ಸುದ್ದಿಮೂಲ ವಾರ್ತೆ ಸಿರವಾರ, ಜ.13:
ಪಟ್ಟಣದಲ್ಲಿ ಕೋತಿಗಳ ಕಾಟಕ್ಕೆೆ ಜನರು ರೋಷಿ ಹೋಗಿದ್ದು ಅವುಗಳನ್ನು ಹಿಡಿದು ಅರಣ್ಯಕ್ಕೆೆ ಮಂಗಳವಾರ ಸಾಗಿಸಲಾಯಿತು.
ಕೋತಿಗಳು ಮನೆ ಯ ಒಳಗೆ ನುಗ್ಗಿಿ ಆಹಾರದ ಪದಾರ್ಥಗಳು, ಜನರಿಗೆ ತೊಂದರೆ ನೀಡುತ್ತಿಿದ್ದವು.
ಸ್ಥಳೀಯ ಪಟ್ಟಣ ಪಂಚಾಯತಿಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರಿಂದ ಪಟ್ಟಣ ಪಂಚಾಯತಿ ಮುಖ್ಯಾಾಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಮೂಲಕ ಭೋನ ಇರಿಸಿ ಮೂವತ್ತಕ್ಕೂ ಹೆಚ್ಚು ಕೋತಿಗಳು ಹಿಡಿದು ದೂರದ ಅರಣ್ಯಕ್ಕೆೆ ಸಾಗಿಸಲಾಯಿತು. ಪಟ್ಟಣದ ಆಡಳಿತಕ್ಕೆೆ ಹಾಗೂ ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ ಅವರ ಕಾರ್ಯಕ್ಕೆೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಎರಡು ತಿಂಗಳ ಹಿಂದೆ ಬೀದಿ ನಾಯಿಗಳಿಗೆ ಚುಚ್ಚುಮದ್ದು ಪಟ್ಟಣ ಪಂಚಾಯತಿ ವತಿಯಿಂದ ಹಾಕಲಾಗಿದೆ. ನಾಯಿಗಳ ಹಾಗೂ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕುವಂತೆ ತಿಳಿಸಿದರು.ಇದರಲ್ಲಿ ಪ.ಪಂ. ಮಾಜಿ ಅಧ್ಯಕ್ಷ ವೈ.ಭೂಪನಗೌಡ, ಪ.ಪಂ. ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ, ಸಾರ್ವಜನಿಕರು ಇದ್ದರು.
ಸಿರವಾರ ಪಟ್ಟಣದಲ್ಲಿ ಕೋತಿಗಳ ಕಾಟ, ಅರಣ್ಯಕ್ಕೆ ಸ್ಥಳಾಂತರ

