ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.14:
ಗಣರಾಜ್ಯೋೋತ್ಸವ ಆಚರಣೆ ಹಾಗೂ ತಾಲೂಕಿನ ತೊಂಡಿಹಾಳ ಗ್ರಾಾಮದ ಹುಲಿಗೆಮ್ಮ ದೇವಿ ಜಾತ್ರೆೆಯ ಪೂರ್ವಭಾವಿ ಸಭೆ ಬುಧವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ಜರುಗಿತು.
ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಹಾಯಕ ಆಯುಕ್ತ ಬಸವಣ್ಣೆೆಪ್ಪ ಕಲಶೆಟ್ಟಿಿ ಅವರು, ಗಣರಾಜ್ಯೋೋತ್ಸವ ಸಂಸ್ಕೃತಿ ಕಾರ್ಯಕ್ರಮಗಳಲ್ಲಿ ಗ್ರಾಾಮೀಣ ಭಾಗದ ಮಕ್ಕಳಿಗೆ ಅವಕಾಶ ಕಲ್ಪಿಿಸಬೇಕು ಹಾಗೂ ಕಾರ್ಯಕ್ರಮಕ್ಕೆೆ ಬರುವ ವಿದ್ಯಾಾರ್ಥಿಗಳಿಗೆ ಸರಿಯಾಗಿ ನೀರಿನ ವ್ಯವಸ್ಥೆೆ ಕೈಗೊಳ್ಳಬೇಕು ಬೆ. 10.30 ಗಂಟೆಯೊಳಗೆ ಕಾರ್ಯಕ್ರಮ ಪೂರ್ಣಗೊಳಿಸಿ ಕಾರ್ಯಕ್ರಮದಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವ ಜತೆಗೆ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಾಯವಾಗಿ ಭಾಗವಹಿಸಲು ಸೂಚಿಸಿದರು.
ನಂತರ ತೊಂಡಿಹಾಳ ಗ್ರಾಾಮದ ಹುಲಿಗೆಮ್ಮದೇವಿ ಜಾತ್ರೆೆಯ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ ಜಾತ್ರೆೆಯಲ್ಲಿ ದೇವದಾಸಿ ಪದ್ಧತಿ ನಡೆಯದಂತೆ ಕಟ್ಟುನಿಟ್ಟಿಿನ ಎಚ್ಚರವಹಿಸಬೇಕು, ಭಕ್ತರ ಸುರಕ್ಷತೆ, ಕುಡಿವನೀರು, ಸ್ವಚ್ಛತೆ ವ್ಯವಸ್ಥೆೆ ನದಿ ದಂಡೆಗೆ ಜನರು ತೆರಳದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿಿನ ನಿಗಾವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ರೈತಸಂಘದ ಜಿಲ್ಲಾಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತೊಂಡಿಹಾಳ ಗ್ರಾಾಮಕ್ಕೆೆ ತೆರಳಲು ಸೂಕ್ತ ರಸ್ತೆೆ ವ್ಯವಸ್ಥೆೆ ಇಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಜಾತ್ರೆೆಗೂ ಮುಂಚೆ ರಸ್ತೆೆ ಬದಿ ಜಂಗಲ್ ಕಟಿಂಗ್ ಮತ್ತು ರಸ್ತೆೆ ನಿರ್ಮಾಣ ಕಾರ್ಯಕೈಗೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಜಾತ್ರೆೆಗೆ ಆಗಮಿಸದಂತೆ ಘೇರಾವ್ ಹಾಕಲಾಗುತ್ತದೆ ಎಂದರು.
ಆಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕೂಡಲೆ ರಸ್ತೆೆ ಜಂಗಲ್ ಕಟ್ಟಿಿಂಗ್ ಮಾಡಲು ಎಸಿ ಸೂಚಿಸಿದರು. ಸಭೆಯಲ್ಲಿ ತಹಶೀಲ್ದಾಾರ ಸತ್ಯಮ್ಮ, ತಾ.ಪಂ, ಇಒ ಉಮೇಶ, ಸಿಪಿಐ ಹೊಸಕೇರಪ್ಪ, ಪುರಸಭೆ ಸಿಓ ನಟರಾಜ, ಅಬಕಾರಿ ಅಧಿಕಾರಿ ಲಕ್ಷ್ಮಿಿ, ಸಮಾಜ ಕಲ್ಯಾಾಣ ಇಲಾಖೆ ಅಧಿಕಾರಿ ರವಿ ಉಪ್ಪಾಾರ, ಹಟ್ಟಿಿ ಪಟ್ಟಣ ಪಂಚಾಯತ ಸಿಓ ಜಗನ್ನಾಾಥ ಕುಲಕರ್ಣಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ತೊಂಡಿಹಾಳ ಗ್ರಾಮ ಹುಲಿಗೆಮ್ಮ ದೇವಿ ಜಾತ್ರೆಯ ಪೂರ್ವಭಾವಿ ಸಭೆ ದೇವದಾಸಿ ಪದ್ದತಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸಹಾಯಕ ಆಯುಕ್ತ ಸೂಚನೆ

