ಸುದ್ದಿಮೂಲ ವಾರ್ತೆ ರಾಯಚೂರು, ಜ.14:
ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ಜಯಂತಿ ಆಚರಣೆಗೆ ಯಾವೊಬ್ಬ ಹಿರಿಯ ಅಧಿಕಾರಿಗಳು ಆಗಮಿಸದೆ ನಿರ್ಲಕ್ಷಿಿಸಿದ್ದನ್ನು ಖಂಡಿಸಿ ಭೋವಿ ವಡ್ಡರ ಸಮಾಜದ ಮುಖಂಡರು ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದ ವೇದಿಕೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋೋಶ ವ್ಯಕ್ತಪಡಿಸಿದರು.
ಇಂದು ಜಿಲ್ಲಾಾಡಳಿತದಿಂದ ಹಮ್ಮಿಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಮಾತ್ರ ಶಾಸಕರು, ಅಧಿಕಾರಿಗಳು ಮಾಲಾರ್ಪಣೆ ಮಾಡಿ, ಮೆರವಣಿಗೆಗೆ ಚಾಲನೆ ನೀಡಿ ತಮ್ಮ ತಮ್ಮ ಕೆಲಸಗಳಿಗೆ ಹೊರಟು ಹೋಗಿದ್ದರು.
ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಜಯಂತಿಯ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತುಘಿ.
ಆ ಕಾರ್ಯಕ್ರಮದ ವೇದಿಕೆಯಲ್ಲಿ ತಹಶೀಲ್ದಾಾರ್ ಸುರೇಶ ವರ್ಮಾ ಹೊರತು ಪಡಿಸಿದರೆ ಯಾವೊಬ್ಬ ಅಧಿಕಾರಿ ಕಾಣದ ಕಾರಣ ಸಮಾಜದವರು ವೇದಿಕೆ ಮುಂಭಾಗದಲ್ಲಿ ಭೋವಿ ವಡ್ಡರ ಸಮಾಜದವರು ತೀವ್ರ ಆಕ್ರೋೋಶ ವ್ಯಕ್ತಪಡಿಸಿ ಧರಣಿ ಆರಂಭಿಸಿದರು.
ಮಾಹಿತಿ ಪಡೆದು ಸ್ಥಳಕ್ಕೆೆ ಶಾಸಕ ಡಾ.ಶಿವರಾಜ ಪಾಟೀಲ, ಎಡಿಸಿ ಶಿವಾನಂದ, ಎಸ್ಪಿ ಅರುಣಾಂಗ್ಷು ಗಿರಿ, ಉಪ ಆಯುಕ್ತೆೆ ಸಂತೋಷರಾಣಿ ಆಗಮಿಸಿ ಸಮಾಜದ ಮುಖಂಡರ ಮನವೊಲಿಸಲು ಪ್ರಯತ್ನಿಿಸಿದರಾದರೂ, ಆಗಮಿಸದೆ ಇರುವುದಕ್ಕೆೆ ತಮ್ಮ ತೀವ್ರ ಬೇಸರ ವ್ಯಕ್ತಪಡಿಸಿದರು.
ಪ್ರತಿ ವರ್ಷವೂ ತಳ ಸಮುದಾಯದ ಕುಲದೈವ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಗೆ ಅಧಿಕಾರಿಗಳಷ್ಟೆೆ ಅಲ್ಲ ಜನಪ್ರತಿನಿಧಿಗಳೂ ಗೈರಾಗಿ ಅವಮಾನಿಸುತ್ತಿಿದ್ದೀರಿ. ಹಾಗಿದ್ದರೆ ಸರ್ಕಾರದಿಂದ ಆಚರಿಸುವ ಉದ್ದೇಶವೇನು ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ಜಯಂತಿ ಅಧಿಕಾರಿಗಳ ಗೈರು, ಭೋವಿ ಸಮಾಜದವರ ಪ್ರತಿಭಟನೆ

