ಸುದ್ದಿಮೂಲ ವಾರ್ತೆ ರಾಯಚೂರು, ಜ.14:
ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ತೊಂಡಿಹಾಳ ಗ್ರಾಾಮದಲ್ಲಿ
ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆೆಯು ಸುಗಮವಾಗಿ ನಡೆಯಲು, ಶಾಂತಿ ಮತ್ತು ಕಾನೂನು ಸುವ್ಯವಸ್ಥೆೆ ಕಾಪಾಡುವ ಹಿತದೃಷ್ಟಿಿಯಿಂದ ಮುಂಜಾಗ್ರತ ಕ್ರಮವಾಗಿ ದಿನಾಂಕ:15-01-2026 ರ ಸಾಯಂಕಾಲ 06ಗಂಟೆಯಿಂದ ದಿನಾಂಕ:19-01-2026ರ ಬೆಳಿಗ್ಗೆೆ 06 ಗಂಟೆಯವರೆಗೆ ತೊಂಡಿಹಾಳ ಗ್ರಾಾಮದ ಸುತ್ತಮುತ್ತಲಿನ ಸುಮಾರು 10 ಕಿ.ಮೀ ವ್ಯಾಾಪ್ತಿಿಯವರೆಗೆ ಅಬಕಾರಿ ಕಾಯ್ದೆೆ 1965 ರ ಕಲಂ. 21 (1) ರನ್ವಯ ಎಲ್ಲಾ ರೀತಿಯ ಮದ್ಯ ತಯಾರಿಕಾ ಘಟಕಗಳು/ಸಾಗಾಣಿಕೆ/ ಮತ್ತು ಸಂಗ್ರಹಣೆ / ಮಾರಾಟ ಮಳಿಗೆಗಳನ್ನು ಬಂದ್ ಇಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಿತೀಶ್ ಕೆ. ಅವರು ಆದೇಶ ಹೊರಡಿಸಿದ್ದಾರೆ.

