ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ರೈತರ ಲಾಭದ ಹಪಾಹಪಿತನದಿಂದ ಬಳಸುವ ಅತಿ ರಾಸಾಯನಿಕಗಳಿಂದಾಗಿ ಭೂಮಿ ನಿಸ್ಸಾಾರಗೊಂಡು ತನ್ನ ಸ್ವಾಾಭಾವಿಕ ಉತ್ಪಾಾದನಾ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಕೃಷಿ ವಿಜ್ಞಾಾನಗಳ ವಿವಿ ಸಂಶೋಧನಾ ನಿರ್ದೇಶಕ ಡಾ. ಎ ಅಮರೇಗೌಡ ಕಳವಳ ಪಟ್ಟರು.
ನಗರದ ಕೃಷಿ ವಿವಿಯಲ್ಲಿ ಕ್ರಿಿಭ್ಕೊೊ ಲಿ ಬೆಂಗಳೂರು, ಸಾವಯವ ಕೃಷಿ ಸಂಶೋಧನಾ ಸಂಸ್ಥೆೆ ಮತ್ತು ಕೃಷಿ ಇಲಾಖೆ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ಸಾವಯವ ಮತ್ತು ನೈಸರ್ಗಿಕ ಕೃಷಿಯ ತಂತ್ರಜ್ಞಾಾನಗಳ ಕುರಿತ ರೈತರ ವಿಚಾರ ಸಂಕಿರಣ ಉದ್ಘಾಾಟಿಸಿ ಮಾತನಾಡಿದರು. ಭೂಮಿಯಲ್ಲಿ ಸೂಕ್ಷ್ಮಾಾಣು ಜೀವಿಗಳು ನಾಶವಾಗಿವೆ ಅವುಗಳ ಪುನಶ್ಚೇತನ ಮಾಡುವ ಅಗತ್ಯವಿದೆ ಆದ್ದರಿಂದ ಸಾವಯವ ಮತ್ತು ನೈಸರ್ಗಿಕ ಕೃಷಿಯ ಮೂಲಕ ಮಣ್ಣಿಿನ ಲವತ್ತತೆ ಹೆಚ್ಚಿಿಸಬೇಕಾಗಿದೆ ಮುಖ್ಯವಾಗಿ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಪಶು ಸಂಗೋಪನೆಯೇ ಆಧಾರವೆಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಆರ್ ಚವ್ಹಾಾಣ ವಿವಿ ವಿಸ್ತರಣಾ ನಿರ್ದೇಶಕ ಡಾ. ಎ.ಆರ್ ಕುರುಬರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಎಂ.ಎ ಬಸವಣ್ಣೆೆಪ್ಪ, ನಯೀಮ್ ಹುಸೇನ್ ,ಕ್ರಿಿಭ್ಕೋೋ ಸಂಸ್ಥೆೆಯ ವ್ಯವಸ್ಥಾಾಪಕ ಶಶಿಕುಮಾರ, ಸಹಾಯಕ ಕೃಷಿ ನಿರ್ದೇಶಕಿ ದೀಪಾ ಎಲ್, ಕೃಷಿ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ಸಹಾಯಕ ಅಮರೇಶ ಆಶಿಹಾಳ ಸೇರಿ ರೈತರು, ಅಧಿಕಾರಿಗಳಿದ್ದರು.
ಸಾವಯವ ಮತ್ತು ನೈಸರ್ಗಿಕ ಕೃಷಿ ತರಬೇತಿ ಭೂಮಿ ನಿಸ್ಸಾರಗೊಂಡಿದ್ದು ಪಶು ಸಂಗೋಪನೆಯೇ ಸಾರ ಹೆಚ್ಚಳಕ್ಕೆ ಮದ್ದು – ಡಾ. ಅಮರೇಗೌಡ

