ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಎಐ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಾಾವೀಣ್ಯತೆ ಪಡೆ ಯುವ ಮೂಲಕ ಔಷಧ ಉತ್ಪಾಾದನೆ ಕ್ಷೇತ್ರದಲ್ಲಿ ನಿಮ್ಮ ವೃತ್ತಿಿ ಅವಕಾಶಗಳನ್ನು ಹೆಚ್ಚಿಿಸಿಕೊಳ್ಳಿಿ ಎಂದು ಸಂಪನ್ಮೂಲ ವ್ಯಕ್ತಿಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಶ್ರವತಿ ಎಐ ಟೆಕ್ನಾಾಲಜಿಯ ಮುಖ್ಯ ವಿಜ್ಞಾನಿ ಡಾ. ನಾಗರಾಜ ಕುಲಕರ್ಣಿ ವಿದ್ಯಾಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಎ.ಎಂ.ಇ. ಸಂಸ್ಥೆೆಯ ಉಟ್ಕೂರು ಲಕ್ಷ್ಮಯ್ಯ ಔಷಧ ವಿಜ್ಞಾನ ಮಹಾವಿದ್ಯಾಾಲಯದಲ್ಲಿ ಜನವರಿ 10 ರಂದು ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೃತಕ ಬುದ್ಧಿಿಮತ್ತೆೆಯ (ಎಐ) ಅಳವಡಿಕೆಯಿಂದ ಪ್ರಸ್ತುತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿಿರುವ ಕ್ಷಿಪ್ರ ಪ್ರಗತಿ, ಗಮನಾರ್ಹ ಬದಲಾವಣೆ ಮತ್ತು ಅನುಕೂಲಗಳನ್ನು ವಿವರಿಸಿದ ಅವರು ಪ್ರಪಂಚಾದ್ಯಂತ ಔಷಧೀಯ ಉದ್ಯಮವು ಎಐ ಮೂಲಕ ಔಷಧ ಪೂರೈಕೆ ಸರಪಳಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ವಿಧಾನದಲ್ಲಿ ಗಮನಾರ್ಹ ಪರಿವರ್ತನೆಯನ್ನು ತರಲು ಸಿದ್ಧವಾಗಿದೆ. ಮುಂಬರುವ ದಿನಗಳಲ್ಲಿ ಕಡಿಮೆ ಸಮಯ ಹಾಗೂ ಅಲ್ಪ ವೆಚ್ಚದಲ್ಲಿ ಪರಿಣಾಮಕಾರಿಯಾದ ಔಷಧಗಳನ್ನು ಉತ್ಪಾಾದಿಸುವ ಅವಕಾಶ ದೊರಕಲಿದೆ. ಇದರಿಂದಾಗಿ ಎ್ಡಿಎ (ಆಹಾರ ಮತ್ತು ಔಷಧ ಆಡಳಿತ) ಇಲಾಖೆಯಿಂದ ಯಶಸ್ವಿಿ ಔಷಧ ಅನುಮೋದನೆಗಳ ಸಾಧ್ಯತೆಯನ್ನು ಹೆಚ್ಚಿಿಸುತ್ತದೆ. ಮತ್ತು ಸಾರ್ವಜನಿಕರಿಗೆ ಸುಧಾರಿತ ಸೇವೆ ಲಭಿಸುತ್ತದೆ ಎಂದು ವಿವರಿಸಿದರು. ಪರಿಣಾಮವಾಗಿ ಭವಿಷ್ಯದಲ್ಲಿ ಔಷಧ ವಿಜ್ಞಾನ ಕ್ಷೇತ್ರದ ಉದ್ಯೋೋಗ ಅವಕಾಶಗಳಲ್ಲಿ ಕೃತಕ ಬುದ್ಧಿಿಗೆ ಸಂಬಂಧಿಸಿದ ಕೌಶಲ್ಯಗಳ ಪಾತ್ರ ಅತ್ಯಗತ್ಯ. ಹಾಗಾಗಿ ಔಷಧ ಅನ್ವೇಷಣೆ ಕ್ಷೇತ್ರದಲ್ಲಿನ ಅಗಾಧ ಪ್ರಗತಿಗಳನ್ನು ಅರಿತು ನವೀನ ಎಐ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪ್ರಾಾವೀಣ್ಯತೆ ಪಡೆಯುವ ಮೂಲಕ ಔಷಧ ಉತ್ಪಾಾದನೆ ಕ್ಷೇತ್ರದಲ್ಲಿ ನಿಮ್ಮ ವೃತ್ತಿಿ ಅವಕಾಶಗಳನ್ನುಹೆಚ್ಚಿಿಸಿ ಕೊಳ್ಳಿಿ ಎಂದು ವಿದ್ಯಾಾರ್ಥಿಗಳಿಗೆ ಸಲಹೆ ನೀಡಿದರು.
ರಾಯಚೂರು ಮೂಲದ ಕರ್ನಾಟಕದ ಮಾಜಿ ಹೆಚ್ಚುವರಿ ಔಷಧ ನಿಯಂತ್ರಕರಾದ ಅಬುಲ್ ಮೊಹ್ಸಿಿನ್ ಉಪನ್ಯಾಾಸ ನೀಡಿದರು.
ಪ್ರಾಾಂಶುಪಾಲ ಡಾ. ಪ್ರಮೋದ ಕುಮಾರ, ಉಪ ಪ್ರಾಾಂಶುಪಾಲ ಡಾ. ವೈ ಆನಂದ್ ಕುಮಾರ್, ಹಿರಿಯ ಪ್ರಾಾಧ್ಯಾಾಪಕರು, ಇತರ ಶಿಕ್ಷಕ ವರ್ಗ, ನವೋದಯ ಾರ್ಮಸಿ ಕಾಲೇಜಿನ ಕೆಲವು ಪ್ರಾಾಧ್ಯಾಾಪಕರು ಹಾಗು ಕಾಲೇಜಿನ ಡಿ. ಾರ್ಮ್, ಬಿ. ಾರ್ಮ್ ಮತ್ತು ಎಂ. ಾರ್ಮ್ ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ಎಐ ತಂತ್ರಜ್ಞಾನದಿಂದ ಉದ್ಯೋಗಾವಕಾಶ ಹೆಚ್ಚು – ವಿಜ್ಞಾನಿ ಡಾ. ನಾಗರಾಜ ಕುಲಕರ್ಣಿ

