ಸುದ್ದಿಮೂಲ ವಾರ್ತೆ ರಾಯಚೂರು, ಜ.14:
ವಿದ್ಯಾಾರ್ಥಿಗಳ ಬಹುಮುಖ್ಯ ಘಟ್ಟ ಸ್ನಾಾತಕೋತ್ತರ ಪದವಿಯಾಗಿದ್ದು, ಜ್ಞಾಾನ, ಸಂಶೋಧನೆ ಮತ್ತು ಕ್ರೀಯಾಶೀಲ ಚಟುವಟಿಕೆಗಳು ಅಗತ್ಯವಾಗಿವೆ ಎಂದು ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಕುಲಸಚಿವ ಡಾ.ಎ.ಚನ್ನಪ್ಪ ಉದ್ಘಾಾಟಕ ನುಡಿಗಳನ್ನಾಾಡಿದರು.
ವಿಶ್ವವಿದ್ಯಾಾಲಯದ ಇತಿಹಾಸ ವಿಭಾಗದ ವತಿಯಿಂದ ಬುಧವಾರ ಪ್ರಥಮ ವರ್ಷದ ವಿದ್ಯಾಾರ್ಥಿಗಳಿಗೆ ದ್ವಿಿತೀಯ ವರ್ಷದ ವಿದ್ಯಾಾರ್ಥಿಗಳಿಂದ ಸ್ವಾಾಗತ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು, ವಿದ್ಯಾಾರ್ಥಿಗಳು ತಮ್ಮ ಚಿಂತನೆಗಳು ಏನಿದೆ ಹಾಗೂ ಸಮಾಜದಲ್ಲಿ ಹೇಗೆ ಬದುಕಬೇಕು ಮುಂದಿನ ಜೀವನದ ದಾರಿಯ ಮಾರ್ಗವನ್ನು ಹೇಗೆ ಕಂಡುಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳಲು ಬೆಳಕನ್ನು ನೀಡುವುದು ವಿಶ್ವವಿದ್ಯಾಾಲಯ. ಹೆಚ್ಚಿಿನ ಸಂಖ್ಯೆೆಯಲ್ಲಿ ಸ್ನಾಾತಕ ಪದವಿಯನ್ನು ತೇರ್ಗಡೆ ಹೊಂದಿದ ವಿದ್ಯಾಾರ್ಥಿಗಳು ಕಡಿಮೆ ಸಂಖ್ಯೆೆಯಲ್ಲಿ ಸ್ನಾಾತಕೋತ್ತರ ಪದವಿಯನ್ನು ವ್ಯಾಾಸಾಂಗ ಮಾಡಲು ವಿಶ್ವವಿದ್ಯಾಾಲಯದ ಮೆಟ್ಟಿಿಲನ್ನು ಹತ್ತಿಿದ ನೀವುಗಳು ವಿಶ್ವವಿದ್ಯಾಾಲಯದಲ್ಲಿ ಲಭ್ಯವಿರುವ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ಸೌಹಾರ್ದತೆಯಿಂದ ಜ್ಞಾಾನಾರ್ಜನೆ ಮಾಡಿಕೊಳ್ಳುವುದು, ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆೆ ಉತ್ತಮ ಪ್ರಜೆಗಳಾಗಿ ಬಾಳುವುದು ತಮ್ಮ ಜವಾಬ್ದಾಾರಿಯಾಗಿದೆ ಜ್ಞಾಾನವನ್ನು ಹಂಚುವ ಮಹತ್ತರ ಕೆಲಸ ಶಿಕ್ಷಕರು ಮಾಡುತ್ತಾಾರೆ. ಜ್ಞಾಾನ ಕೊಟ್ಟಂತಹ ಗುರುವಿನ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿಿ ಮಂಡಳಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ ಮಾತನಾಡಿ, ಐತಿಹಾಸಿಕ ಸ್ಥಳಗಳು ನಮ್ಮ ಭಾಗದಲ್ಲಿ ಹೆಚ್ಚು ಇರುವುದರಿಂದ ಸಂಶೋಧನೆ ಕೈಗೊಳ್ಳುವುದರಿಂದ ಸಾಕಷ್ಟು ಅವಕಾಶಗಳು ದೊರೆಯುತ್ತವೆ ಎಂದು ವಿದ್ಯಾಾರ್ಥಿಗಳಿಗೆ ಶುಭಕೋರಿದರು.
ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ ಮಾತನಾಡಿದರು. ವೇದಿಕೆ ಮೇಲೆ ಇತಿಹಾಸ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಕೆ.ವೆಂಕಟೇಶ್ ಉಪಸ್ಥಿಿತರಿದ್ದರು. ಕಾರ್ಯಕ್ರಮದಲ್ಲಿ ವಿಭಾಗದ ಅತಿಥಿ ಉಪನ್ಯಾಾಸಕರಾದ ಡಾ.ಪದ್ಮಜಾ ದೇಸಾಯಿ, ಡಾ.ಡಿ.ವಿರೇಶ, ಸೌಮ್ಯ ಜಗ್ಲಿಿ, ರಾಯಚೂರಿನ ಜಿಎ್ಜಿಸಿ ಕಾಲೇಜಿನ ಇತಿಹಾಸ ಉಪನ್ಯಾಾಸಕ ಕೃಷ್ಣ ವಿವಿಧ ವಿಭಾಗಗಳ ಉಪನ್ಯಾಾಸಕರು, ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ವಿಭಾಗದ ಸಂಯೋಜಕರಾದ ಡಾ.ಮಂಜುನಾಥ.ಕೆ ಪ್ರಾಾಸ್ತಾಾವಿಕ ಮಾತನಾಡಿದರು. ಲಕ್ಷ್ಮೀ ಪ್ರಾಾರ್ಥಿಸಿದರು, ಸಂಗೀತಾ ನಾಯಕ ನಿರೂಪಿಸಿದರೆ, ದೇವರಾಜ ಬಂಗಾರಿ ಸ್ವಾಾಗತಿಸಿದರು. ಗೋವಿಂದರೆಡ್ಡಿಿ ವಂದಿಸಿದರು.
ವಾಲ್ಮೀಕಿ ವಿವಿಯ ಇತಿಹಾಸ ಅಧ್ಯಯನ ವಿಭಾಗದಲ್ಲಿ ಸ್ವಾಗತ ಕಾರ್ಯಕ್ರಮ ಜ್ಞಾನ, ಸಂಶೋಧನೆಗೆ ಸ್ನಾತಕೋತ್ತರ ಪದವಿ ಅಗತ್ಯ : ಡಾ.ಎ.ಚನ್ನಪ್ಪ

