾಣ್ಣುಡಿಯಂತೆ ಕರ್ನಾಟಕದಲ್ಲಿ ಹಾಲುಮತ ಸಮಾಜ ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬೆಳೆದಿದೆ ಜೊತೆಗೆ, ಅನ್ಯ ಹಿಂದುಳಿದ ಸಮಾಜದವರನ್ನು ಬೆಳೆಸುವ ಗುಣ ಹೊಂದಿದೆ, ಈ ಸಮಾಜಕ್ಕೆೆ ಶ್ರೇಷ್ಠ ಪರಂಪರೆ ಇದೆ ಎಂದರು.
ಸಿದ್ದರಾಮಯ್ಯನವರಿಗೆ ಸಾಮಾಜಿಕ ನ್ಯಾಾಯ ಒಂದಗಿಸಬೇಕೆಂಬ ಕಾಳಜಿ ಇರುವುದರಿಂದ ಎಲ್ಲಾ ಬಡವರಿಗೆ ಸೌಲಭ್ಯಗಳನ್ನು ಕೊಡುತ್ತಿಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಾಹಿತಿ ಹಕ್ಕು ಕುರಿತು ಮಾತನಾಡಿದ ಅವರು, ಯಾವುದೇ ಇಲಾಖೆಯ ಕೆಲಸ ಮತ್ತು ಅನುದಾನ ಬಳಕೆ ಬಗ್ಗೆೆ ಮಾಹಿತಿ ಕೇಳಿದಾಗ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಕೊಡಲಿಲ್ಲ ಎಂದರೆ ಆಯೋಗಕ್ಕೆೆ ದೂರು ಸಲ್ಲಿಸಿದರೆ ಆಯೋಗ ದಿಂದ ಮಾಹಿತಿ ಕೊಡಿಸುತ್ತೇವೆ, ಒಂದು ವೇಳೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಹಿತಿ ಕೊಡದಿದ್ದರೆ ದಂಡ ಹಾಗೂ ಕ್ರಮ ಜರುಗಿಸುವ ಹಕ್ಕು ನಮ್ಮ ಆಯೋಗಕ್ಕೆೆ ಇದೆ ಎಂದು ತಿಳಿಸಿದರು.
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ, ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟಿ, ನಾಗರಾಜ ವಡ್ಡಗೇರಿ, ಲಿಂಗದಳ್ಳಿಿ ಹಾಲಪ್ಪ, ನಿಂಗಜ್ಜ ಗಂಗಾವತಿ, ಸೋಮಲಿಂಗ ದನಗೊಂಡ, ಜಿ ಬಿ ವಿನಯ ಕುಮಾರ, ಈರಪ್ಪ ಕಂಬಳಿ ಮಾತನಾಡಿದರು. ಚಂದ್ರಪ್ಪ ಸೊಬಟಿ ಪ್ರಾಾಸ್ತಾಾವಿಕ ನುಡಿದರು.
ಕಾರ್ಯಕ್ರಮದಲ್ಲಿ ತಹಶಿಲ್ದಾಾರ ಸತ್ಯಮ್ಮ, ಚಕ್ರಪಾಣಿ, ಶರಣಪ್ಪ, ಮಹಾಂತೇಶ ಕವಲಗಿ ಉಪಸ್ಥಿಿತರಿದ್ದರು.
ಸಾನಿಧ್ಯ ಈಶ್ವರಾನಂದ ಸ್ವಾಾಮಿಗಳು, ಪುಂಡಲೀಕ ಸ್ವಾಾಮಿಗಳು ಹಾಗೂ ನಿರಂಜನಾನಂದ ಸ್ವಾಾಮಿಗಳು ವಹಿಸಿದ್ದರು.
ತಿಂಥಿಣಿ ಬ್ರಿಜ್ ಕಾಗಿನೆಲೆ ಪೀಠದಲ್ಲಿ 2ನೇ ದಿನದ ಹಾಲುಮತ ಸಾಹಿತ್ಯ ಸಮ್ಮೇಳನ ಸಿಎಂ ಸಿದ್ದರಾಮಯ್ಯ ರಿಂದ ಸಾಮಾಜಿಕ ನ್ಯಾಾಯ : ಬಿ. ವೆಂಕಟಸಿಂಗ್

