ಸುದ್ದಿಮೂಲ ವಾರ್ತೆ ಬೆಂಗಳೂರು, ಜ.14:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ಜಿಿ ಕಾಯ್ದೆೆ ಜಾರಿಯಿಂದ ಎದುರಾಗುವ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆೆ ಬಗ್ಗೆೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲು ಜ.22ರಿಂದ ವಿಧಾನ ಮಂಡಲ ವಿಶೇಷ ತುರ್ತು ಅಧಿವೇಶನ ನಡೆಯಲಿದೆ.
ಬುಧವಾರ ನಡೆದ ತುರ್ತು ಸಂಪುಟ ಸಭೆ ಅಧಿವೇಶನದಲ್ಲಿ ಜ.22ರಿಂದ ಮೂರು ದಿನಗಳ ಕಾಲ ಜಂಟಿ ಅಧಿವೇಶನ ನಡೆಸಲು ಒಪ್ಪಿಿಗೆ ನೀಡಲಾಯಿತು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಿಯಲ್ಲಿ ತಿಳಿಸಿದರು.
ಜ.22ರಂದು ಬೆಳಗ್ಗೆೆ 11 ಗಂಟೆಗೆ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಬಳಿಕ ವಿಬಿ ಜಿ ರಾಮ್ಜಿಿ ಕಾಯ್ದೆೆ ಬಗ್ಗೆೆ ಸುದೀರ್ಘ ಚರ್ಚೆ ನಡೆಯಲಿದೆ. ಬಳಿಕ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯಪಾಲರ ಜಂಟಿ ಭಾಷಣ ಅನುಮೋದನೆ ಕುರಿತು ನಿರ್ಧಾರ ಮಾಡುವ ಪರಮಾಧಿಕಾರವನ್ನು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ ಎಂದರು.
ಒಂದು ವಾರ ಅಧಿವೇಶನ ನಡೆಸುವಂತೆ ಸಲಹೆ:
ಸಚಿವ ಸಂಪುಟದಲ್ಲಿ ಕೇವಲ ಮೂರು ದಿನ ಮಾತ್ರ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಆದರೆ ಕೆಲವರು ಒಂದು ವಾರ ಅಂದರೆ ಜ.31ರವರೆಗೆ ನಡೆಸುವಂತೆ ಸಲಹೆ ನೀಡಿದ್ದಾರೆ. ಒಂದು ವಾರ ಕಾಲ ಅಧಿವೇಶನ ನಡೆಸುವ ಬಗ್ಗೆೆ ಸ್ಪೀಕರ್ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಹೊಸ ಕಾಯ್ದೆೆ ಜಾರಿಯಿಂದ ಗ್ರಾಾಮೀಣ ಪ್ರದೇಶಗಳಲ್ಲಿ ಸೃಜನೆಯಾಗುತ್ತಿಿದ್ದ ಅಸ್ತಿಿಗಳು ಸ್ಥಗಿತಗೊಳ್ಳಲಿವೆ. ಕಾರ್ಮಿಕರು ಗುತ್ತಿಿಗೆದಾರರ ಕೈಕೆಳಗೆ ಕೆಲಸ ಮಾಡುವ ಸ್ಥಿಿತಿ ಒದಗಲಿದೆ. ಅಲ್ಲದೆ ಕಾರ್ಮಿಕರು ಪಟ್ಟಣಗಳಿಗೆ ವಲಸೆ ಹೋಗುವುದು ಅಧಿಕವಾಗಲಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಶೇ. 40ರಷ್ಟು ಹಣ ಭರಿಸಬೇಕಾಗಿರುವುದು ದೊಡ್ಡ ಹೊರೆಯಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಕಾಯ್ದೆೆಯನ್ನು ರದ್ದುಗೊಳಿಸಿ ಹಿಂದೆ ಇದ್ದ ನರೇಗಾ ಯೋಜನೆಯನ್ನು ಮುಂದುವರೆಸುವಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಹಕ್ಕುಗಳ ಹರಣ:
ವಿಬಿ ಜಿ ರಾಮ್ಜಿಿ ಕಾಯ್ದೆೆ ಜಾರಿಯಿಂದ ಗ್ರಾಾಮೀಣ ಪ್ರದೇಶದ ಕೂಲಿಕಾರ್ಮಿಕರ ಹಕ್ಕುಗಳು ಹರಣವಾಗಲಿವೆ. ಅವರ ದುಡಿಯುವ ಶಕ್ತಿಿಯನ್ನು ಹೊಸ ಕಾಯ್ದೆೆ ಕಸಿದುಕೊಳ್ಳಲಿದೆ. ಈ ಕುರಿತು ಗ್ರಾಾಮೀಣ ಪ್ರದೇಶ ಕೂಲಿ ಕಾರ್ಮಿಕರಿಗೆ ಅರಿವು ಮೂಡಿಸಲಾಗುವುದು. ಅವರ ಹಕ್ಕುಗಳನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿ ವಿಶೇಷ ವಿಧಾನ ಸಭೆ ಅಧಿವೇಶನ ಕರೆದು ಚರ್ಚೆ ನಡೆಸುತ್ತಿಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ನುಡಿದರು.
ಕೇವಲ ರಾಜ್ಯದಲ್ಲಿ ಮಾತ್ರ ವಿರೋಧ ಅಲ್ಲ
ವಿಬಿ ಜಿ ರಾಮ್ಜಿಿ ಕಾಯ್ದೆೆಯನ್ನು ಕೇವಲ ಕರ್ನಾಟಕ ಮಾತ್ರ ವಿರೋಧಿಸುತ್ತಿಿಲ್ಲ. ನೆರೆ ರಾಜ್ಯ ತಮಿಳುನಾಡು ಕೂಡ ತೀವ್ರವಾಗಿ ವಿರೋಧಿಸಿದೆ. ತೆಲಂಗಾಣ, ಹಿಮಾಚಲ ಪ್ರದೇಶ, ಪಂಜಾಬ್, ಕೇರಳ ಸೇರಿದಂತೆ ಹಲವು ರಾಜ್ಯಗಳು ವಿರೋಧಿಸಿವೆ. ನಾವು ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿರುವುದನ್ನು ನೋಡಿ ಇನ್ನಷ್ಟು ರಾಜ್ಯಗಳು ನಿರ್ಣಯ ಅಂಗೀಕರಿಸಬಹುದು ಎಂದು ಸಚಿವರು ಹೇಳಿದರು.
ಕೋರ್ಟ್ ಮೆಟ್ಟಿಿಲೇರಲು ನಿರ್ಧಾರ
ಕೇಂದ್ರ ಸರ್ಕಾರಿ ಜಾರಿಗೆ ತಂದಿರುವ ವಿಬಿ ಜಿ ರಾಮ್ಜಿಿ ಕಾಯ್ದೆೆಯನ್ನು ಹಿಂದಕ್ಕೆೆ ಪಡೆಯದಿದ್ದರೇ ನ್ಯಾಾಯಾಲಯದಲ್ಲಿ ಪ್ರಶ್ನಿಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ವಿಶೇಷ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆೆ ಕಳುಹಿಸಲಾಗುವುದು. ಕೇಂದ್ರ ನಿರ್ಣಯಕ್ಕೆೆ ಬೆಲೆ ಕೊಡದೆ ಕಾಯ್ದೆೆ ಹಿಂದಕ್ಕೆೆ ಪಡೆಯದಿದ್ದರೇ ನ್ಯಾಾಯಾಲಯದಲ್ಲಿ ಪ್ರಶ್ನಿಿಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

