ಸುದ್ದಿಮೂಲ ವಾರ್ತೆ ಕೊಪ್ಪಳ, ಜ.15:
ಸರಕಾರ ಬಡವರಿಗಾಗಿ ನೀಡಿರುವ ಯೋಜನೆಗಳು ಅವರಿಗೆ ತಲುಪಬೇಕಾದರೆ ಬಿಪಿಎಲ್ ಕಾರ್ಡ್ ಬೇಕು. ಕಳೆದ ಹಲವು ವರ್ಷಗಳಿಂದ ಹೊಸಪಡಿತರ ಚೀಟಿ ನೀಡುತ್ತಿಿಲ್ಲ. ಪಡಿತರ ಚೀಟಿಯಲ್ಲಿಯ ತಿದ್ದುಪಡಿಗೆ ತಿಂಗಳಿಗೊಮ್ಮೆೆ ಅವಕಾಶ ನೀಡಿದರೂ ಸರ್ವರ್ ಸಮಸ್ಯೆೆ ಇಲ್ಲಿಯವರೆಗೂ ಬಿಪಿಎಲ್ ಕಾರ್ಡ್ ಇಲ್ಲದ ಕುಟುಂಬಗಳಿವೆ. ಅವರಿಗೆ ಗೃಹಲಕ್ಷ್ಮಿಿಯ ಹಣವು ಬರುತ್ತಿಿಲ್ಲ.
ನಿತ್ಯ ತಲೆಯ ಮೇಲೆ ಪ್ಲಾಾಸ್ಟಿಿಕ್ ಬುಟ್ಟಿಿ ಹೊತ್ತುಕೊಂಡು , ಕಸಬರಗಿ ಮಾರಾಟ, ಮಕ್ಕಳ ಆಟಿಕೆ, ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಮಾರಾಟ ಮಾಡಿ ಹೊಟ್ಟೆೆ ತುಂಬಿಸಿಕೊಳ್ಳುವ ಕುಟುಂಬಗಳಿವೆ. ಕೊರಮ ಜನಾಂಗಕ್ಕೆೆ ಸೇರಿದ ಈ ಕುಟುಂಬದ ಮಹಿಳೆಯರು ದುಡಿಮೆಯನ್ನೆೆ ನಂಬಿಕೊಂಡು ಬದುಕುತ್ತಿಿದ್ದಾಾರೆ. ಅವರಿಗೆ ಸರಕಾರದ ಯಾವುದೇ ಸೌಲಭ್ಯ ಸಿಗುತ್ತಿಿಲ್ಲ. ಕಾರಣ ಇವರಿಗೆ ಬಿಪಿಎಲ್ ಕಾರ್ಡ್ ಇಲ್ಲ. ಬಿಪಿಎಲ್ ಕಾರ್ಡ್ಇಲ್ಲದೆ ಸಮಸ್ಯೆೆ ಎದುರಿಸುತ್ತಿಿದ್ದಾಾರೆ.
ಕೊಪ್ಪಳ ನಗರದಲ್ಲಿಯ ಗಾಂಧಿನಗರದಲ್ಲಿ ವಾಸವಾಗಿರುವ ಒಟ್ಟು 350 ಕುಟುಂಬಗಳಿವೆ. ಅವರಲ್ಲಿ 150 ಅಧಿಕ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಇಲ್ಲ. ಬಿಪಿಎಲ್ ಕಾರ್ಡ್ ಗಾಗಿ ಅಲೆದರೂ ಅವರಿಗೆ ಕಾರ್ಡ್ ಮಾಡಿಸಲು ಆಗುತ್ತಿಿಲ್ಲ. ಕಳೆದ ನಾಲೆ್ಕೈೈದು ವರ್ಷದಿಂದ ಹೊಸ ಪಡಿತರ ಚೀಟಿ ಮಾಡುತ್ತಿಿಲ್ಲ. ಇನ್ನೂ ಕೆಲವರು ಬೇರೆ ಊರಿನಿಂದ ಬಂದು ಇಲ್ಲಿ ವಾಸವಾಗಿ 10-15 ವರ್ಷವಾಗಿದೆ. ಮನೆಗೆ ಹೊಸ ಸದಸ್ಯರು ಆಗಮನವಾಗಿದೆ. ಸೊಸೆ, ಮಕ್ಕಳ ಹೆಸರು ಸೇರ್ಪಡೆ ಮಾಡಲು ಆಗುತ್ತಿಿಲ್ಲ. ಪಡಿತರ ಚೀಟಿ ತಿದ್ದುಪಡಿಗೆ ಇತ್ತೀಚೆಗೆ ಸರಕಾರ ತಿಂಗಳಿಗೊಮ್ಮೆೆ ಅವಕಾಶ ನೀಡುತ್ತಿಿದೆ. ಒಂದು ದಿನ ತಿದ್ದುಪಡಿಗೆ ಕಾಯುವ ಮಹಿಳೆಯರು ಸರ್ವರ್ ಸಮಸ್ಯೆೆಯಿಂದಾಗಿ ತಿದ್ದುಪಡಿಯಾಗುತ್ತಿಿಲ್ಲ. ನಿತ್ಯ ಅಲೆದಾಡಿ ವ್ಯಾಾಪಾರ ಮಾಡದೆ ಬದುಕಲು ಆಗುತ್ತಿಿಲ್ಲ, ತಮ್ಮ ಪಡಿತರ ಚೀಟಿ ತಿದ್ದುಪಡಿಗಾಗಿ ಕಾಯಿಯುವದಕ್ಕೆೆ ಕೆಲಸ ಬಿಟ್ಟು ಇರಲು ಆಗುತ್ತಿಿಲ್ಲ. ಇದರಿಂದಾಗಿ ಬೇಸತ್ತು ಬಿಪಿಎಲ್ ಚೀಟಿಯೇ ಬೇಡ ಎನ್ನುವಂತಾಗಿದೆ ಎನ್ನುತ್ತಾಾರೆ ಮಹಿಳೆಯರು.
ನಗರಸಭೆಯ ವ್ಯಾಾಪ್ತಿಿಯಲ್ಲಿರುವ ಈ ಬಡಾವಣೆಯ ಜನತೆಯು ಪ್ರತಿ ಚುನಾವಣೆಯ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೆೆ ತಂದರೂ ಪ್ರಯೋಜನವಾಗಿಲ್ಲ. ಕೊಪ್ಪಳ ತಹಸೀಲ್ದಾಾರ ಈ ಬಡಾವಣೆಗೆ ಆಗಮಿಸಿ ಇವರ ಸಮಸ್ಯೆೆಗೆ ಸ್ಪಂದಿಸಬೇಕೆಂದು ಬಡಾವಣೆಯ ಜನತೆ ಆಗ್ರಹಿಸಿದ್ದಾಾರೆ.
ಈ ಬಗ್ಗೆೆ ಪ್ರತಿಕ್ರಿಿಯಿಸಿದ ಶಾಸಕ ರಾಘವೇಂದ್ರ ಹಿಟ್ನಾಾಳ ಸರಕಾರ ಹೊಸ ಪಡಿತರ ಚೀಟಿ ನೀಡುತ್ತಿಿಲ್ಲ. ಸರ್ವರ್ ಸಮಸ್ಯೆೆಯದ್ದು ಗಮನಕ್ಕೆೆ ಬಂದಿದೆ. ಅಧಿವೇಶನದಲ್ಲಿ ಸರಕಾರದ ಗಮನಕ್ಕೆೆ ತರುತ್ತೇನೆ ಎಂದು ಹೇಳಿದ್ದಾಾರೆ.
ಸರಕಾರದ ಯೋಜನೆಗಳಿಗೆ ಮುಖ್ಯವಾಗಿ ಬೇಕಾಗಿರುವುದು ಬಿಪಿಎಲ್ ಕಾರ್ಡ್. ಇತ್ತೀಚೆಗೆ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದ ಸರಕಾರ ವಿರೋಧದ ನಂತರ ರದ್ದುನ್ನು ಕೈ ಬಿಟ್ಟರು. ಇದಕ್ಕೆೆ ಆಸಕ್ತಿಿ ವಹಿಸಿದ ಸರಕಾರ ಬಡವರಿಗೆ ಅವಶ್ಯವಾಗಿರುವ ಬಿಪಿಎಲ್ ಕಾರ್ಡ್ ಮಾಡಿಸಲು ನಿರಾಸಕ್ತಿಿ ವಹಿಸಿದೆ ಎಂದು ಜನತೆ ಆರೋಪಿಸಿದ್ದಾಾರೆ.

