ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.17:
ಜಗತ್ತಿಿನಲ್ಲಿ ಯಾವುದೇ ದೇಶದಲ್ಲಿ ದೇಶ ಕಟ್ಟುವ ಕೆಲಸದಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದಿದೆ ಎಂದು ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಅಭಿಪ್ರಾಾಯ ಪಟ್ಟರು.
ಅವರು ಶನಿವಾರ ದೇವದುರ್ಗ ಪ್ರಾಾಥಮಿಕ ಶಾಲಾ ಶಿಕ್ಷಕರ ಹಾಗೂ ಪ್ರೌೌಢಶಾಲಾ ಶಿಕ್ಷಕರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಗುರು ನಮನ ಮತ್ತು ಶಿಕ್ಷಕರ ದಿನಾಚರಣೆ ಕುರಿತು ಮಾತನಾಡುತ್ತಾಾ ಜಗತ್ತಿಿನ ಯಾವುದೇ ದೇಶಗಳಲ್ಲಿ ದೇಶ ಕಟ್ಟುವ ಕೆಲಸ ಮಾಡುವಲ್ಲಿ ಶಿಕ್ಷಕರ ಕೆಲಸ ದೊಡ್ಡದಿದೆ ,ಯಾವದಾದರು ದೇಶ ಅಭಿವೃದ್ಧಿಿ ಯಾಗಿದ್ದರೆ ಅದಕ್ಕೆೆ ಶಿಕ್ಷಣ ಮೂಲ ಕಾರಣ ಎಂದು ಅಭಿಪ್ರಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 51 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಸರ್ಕಾರ ಈ ಹುದ್ದೆಗಳನ್ನು ತುಂಬಿ ಗುಣಮಟ್ಟದ ಶಿಕ್ಷಣಕ್ಕೆೆ ಒತ್ತುಕೊಡಬೇಕು , ಈಗಾಗಲೇ 13 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಿಯೆ ನಡೆದಿದೆ, ಕಲ್ಯಾಾಣ ಕರ್ನಾಟಕದಲ್ಲಿ 5500 ಶಿಕ್ಷಕರ ಹುದ್ದೆಗಳನ್ನು ಬರುವ ಜೂನ್ ಒಳಗೆ ಸರ್ಕಾರ ಭರ್ತಿ ಮಾಡುತ್ತದೆ ಎಂದು ವಿಶ್ವಾಾಸವಿದೆ ಎಂದರು.
ಸೇವೆಯಲ್ಲಿ ಇರುವವರಿಗೆ ಟೆಟ್ ಪರೀಕ್ಷೆ ಬೇಡ ಎಂದು ನಾವು ಸರ್ಕಾರಕ್ಕೆೆ ಮನವಿ ಮಾಡಿದ್ದೇವೆ, ಬಿ ಎಡ್ ಪದವಿಧರಿಗೆ ಪ್ರೌೌಢ ಶಾಲೆಗೆ ಬಡ್ತಿಿ ಕೊಡಬೇಕು, 2005 ರಿಂದ ನೇಮಕಗೊಂಡಿರುವ ಎಲ್ಲಾ ಶಿಕ್ಷಕರಿಗೆ ಹೊಸ ಪಿಂಚಣಿ ತೆಗೆದು ಹಳೆ ಪಿಂಚಣಿ ಜಾರಿ ಮಾಡಬೇಕು, ರಾಜ್ಯದಲ್ಲಿ ಇರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಒದಗಿಸಬೇಕು, ಸರ್ಕಾರಿ ಶಾಲೆಯ ಒಂದರಿಂದ ಪಿಯುಸಿ ವರೆಗಿನ ಎಲ್ಲಾ ಮಕ್ಕಳಿಗೆ ನೋಟ್ಬುಕ್ ಕೊಡಬೇಕು, ರಾಜ್ಯದಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ನಮ್ಮ ಶಿಕ್ಷಕರ ಸಂಘ ಒತ್ತಾಾಯ ಮಾಡುತ್ತದೆ ಎಂದು ತಿಳಿಸಿದರು.
ರಾಜ್ಯ ಎಲ್ಲಾ ಶಿಕ್ಷಕರ ಸಮಸ್ಯೆೆಗಳ ಪರಿಹಾರಕ್ಕಾಾಗಿ ೆಬ್ರವರಿ 19 ರಂದು ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಮಾಡಿ ಮುಖ್ಯಮಂತ್ರಿಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು,
ವಕೀಲ ಬಸನಗೌಡ ದೇಸಾಯಿ, ಎಪಿಎಂಸಿ ಅಧ್ಯಕ್ಷ ಅದನಗೌಡ ಹಾಗೂ ಪ್ರಾಾಸ್ತಾಾವಿಕವಾಗಿ ಕ್ಷೇತ್ರ ಶಿಕ್ಷಣ ಅಧಿಕಾರಿ ಮಲ್ಲಿಕಾರ್ಜುನ ಮಾತನಾಡಿದರು.
ವೇದಿಕೆಯ ಮೇಲೆ ಶಾಸಕಿ ಕರೆಮ್ಮ, ಶಿಕ್ಷಕರ ಸಂಘದ ಅಧ್ಯಕ್ಷ ವಿರುಪನಗೌಡ, ನಿರ್ದೇಶಕ ಪ್ರಕಾಶ ಹೊನ್ನಟಗಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಾಯ ಶಾಖೆ, ಗ್ಯಾಾರಂಟಿ ಅನುಷ್ಠಾಾನಸಮಿತಿ ಅಧ್ಯಕ್ಷ ಲಕ್ಷ್ಮಣ ಜ್ಯೋೋತಿ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ರೆಡ್ಡಿಿ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಮಾಲಿ ಪಾಟೀಲ್, ಇಒ ಬಸವರಾಜ ಹಟ್ಟಿಿ, ತಹಶಿಲ್ದಾಾರರಾದ ನಾಗಮ್ಮ , ಮಾಜ ಕಲ್ಯಾಾಣ ಅಧಿಕಾರಿ ರಾಜಕುಮಾರ, ಪುರಸಭಾ ಮುಖ್ಯ ಅಧಿಕಾರಿ ಹಂಪಯ್ಯ ,ನೇಮಣ್ಣ ,ಭೀಮೋಜಿ ರಾವ್ ಜಗತಾಪ್, ನಾಗಲಕ್ಷ್ಮಿಿ ಪಾಟೀಲ್, ಶಾಂತಗೌಡ ನಾಗರಾಳ, ರಾಮಣ್ಣ ಸುಬೇದಾರ, ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ರಂಗಪ್ಪ ನಾಯಕ ,ಬಸವರಾಜ ಕಟ್ಟಿಿಮನಿ, ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.
ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ ಸ್ವಾಾಗತ ಮಾಡಿದರೆ ,ನಿರೂಪಣೆ ಶಿಕ್ಷಕಿ ಸವಿತಾ ದೇವರಾಜ ಮಾಡಿದರು. ಇದೆ ಸಂದರ್ಭದಲ್ಲಿ ಪ್ರಾಾಥಮಿಕ ಮತ್ತು ಪ್ರೌೌಢಶಾಲಾ ಶಿಕ್ಷಕರಿಗೆ ಹಾಗೂ ಅತಿಥಿ ಶಿಕ್ಷಕರಿಗೆ ಸನ್ಮಾಾನ ಮಾಡಲಾಯಿತು.
ದೇವದುರ್ಗದಲ್ಲಿ ಶಿಕ್ಷಕರ ದಿನಾಚರಣೆ ; ಗುರುವಂದನಾ ಕಾರ್ಯಕ್ರಮ ದೇಶ ಕಟ್ಟುವ ಕೆಲಸದಲ್ಲಿ ಶಿಕ್ಷಕರ ಪಾತ್ರ ಮುಖ್ಯ : ಚಂದ್ರಶೇಖರ ನುಗ್ಗಲಿ

