ಸುದ್ದಿಮೂಲ ವಾರ್ತೆ ಕೊಪ್ಪಳ, ಜ.14:
ಕೇಂದ್ರ ಸರಕಾರ ನರೇಗಾ ಹೆಸರು ಮಾತ್ರವಲ್ಲ ಯೋಜನೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾಾನಗೊಳಿಸುವ ಉದ್ದೇಶದಿಂದ ವಿಕಸಿತ ಭಾರತ ಜಿ ರಾಮ್ ಜಿ ಎಂದು ಹೆಸರು ಬದಲಾಯಿಸಿದೆ ಆದರೆ ಅದಕ್ಕೆೆ ಕಾಂಗ್ರೆೆಸ್ ವಿರೋಧ ಮಾಡುತ್ತಿಿರುವುದು ಹಾಸ್ಯಾಾಸ್ಪದವಾಗಿದೆ ಎಂದು ಹುಬ್ಬಳ್ಳಿಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಿಯಲ್ಲಿ ಮಾತನಾಡಿ ಕಾಂಗ್ರೆೆಸ್ಸಿಿನವರಿಗೆ ಯೋಜನೆಗಳಲ್ಲಿ ಅಂಶಕ್ಕೆೆ ವಿರೋಧವೊ ಅಥವಾ ಹೆಸರಿಗೊ ಎಂಬುವದನ್ನು ಸ್ಪಷ್ಠಪಡಿಸಬೇಕು. ಕಾಂಗ್ರೆೆಸ್ ಸುಳ್ಳಿಿನ ಸರಮಾಲೆ ಹೇಳುತ್ತಿಿದೆ. ಅವರು ಗ್ರಾಾಮ ಪಂಚಾಯತಿ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದೆ ಎನ್ನುತ್ತಾಾರೆ ಇದು ಸುಳ್ಳು. ಯೋಜನೆಯಲ್ಲಿ 100-120 ದಿವಸಕ್ಕೆೆ ಹೆಚ್ಚಳ ಮಾಡಿ. ಸಣ್ಣ ಪುಟ್ಟ ಬದಲಾವಣೆ ಮಾಡಿ ಪಂಚಾಯತಿ ಅಧಿಕಾರ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿ ರಾಮ್ ಜಿ ಯೋಜನೆಯನ್ನು ಸಿಎಂ ಸೇರಿ ಎಲ್ಲರೂ ಸರಿಯಾಗಿ ಓದಬೇಕು. ಈ ಹಿಂದೆ ಜವಾಹರ ರೋಜಗಾರ ಯೋಜನೆಯ ಹೆಸರು ಬದಲಾಯಿಸಿದ್ದು ಕಾಂಗ್ರೆೆಸ್ ಎಂಬುವುದನ್ನು ಮರೆಯಬಾರದು ಎಂದರು.
ಉದ್ಯೋೋಗ ಖಾತ್ರಿ ಯೋಜನೆಗೆ 2013-14 ರಲ್ಲಿ 33 ಸಾವಿರ ಕೋಟಿ ರೂಪಾಯಿ ಅನುದಾನ ಇತ್ತು. ಈಗ 2.86 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ನೂತನ ಪರಿಷ್ಕೃತ ಯೋಜನೆಯಿಂದ ಎಲ್ಲಾಾ ರೀತಿಯಿಂದ ಬಡವರಿಗೆ ಅನುಕೂಲವಾಗುವ ಯೋಜನೆ ಬದಲಾವಣೆಯಾಗಿದೆ ಎಂದರು.
ನರೇಗಾದಲ್ಲಿ 10 ಲಕ್ಷ ದೂರುಗಳು ಬಂದಿದ್ದವು. ಈಗ ದೂರುಗಳ ಸಂಖ್ಯೆೆ ಕಡಿಮೆಯಾಗಿದೆ. ಇನ್ನೂ ಬದಲಾವಣೆ ತರಲಾಗುವುದು. ಬಯೋಮೆಟ್ರಿಿಕ್, ಎಐ ಟೆಕ್ನಾಾಲಾಜಿ ಬಳಕೆ ಮಾಡಿ ನಿಗಾ ವಹಿಸಲಾಗಿದೆ ಯೋಜನೆಯಲ್ಲಿ ದುರಪಯೋಗ ತಡೆಯಲು ಕೇಂದ್ರ ಸರಕಾರ ಹೊರಟಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ. ಮಾಜಿ ಸಚಿವ ಹಾಲಪ್ಪ ಆಚಾರ. ಡಾ ಬಸವರಾಜ ಕ್ಯಾವಟರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ.ಚಂದ್ರಶೇಖರ ಹಲಗೇರಿ. ಪ್ರಮೋದ ಕಾರಕೂನ, ಮಹೇಶ ಕ್ಯಾವಟರ್ ಇದ್ದರು.
ಜಿ ರಾಮ್ ಜಿ ವಿರೋಧಿಸುತ್ತಿರುವುದು ಹಾಸ್ಯಾಸ್ಪದ- ಟೆಂಗಿನಕಾಯಿ

