ಸುದ್ದಿಮೂಲ ವಾರ್ತೆ ಬೀದರ್, ಜ.14:
ತಾಲೂಕಿನ ಚಿಟ್ಟಾ ಗ್ರಾಮದ ರೈತ ಪ್ರಭುರಾವ ತಮ್ಮ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಜಮೀನಿನಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಸಂಭವಿಸಿದ ವಿದ್ಯುತಾಘಾತದಿಂದ ಸ್ಥಳದಲ್ಲೇ ಮೃತಪಟ್ಟ ಹಿನ್ನಲೆ ಶಾಸಕ ಶೈಲೇಂದ್ರ ಬೆಲ್ದಾಾಳೆ ಜೆಸ್ಕಾಂ ಇಲಾಖೆಯಿಂದ ನೀಡುವ ಪರಿಹಾರದ 5 ಲಕ್ಷ ರೂ. ಚೆಕ್ ಸಂತ್ರಸ್ತ ಕುಟುಂಬಕ್ಕೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ , ಈ ಪರಿಹಾರ ಧನವು ಸಂತ್ರಸ್ತ ಕುಟುಂಬದ ಸಂಕಷ್ಟದ ಸಮಯದಲ್ಲಿ ಸ್ವಲ್ಪ ಮಟ್ಟಿಿಗಾದರೂ ಆಸರೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಾಂ ಅಧಿಕಾರಿಗಳಾದ ಪ್ರೇೇಮಕುಮಾರ, ಅಬ್ದುಲ್ ಸೈಯದ್, ಹಾಗೂ ಮುಖಂಡರಾದ ರಾಜಕುಮಾರ ಪಾಟೀಲ, ವಿದ್ಯಾಸಾಗರ ಸ್ವಾಮಿ, ಆನಂದ ಪಾಟೀಲ, ಶಿವಕುಮಾರ ಪಾಟೀಲ, ಶರಣು ಸ್ವಾಮಿ, ಶಿವಕುಮಾರ ಕೆ., ಶಿವರಾಜ ಪಾಟೀಲ, ಸೋಮು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರೈತ ಕುಟುಂಬಕ್ಕೆ 5 ಲಕ್ಷ ಪರಿಹಾರ ಧನದ ಚೆಕ್ ವಿತರಣೆ

