ಸುದ್ದಿಮೂಲ ವಾರ್ತೆ ರಾಯಚೂರು, ಜ.14:
ಮಕರ ಸಂಕ್ರಾಾಂತಿಯ ಅಂಗವಾಗಿ ರಾಯಚೂರಿನ ವಿವಿಧ ಬಡಾವಣೆಯ ಯುವತಿಯರು, ಮಹಿಳೆಯರು ಬಣ್ಣಬಣ್ಣದ ರಂಗೋಲಿ ಹಾಕಿ ಭೋಗಿ ಆಚರಿಸಿದರು.
ಇಂದು ನಗರದ ಕಾಕತೀಯ, ಬ್ರೇಸ್ತವಾರ ಪೇಟೆ ಹಾಗೂ ವಿವಿಧ ಕಡೆಯ ಮನೆಗಳ ಮುಂದೆ ಮಹಿಳೆಯರು ಸಗಣಿಯಿಂದ ತಳಿರು ಹಾಕಿ ಬಣ್ಣಬಣ್ಣದ ರಂಗೋಲಿ ಹಾಕಿರುವುದು ಗಮನ ಸೆಳೆಯಿತು.
ಅಲ್ಲದೆ, ನಗರದ ರೈನ್ಬೋ ಪಬ್ಲಿಿಕ್ ಶಾಲೆಯಲ್ಲಿ ಮಕ್ಕಳು ಭೋಗಿಅಂಗವಾಗಿ ಕಟ್ಟಿಿಗೆ ಗೂಡಿಗೆ ಕಿಚ್ಚು ಹಚ್ಚಿಿ ನೃತ್ಯ ಮಾಡಿ ಸಂಕ್ರಾಾಂತಿಯ ಸಂಭ್ರಮ ಆಚರಿಸಿದರು.
ನಗರದ ಮಾರುಕಟ್ಟೆೆಯಲ್ಲಿ ಬೆಲೆ ಏರಿಕೆಯ ಮಧ್ಯೆೆಯೂ ವಿವಿಧ ತರಕಾರಿ, ಹಣ್ಣು ,ಕಬ್ಬುಘಿ, ಕುಂಬಳಕಾಯಿ, ಹೂವು ಖರೀದಿಸುವಲ್ಲಿ ನಿರತವಾಗಿದ್ದರು.
ಸಂಕ್ರಾಾಂತಿ ಸಂಭ್ರಮ : ಗಮನ ಸೆಳೆದ ಚಿತ್ತಾರದ ರಂಗೋಲಿ

