ಸುದ್ದಿಮೂಲ ವಾರ್ತೆ ರಾಯಚೂರು, ಜ.14:
ಗಣೇಕಲ್ ಜಲಾಶಯದಿಂದ ರಾಂಪೂರಿಗೆ ಕುಡಿಯುವ ನೀರು ಹರಿಸಲು ವಿತರಣಾ ಕಾಲುವೆ ಸಂಖ್ಯೆೆ: 102ರ ಸುತ್ತಲಿನ ಪ್ರದೇಶದ ವ್ಯಾಾಪ್ತಿಿಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆೆ ಕಾಪಾಡುವ ಹಾಗೂ ಸಾರ್ವಜನಿಕರ ಹಿತದೃಷ್ಟಿಿಯಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ದಿನಾಂಕ:13-01-2026 ರಂದು ಮಧ್ಯರಾತ್ರಿಿ 12 ಗಂಟೆಯಿಂದ ಅನ್ವಯವಾಗುವಂತೆ ದಿನಾಂಕ:19-01-2026 ಮಧ್ಯರಾತ್ರಿಿ 12 ಗಂಟೆಯವರೆಗೂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ಈ ಕಾಲುವೆಯ ಸುತ್ತಮುತ್ತಲಿನ ಪ್ರದೇಶದ ವ್ಯಾಾಪ್ತಿಿಯಲ್ಲಿ 100 ಮೀಟರ್ ಸುತ್ತುವರೆದ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಿತೀಶ್ ಕೆ. ಅವರು ಆದೇಶ ಹೊರಡಿಸಿದ್ದಾರೆ.

