ಸುದ್ದಿಮೂಲ ವಾರ್ತೆ ರಾಯಚೂರು, ಜ.14:
ಜಿಲ್ಲಾಡಳಿತವು 2025-26ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ ಖರೀದಿಗೆ ಮುಂದಾಗಿದ್ದು, ಈ ಯೋಜನೆಯ ಸಹಾಯ ಪಡೆದುಕೊಳ್ಳಬೇಕು ಎಂದು ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರಾದ ಜಯವಂತರಾವ್ ಪತಂಗೆ ಅವರು ರಾಯಚೂರು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ.
್ರೂಟ್ಸ್ ಐಡಿ ತಂತ್ರಾಾಂಶದಲ್ಲಿ ಕಡ್ಡಾಾಯವಾಗಿ ಬೆಳೆ ಸಮೀಕ್ಷೆ ನೋಂದಣಿಯಾದ ರೈತರಿಂದ ಪ್ರತಿ ಎಕರೆಗೆ 15 ಕ್ವಿಿಂಟಾಲ್ರಂತೆ ಗರಿಷ್ಠ 150 ಕ್ವಿಿಂಟಾಲ್ ಹೈಬ್ರೀೀಡ್ ಬಿಳಿ ಜೋಳವನ್ನು ಪ್ರತಿ ಕ್ವಿಿಂಟಾಲ್ಗೆ 3699 ರೂ.ಗಳ ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ. ನೋಂದಣಿಗೆ ಬರುವ ರೈತರು ಕಡ್ಡಾಾಯವಾಗಿ ್ರೂಟ್ಸ್ ಸಂಖ್ಯೆೆ (ಎ್ಐ.ಡಿ ಸಂಖ್ಯೆೆ) ಆಧಾರ್ ಕಾರ್ಡ್, ಪಹಣಿ, ನಕಲು ಪ್ರತಿ ಮತ್ತು ರೈತರ ಬೆರಳಚ್ಚು ನೀಡುವುದು ಕಡ್ಡಾಾಯವಾಗಿದ್ದು ರೈತರು ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

