ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.14:
ತಾಲೂಕಿನ ನಾರಾಯಣಪುರ ಬಲದಂಡೆ ವಿತರಣಾ ಕಾಲುವೆ ಹಾಗೂ ಉಪಕಾಲುವೆಗಳ ಕಾಮಗಾರಿ ಸಂಪೂರ್ಣವಾಗದೆ ಆತುರದಲ್ಲಿ ಅವೈಜ್ಞಾಾನಿಕವಾಗಿ ಸ್ಕಾಾಡ್ಗೇಟ್ ಅಳವಡಿಕೆಗೆ ಕಾಮಗಾರಿ ನಡೆದಿದ್ದು ತಕ್ಷಣ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕಾಧ್ಯಕ್ಷ ದುರ್ಗಾಪ್ರಸಾದ್ ರೆಡ್ಡಿಿ ನೇತೃತ್ವದಲ್ಲಿ ರೈತರು ಮಂಗಳವಾರ ಎಸಿ ಕಚೇರಿಗೆ ಮನವಿ ಸಲ್ಲಿಸಿದರು.
ಕಳೆದ ವರ್ಷ ವಿತರಣಾ ಕಾಲುವೆ ಹಾಗೂ ಉಪಕಾಲುವೆಗಳ ನವೀಕರಣ ಕಾಮಗಾರಿ ನಿಯಮದ ಪ್ರಕಾರ ಪೂರ್ಣಗೊಳಿಸಿಲ್ಲ, ಕಾಮಗಾರಿ ಪೂರ್ಣವಾದ ಮೇಲೆ ಸ್ಕಾಾಡ್ಗೇಟ್ ಅಳವಡಿಸಬೇಕು. ಅಧಿಕಾರಿಗಳು ನಿಯಮ ಪಾಲಿಸದೆ ಗುತ್ತಿಿಗೆದಾರರ ಜತೆ ಶಾಮೀಲು ಆಗಿ ಸರ್ಕಾರದ ಹಣ ಲೂಟಿ ಮಾಡುವ ಹುನ್ನಾಾರ ನಡೆಸಿದ್ದಾಾರೆ. ಅವೈಜ್ಞಾಾನಿಕ ಕಾಮಗಾರಿ ನಡೆದಿದ್ದು ರೈತರು ಸಂಕಷ್ಟಕ್ಕೆೆ ಒಳಗಾಗಲಿದ್ದು ಗೇಟ್ ಅಳವಡಿಕೆ ಕಾಮಗಾರಿ ನಿಲ್ಲಿಸಬೇಕು ಇಲ್ಲವಾದರೆ ಮುಂಬರುವ ದಿನ ಧರಣಿ ನಡೆಸುವುದಾಗಿ ಸದಾನಂದ, ಬಸವರಾಜ, ಮಹ್ಮದಖಾಜಾ, ನಾಗಪ್ಪ ಪುಣೇದ್, ಲಾಲ್ಸಾಬ್, ಹನುಮಂತ ಹೊಳೆಪ್ಪ, ರಾಮಣ್ಣ ಅರಿಕೇರಾ, ಅಮರೇಶ ಭೂಪೂರ, ಹುಲಗಪ್ಪ, ರಂಗಪ್ಪ, ತಿಮ್ಮಣ್ಣ ನಾಯಕ ಇತರರಿದ್ದರು.
ಬಲದಂಡೆ ಉಪಕಾಲುವೆ ಸ್ಕಾಡಗೇಟ್ ಅವೈಜ್ಞಾನಿಕ ಅಳವಡಿಕೆ ತಡೆಯಲು ರೈತರ ಒತ್ತಾಯ

