ಸುದ್ದಿಮೂಲ ವಾರ್ತೆ ಔರಾದ್, ಜ.15:
ಪಟ್ಟಣದ ಆದರ್ಶ ವಿದ್ಯಾಾಲಯ ಸಮೀಪದ ಅಲೆಮಾರಿ ಜನಾಂಗದ ಪುಲುಬಾಯಿ ಹಿಮತ್ ವಾಘಮಾರೆ ಅವರ ಗುಡಿಸಲು ಇತ್ತೀಚೆಗೆ ಆಕಸ್ಮಿಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಅಲೆಮಾರಿ ಕುಟುಂಬ ಸಂಕಷ್ಟಕ್ಕೆೆ ಸಿಲುಕಿರುವ ಸುದ್ದಿ ತಿಳಿದ ತಕ್ಷಣ ಸುಭಾಷ್ ಚಂದ್ರ ಬೋಸ್ ಯುವಕ ಸಂಘದ ಕಾರ್ಯಕರ್ತರು ಸ್ಥಳಕ್ಕೆೆ ಭೇಟಿ ನೀಡಿ ನೆರವು ನೀಡಿದ್ದಾರೆ.
ಸಂಘದ ತಾಲೂಕು ಅಧ್ಯಕ್ಷ ರತ್ನದೀಪ ಕಸ್ತೂರೆ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು ಕುಟುಂಬಕ್ಕೆೆ ಅಗತ್ಯವಿರುವ 25 ಕೆ.ಜಿ ಅಕ್ಕಿಿ, ಅಡುಗೆ ಎಣ್ಣೆೆ, ಉಪ್ಪುು, ಖಾರಾ, ಮಸಾಲಾ ಸೇರಿದಂತೆ ಆಹಾರ ಸಾಮಗ್ರಿಿಗಳ ಕಿಟ್ ವಿತರಿಸಿದೆ.
ಅಲ್ಲದೆ, ಸುಟ್ಟುಹೋದ ಗುಡಿಸಲನ್ನು ಮರು ನಿರ್ಮಿಸಲು ಅಗತ್ಯವಿರುವ ಕಟ್ಟಿಿಗೆ, ತಾಡಪತ್ರಿಿ, ಹಗ್ಗ ಸೇರಿದಂತೆ ಇತರೆ ಸಾಮಗ್ರಿಿಗಳನ್ನು ಒದಗಿಸಿ ಸಂಕಷ್ಟದಲ್ಲಿರುವ ಕುಟುಂಬಕ್ಕೆೆ ಆಸರೆಯಾಗಿ ನಿಂತಿದ್ದಾರೆ. ಸಂಘದ ಈ ಮಾನವೀಯ ಕಾರ್ಯಕ್ಕೆೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುಡಿಸಲಿನಲ್ಲಿದ್ದ ದವಸ ಧಾನ್ಯಗಳು, ದಿನಸಿ ಸಾಮಾಗ್ರಿಿಗಳು, ಬಟ್ಟೆೆ ಬರೆ ಸೇರಿದಂತೆ ಬದುಕಿಗೆ ಅಗತ್ಯವಾಗಿದ್ದ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಇದಲ್ಲದೆ, ಮಗನ ಮದುವೆಗಾಗಿ ಅಕ್ಕಿಿ ಚೀಲದಲ್ಲಿ ಸಂಗ್ರಹಿಸಿಟ್ಟಿಿದ್ದ ಸುಮಾರು 55 ಸಾವಿರ ರೂ. ನಗದು ಹಣವೂ ಬೆಂಕಿಗೆ ಸುಟ್ಟು ನಾಶವಾಗಿದೆ. ಚಳಿಗಾಲದ ಈ ಸಮಯದಲ್ಲಿ ತಲೆಮೇಲೆ ಸೂರು ಇಲ್ಲದೆ, ಆಹಾರ ಧಾನ್ಯಗಳಿಲ್ಲದೆ ಪುಲುಬಾಯಿ ಕುಟುಂಬ ತೀವ್ರ ಸಂಕಷ್ಟಕ್ಕೆೆ ಸಿಲುಕಿದೆ. ಕೂಡಲೇ ತಾಲೂಕು ಆಡಳಿತ ಕುಟುಂಬದ ನೆರವಿಗೆ ಬರಬೇಕು ಎಂದು ಸಂಘದ ಕಾರ್ಯಕರ್ತರು ಒತ್ತಾಾಯಿಸಿದ್ದಾರೆ.
ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಸುನಿಲ ಜಿರೋಬೆ, ದಲಿತ ಸೇನೆ ತಾಲೂಕು ಅಧ್ಯಕ್ಷ ಸುನಿಲ ಮಿತ್ರಾಾ, ಮಾಜಿ ಯುವ ಕಾಂಗ್ರೆೆಸ್ ಅಧ್ಯಕ್ಷ ದತ್ತಾಾತ್ರಿಿ ಬಾಪುರೆ, ಎನ್ ಎಸ್ ಯುಐ ತಾಲೂಕು ಅಧ್ಯಕ್ಷ ಚಂದು ಡಿಕೆ, ಸುಭಾಷ್ ಚಂದ್ರಬೋಸ್ ಯುವಕ ಸಂಘದ ಕಾರ್ಯದರ್ಶಿ ವಿಶ್ವದೀಪ ಕಸ್ತೂರೆ, ಅಜಯ ವರ್ಮಾ, ರೋಹಿತ ಕಾಂಬಳೆ, ಆನಂದ ಕರಬಾಳೆ ಸೇರಿದಂತೆ ಸೇರಿದಂತೆ ಅನೇಕರಿದ್ದರು.
ಬೆಂಕಿಗಾಹುತಿಯಾದ ಗುಡಿಸಲು : ಸುಭಾಷ್ ಚಂದ್ರ ಭೋಸ್ ಸಂಘದಿಂದ ನೆರವು

