ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ಶ್ರೀ ಮಾದರ ಚನ್ನಯ್ಯ ಸೇವಾ ಸಮಿತಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ಆಯ್ಕೆೆ ಸಭೆಯಲ್ಲಿ ಮಂಚಾಲ ಭೀಮಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆೆ ಮಾಡಲಾಯಿತು.
ನಗರದ ಮನೋರಂಜನ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಾಗಿ ಮಾದಿಗ ಸಮಾಜದ ಹಿರಿಯ ಮುಖಂಡರು ಹಾಗೂ ನಗರಸಭೆಯ ಮಾಜಿ ಸದಸ್ಯರಾದ ಮಂಚಾಲ್ ಭೀಮಣ್ಣ ಇವರನ್ನು ಸೇವಾ ಸಮಿತಿಯ ನಗರ ಅಧ್ಯಕ್ಷರನ್ನಾಾಗಿ ಆಯ್ಕೆೆ ಮಾಡಿ ಘೋಷಣೆ ಮಾಡಲಾಯಿತು.
ಸೇವಾ ಸಮಿತಿಯ ರಾಜ್ಯ ಗೌರವ ಸಲಹೆಗಾರ ರವೀಂದ್ರ ಜಲ್ದಾಾರ ಮಾತನಾಡಿ ಶ್ರೀಮಠದ ಸೇವಾ ಸಮಿತಿಯ ಕಾರ್ಯಯೋಜನೆಗಳು ಮುಂದಿನ ಚಟುವಟಿಕೆಗಳು ಹಾಗೂ ಬಲಿಷ್ಠ ಸಮಾಜ ನಿರ್ಮಿಸಲು ಸೇವಾ ಸಮಿತಿಯ ಪ್ರತಿಯೊಬ್ಬರು ಕಂಕಣ ಬದ್ಧರಾಗಿ ಕೆಲಸ ಮಾಡಬೇಕೆಂದು ಹೇಳಿದರು.
ಇದೇ ವೇಳೆ ನಗರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ನೇಮಕ ಹಾಗೂ ಸೇವಾ ಸಮಿತಿಯ ಕಾರ್ಯ ಯೋಜನೆಗಳು ಮತ್ತು ಚಟುವಟಿಕೆಗಳ ಬಗ್ಗೆೆ ವಿಸ್ತಾಾರವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಜೆ.ಎಂ.ವೀರೇಶ, ಜಿಲ್ಲಾಾಧ್ಯಕ್ಷ ಜೆ.ಎಂ.ವೌನೇಶ ಹಾಗೂ ಮುಖಂಡರು ಸೇರಿದಂತೆ ಹಲವರಿದ್ದರು.
ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ ನಗರ ಅಧ್ಯಕ್ಷರಾಗಿ ಮಂಚಾಲ್ ಭೀಮಣ್ಣ ಆಯ್ಕೆ

