ಸುದ್ದಿಮೂಲ ವಾರ್ತೆ ಬಳಗಾನೂರು, ಜ.14:
ಸಮೀಪದ ಉಟಕನೂರು ಶ್ರೀಅಡವಿಸಿದ್ದೇಶ್ವರ ಶ್ರೀಮಠದಲ್ಲಿ ಶ್ರೀಮರಿಬಸವಲಿಂಗ ಶಿವಯೋಗಿಯ ಜಾತ್ರಾಾಮಹೋತ್ಸವ ನಿಮಿತ್ತ ಜರುಗಿದ ಮಹಾರಥೋತ್ಸವದ 5 ನೇ ದಿನದ ಕಳಸಇಳಿಸುವ ಕಾರ್ಯಕ್ರಮ ಕಡುಬಿನ ಕಾಳಗ, ಹಾಗೂ ಮಕರ ಸಂಕ್ರಾಾಂತಿಯ ಉತ್ತರಾಯಣ ಪುಣ್ಯಕಾಲದ ಸಮ್ಮಿಿಲನದಲ್ಲಿ ಜ.15 ಗುರುವಾರ ಸಾಯಂಕಾಲ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀಮರಿಬಸವರಾಜ ದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಭಕ್ತರಿಗೆ ಮಕರ ಸಂಕ್ರಾಾಂತಿ ಶುಭಾಶಯ ಕೊರುತ್ತಾಾ ಹೊಸ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಾಂತಿ ವಿಶೇಷವಾಗಿ ರೈತರ ಕೃಷಿಬದುಕಿನ ಮಹತ್ವದ ಸುಗ್ಗಿಿ ಹಬ್ಬವಾಗಿದೆ. ದೇಶದ ಹಲವೆಡೆ ವಿವಿಧ ರೀತಿಯಲ್ಲಿ ಆಚರಿಸುವ ಈ ಹಬ್ಬ ನಮ್ಮ ಕರ್ನಾಟಕದಲ್ಲಿ ಎರಡು ರೀತಿಯಗಿ ಆಚರಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಎಳ್ಳು ಮಿಶ್ರತ ನೀರಿನ ಅಭ್ಯಂಜನ ಸ್ನಾಾನ ಮಾಡಿ ಸೇಂಗಾ ಎಳ್ಳು ಹೋಳಿಗೆ ಸಜ್ಜೆೆ ರೊಟ್ಟಿಿ ಜೊತೆಗೆ ರೈತರು ಬೆಳೆಯುವ ನವ ಧಾನ್ಯ ನವ ಪಲ್ಯ ನವ ತರಕಾರಿ ಸೇರಿಸಿ ವಿಶಿಷ್ಟ ಬರ್ತಾ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿ ಭೂ ತಾಯಿ ಮುಂದಿನ ಮಳೆ-ಬೆಳೆ ಸಮೃದ್ಧಿಿಯಾಗಿ ಆಗಿಎಲ್ಲರಿಗೂ ಒಳಿತು ಆಗಲೆಂದು ಪ್ರಾಾರ್ಥಿಸಿ ಆಚರಿಸುತ್ತಾಾರೆ ಎಂದರು.
ಇಂತಹ ಶುಭಗಳಿಗೆಯಲ್ಲಿ ಕಡುಬಿನ ಕಾಳಗದ ಶ್ರೀಗಳ ಮಹಾರಥೋತ್ಸವ ನಡೆಯುತ್ತಿಿರವುದು ಶುಭ ಪ್ರದವಾಗಿದೆ. ಸುತ್ತ ಮುತ್ತಲಿನ ಸರ್ವ ಸದ್ಭಕ್ತರು ತನು ಮನ ಧನದಿಂದ ಇದರಲ್ಲಿ ಪಾಲ್ಗೊೊಂಡು ಪುನೀತರಾಗಬೇಕು ಎಂದು ತಿಳಿಸಿದರು.
ಉಟಕನೂರು;ಶ್ರೀಅಡವಿಸಿದ್ದೇಶ್ವರ ಮಠದಲ್ಲಿ ಜ.15 ರಂದು ಕಡುಬಿನ ಕಾಳಗ

