ಸುದ್ದಿಮೂಲ ವಾರ್ತೆ ಅರಕೇರಾ, ಜ.14:
ಇಲ್ಲಿಗೆ ಸಮೀಪದ ಶಾವಂತಗಲ್ ಗ್ರಾಾಮದ ಬಳಿ 9ಎ ವಡವಟ್ಟಿಿ ಬ್ರ್ಯಾಾಂಚ್ನ ಲ್ಯಾಾಟರಲ್ ನಂಬರ್ 1 ರ ಉಪ ಕಾಲುವೆಗೆ ಭೋಂಗಾ ಬಿದ್ದು ನೀರು ಪೋಲಾಗುತ್ತಿಿರುವ ಪರಿಣಾಮ 500 ಎಕರೆ ಪ್ರದೇಶಕ್ಕೆೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿ ಬೆಳೆ ರಕ್ಷಿಿಸಿಕೊಳ್ಳಲು ರೈತರು ಪರದಾಡುತ್ತಿಿದ್ದಾಾರೆ.
ಕಳೆದ 3-4 ತಿಂಗಳ ಹಿಂದೆ ಈ ಭೋಂಗಾ ಬಿದ್ದಿದ್ದು ಇದುವರೆಗೂ ಕೆಬಿಜೆಎನ್ಎಲ್ ಅಧಿಕಾರಿಗಳು ಸ್ಥಳಕ್ಕೆೆ ಭೇಟಿ ನೀಡಿ ದುರಸ್ತಿಿಗೊಳಿಸುವ ಪ್ರಕ್ರಿಿಯೆ ಆರಂಭಿಸಿಲ್ಲಘಿ.
ಭೋಂಗಾ ಬಿದ್ದರುವ ಪಕ್ಕದಲ್ಲಿಯೇ ಗೇಟ್ ಇದ್ದುಘಿ, ಆ ಗೇಟ್ ಸಂಪೂರ್ಣ ತೆರೆದಿರುವ ಪರಿಣಾಮ ಸ್ವಲ್ಪ ಮಟ್ಟಿಿಗೆ ನೀರು ಹರಿಯುತ್ತಿಿದೆ. ಮುಂಗಾರು ಹಂಗಾಮಿಗೆ ನಿರಂತರ ನೀರು ಹರಿದ ಪರಿಣಾಮ ಮತ್ತು ಮಳೆಯಿಂದಾಗಿ ಸಮಸ್ಯೆೆಯಾಗಿಲ್ಲಘಿ.
ಪ್ರಸ್ತುತ ಕಾಲುವೆಗೆ ವಾರಬಂಧಿ ಇರುವುದರಿಂದ ಈ ಕಾಲುವೆ ಇರುವುದರಿಂದ ಈಗ ಈ ಕಾಲುವೆ ಭೋಂಗಾ ದುರಸ್ತಿಿಗೊಳಿಸಿ ನೀರು ಬಿಡಿ ಎಂದು ರೈತರು ಆಗ್ರಹಿಸಿದ್ದಾಾರೆ.
ಶಾವಂತಗಲ್ ಗ್ರಾಾಮದಿಂದ ನಾರಬಂಡಿ ಗ್ರಾಾಮದ ಕೆರೆಯ ತನಕ ಸುಮರು 5 ಕಿಮೀ ವರೆಗೆ ಕಾಲುವೆ ವಿಸ್ತೀರ್ಣವಿದೆ. ಶೇಕಡಾ 90 ರಷ್ಟು ಭತ್ತ ಹಾಗೂ 10 ರಷ್ಟು ಇನ್ನಿಿತರ ಬೆಳೆಗಳಿಗೆ ಇಲ್ಲಿನ ರೈತರು ಈ ಕಾಲುವೆ ನೀರನ್ನೇ ಅವಲಂಭಿಸಿದ್ದಾಾರೆ. ಇದೀಗ ಕಾಲುವೆಗೆ ನೀರಿನ ಹರಿವು ನಿಂತು ಹೋಗಿದೆ. ಬೆಳೆಗಳಿಗೆ ನೀರಿನ ಅನಿವಾರ್ಯತೆ ಇದೆ. ಇನ್ನಾಾದರು ಅಧಿಕಾರಿಗಳು ಭೋಂಗಾ ಮುಚ್ಚಿಿ ಕಾಲುವೆ ದುರಸ್ತಿಿ ಮಾಡಿ ಬೆಳೆಗಳ ಉಳಿವಿಗೆ ದಾವಿಸಬೇಕು ಎನ್ನುವುದು ಅನ್ನದಾತರ ನೋವಿನ ಮಾತು.
ನಿಂಗಪ್ಪ ಪೂಜಾರಿ, ಭೀರಪ್ಪ ಅಂಗಡಿ, ರಂಗಣ್ಣ ಗಲಗ, ನರಸಪ್ಪ ಸಿರವಾರ, ಮಲ್ಲಯ್ಯ ಕಟ್ಟೇಕಾರ್, ಮಲ್ಲಿಕಾರ್ಜುನ, ಸಿದ್ದಲಿಂಗ ಕಂಬಳಿ, ಯಲ್ಲಪ್ಪ ಅಡಕಲಗುಡ್ಡ, ನಿಂಗಪ್ಪ ಕಟ್ಟೇಕಾರ, ಬಸವರಾಜ, ನಿಂಗಯ್ಯ ಬಾಡಲ್, ಸಿದ್ದಯ್ಯ ಸೇರಿದಂತೆ ಇತರರು ಇದ್ದರು.
ಕೋಟ್ 1 :
ಉಪ ಕಾಲುವೆಯಲ್ಲಿ ಗುಂಡಿಬಿದ್ದ ಪರಿಣಾಮ ನೀರು ಹರಿಯುತ್ತಿಿಲ್ಲ ಈ ಬಗ್ಗೆೆ ಅಧಿಕಾರಿಗಳಿಗೆ ತಿಳಿಸಿದರೂ ಸ್ಥಳಕ್ಕೆೆ ಬಂದು ವೀಕ್ಷಣೆ ಮಾಡದೆ ನಿರ್ಲಕ್ಷ್ಯವಹಿಸಿದ್ದಾಾರೆ. ಬೆಳೆಗೆ ನೀರಿನ ಅವಶ್ಯಕತೆ ಇದೆ. ಕೂಡಲೇ ಕಾಲುವೆ ದುರಸ್ತ ಮಾಡಿ ಹೊಲಗಳಿಗೆ ನೀರು ಹರಿಸಬೇಕು. ಇಲ್ಲವಾರೇ ನೀರಾವರಿ ಇಲಾಖೆಯ ಮುಂದೆ ಪ್ರತಿಭಟನೆ ರೈತರು ಪ್ರತಿಭಟನೆ ಮಾಡುತ್ತೇವೆ.
– ಹನುಮಂತ ,ಶಾವಂತಗಲ್ ಗ್ರಾಾಮದ ರೈತ.
ಕೋಟ್ 2 :
ಗುಂಡಿ ಬಿದ್ದ ಬಗ್ಗೆೆ ಮಾಹಿತಿ ಇದ್ದಿಲ್ಲ ಸ್ಥಳಕ್ಕೆೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಒಂದು ವಾರದೊಳಗೆ ಕಾಲುವೆಯನ್ನು ದುರಸ್ತಿಿಗೊಳಿಸಿ ಬೆಳೆಗಳಿಗೆ ನೀರು ಹರಿಸಲಾಗುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ.
– ಮನೋಹರ್ ಜಾಧವ್ ,ಎಇಇ ಕೆಬಿಜೆಎನ್ಎಲ್ ಚಿಕ್ಕ, ಹೊನ್ನಕುಣಿ,
ಕೆಬಿಜೆಎನ್ಎಲ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಸಂಕಷ್ಟಕ್ಕೆ ಸಿಲುಕಿದ ರೈತರು

