ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ವಿದ್ಯಾಾರ್ಥಿಗಳು ಪಠ್ಯಕ್ಕೆೆ ಮಾತ್ರ ಸೀಮಿತರಾಗದೆ ವಿವಿಧ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಸಾಬೀತು ಪಡಿಸಬೇಕು ಎಂದು ಮಹಾನಗರ ಪಾಲಿಕೆ ಸಹಾಯಕ ಆಯುಕ್ತೆೆ ಸಂತೋಷಿರಾಣಿ ಹೇಳಿದರು.
ನಗರದ ವಿದ್ಯಾಾಭಾರತಿ ಶಿಕ್ಷಣ ಕೇಂದ್ರದಲ್ಲಿ ವಿದ್ಯಾಾ ಮಹೋತ್ಸವ ಸಾಂಸ್ಕೃತಿಕ ವೈಭವ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ವಿದ್ಯಾಾರ್ಥಿಗಳು ಕೇವಲ ಪಠ್ಯಕ್ಕೆೆ ಸೀಮಿತವಾಗದೆ ಇಂತಹ ಸಾಂಸ್ಕೃತಿಕ ವೇದಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕಬೇಕು. ಶಿಕ್ಷಣದ ಜೊತೆಗೆ ಶಿಸ್ತು ಮತ್ತು ಸಂಸ್ಕಾಾರ ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆೆಯ ಅಧ್ಯಕ್ಷ ಡಾ. ರವಿರಾಜೇಶ್ವರ ಮಾತನಾಡಿ, ಸಂಸ್ಥೆೆಯ ಬೆಳವಣಿಗೆ ಮತ್ತು ವಿದ್ಯಾಾರ್ಥಿಗಳ ಸಾಧನೆಯನ್ನು ಶ್ಲಾಾಘಿಸಿದರು. ವಿದ್ಯಾಾಭಾರತಿ ಸಂಸ್ಥೆೆ ಗುಣಮಟ್ಟದ ಶಿಕ್ಷಣಕ್ಕೆೆ ಸದಾ ಬದ್ಧವಾಗಿದೆ ಎಂದು ಹೇಳಿದರು.
ನಂತರ ಶಾಲಾ ವಿದ್ಯಾಾರ್ಥಿಗಳಿಂದ ಜಾನಪದ ನೃತ್ಯ, ನಾಟಕ ಮತ್ತು ಸಮೂಹ ಗೀತೆಗಳು ನೆರೆದಿದ್ದ ಪೋಷಕರ ಹಾಗೂ ಸಾರ್ವಜನಿಕರ ಮನಸೂರೆಗೊಂಡವು.
ವೇದಿಕೆಯ ಮೇಲೆ ಸಂಸ್ಥೆೆಯ ಪದಾಧಿಕಾರಿಗಳಾದ ನಂದಾಪುರ ಶ್ರೀನಿವಾಸ,ವೆಂಕಟೇಶ್ ಮಾನ್ವಿಿಕರ, ಡಾ. ರಾಘವೇಂದ್ರ ರವಿರಾಜನ್ , ರಾಘವೇಂದ್ರ ಚೂಡಾಮಣಿ ಹಾಗೂ ಸದಸ್ಯರು, ಶಿಕ್ಷಕರು, ವಿದ್ಯಾಾರ್ಥಿಗಳಿದ್ದರು.
ಪಠ್ಯದ ಜೊತೆ ಪ್ರತಿಭೆ ಅನಾವರಣಕ್ಕೆ ವೇದಿಕೆ ಬಳಸಿಕೊಳ್ಳಿ- ಸಂತೋಷಿರಾಣಿ

