ಸುದ್ದಿಮೂಲ ವಾರ್ತೆ ಮಾನ್ವಿ, ಜ.17:
ಮಾನ್ವಿಿ ಪಟ್ಟಣದ ದೇವಣ್ಣ ತೋಟದ ಸತ್ಯಸಾಯಿ ಗಾರ್ಡನ್ ಸಭಾಂಗಣದಲ್ಲಿ ಜ.18 ರಂದು ರವಿವಾರ ಬೆಳಿಗ್ಗೆೆ 11 ಗಂಟೆಗೆ ಅಲೆಮಾರಿಗಳ ಬೃಹತ್ ಸಾಂಸ್ಕೃತಿಕ ಕಲಾ ಪ್ರದರ್ಶನ ಮತ್ತು ಸ್ವಾಾಭಿಮಾನ ಸಮಾವೇಶ ಹಮ್ಮಿಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ (ಪ.ಜಾ) ಚನ್ನದಾಸರ್, ಹೊಲೆಯ ದಾಸರ್, ಮಾಲ ದಾಸರಿ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಕಾರ್ಯದರ್ಶಿ ಮಹಾದೇವಪ್ಪ ಮಾಸ್ಟರ್ ತಿಳಿಸಿದರು.
ಶನಿವಾರ ಪತ್ರಿಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ದೇಶದ ಮೂಲ ನಿವಾಸಿಗಳಾದ ಅಲೆಮಾರಿಗಳು ದೇಶದ ಸಾಂಸ್ಕೃತಿಕ, ಇತಿಹಾಸ, ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ನಮ್ಮ ಸಮುದಾಯದವರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದರೂ ಒಳ ಮೀಸಲಾತಿಯಲ್ಲಿ ಶೇ.1 ರಷ್ಟು ಮೀಸಲಾತಿ ನೀಡದೇ ಸರಕಾರ ವಂಚನೆ ಮಾಡಿ ಎಂದರು.
ನ್ಯಾಾಯಮೂರ್ತಿ ನಾಗಮೋಹನ್ ದಾಸ್ ಅಯೋಗವು ನೀಡಿರುವ ಒಳಮೀಸಲಾತಿ ವರದಿಯಂತೆ ನಮ್ಮ ಸಮುದಾಯದವರಿಗೆ ನ್ಯಾಾಯ ಒದಗಿಸುವಂತೆ ಒತ್ತಾಾಯಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸಲು ಹಮ್ಮಿಿಕೊಂಡಿರುವ ಈ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸುವ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಮತ್ತು ಮಾಜಿ ಶಾಸಕರಿಗೆ ನಮ್ಮಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಗುವುದು ಎಂದರು.
ಈ ಸಮಾವೇಶದಲ್ಲಿ ಸಮುದಾಯದ ಪ್ರಶಸ್ತಿಿ ಪುರಸ್ಕೃತರಿಗೆ ಹಾಗೂ ಪ್ರತಿಭಾವಂತ ವಿದ್ಯಾಾರ್ಥಿಗಳಿಗೆ ಸನ್ಮಾಾನ ಮಾಡಲಾಗುವುದು. ಇದರಲ್ಲಿ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ, ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಾಧ್ಯಕ್ಷ ಡಾ.ವಿ.ಚಲಪತಿ, ಕರ್ನಾಟಕ ಜನಪದ ವಿಶ್ವವಿದ್ಯಾಾಲಯ ಸಂಶೋಧನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ ಸೇರಿದಂತೆ ಮಾಜಿ ಶಾಸಕರು, ಗಣ್ಯರು ಭಾಗವಹಿಸುವರು ಎಂದು ಮಹಾದೇವಪ್ಪ ಮಾಸ್ಟರ್ ಮಾಹಿತಿ ನೀಡಿದರು.
ಪತ್ರಿಿಕಾಗೋಷ್ಠಿಿಯಲ್ಲಿ ಯುವ ಘಟಕದ ರಾಜ್ಯಾಾಧ್ಯಕ್ಷ ಬಿ.ಉಮೇಶ ಯಾಪಲದಿನ್ನಿಿ, ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ಹೀರಾ, ಡಿ.ರಾಮಕೃಷ್ಣ, ಎಸ್.ವೆಂಕೋಬ, ನಾಗಪ್ಪ ಬಾಯಿದೊಡ್ಡಿಿ, ಯಲ್ಲಪ್ಪ, ಬಸವರಾಜ, ಪ್ರದೀಪ ರಮೇಶ, ಸೂಗಪ್ಪ ಮುಂತಾದವರು ಉಪಸ್ಥಿಿತರಿದ್ದರು.
ಮಾನ್ವಿಯಲ್ಲಿ ಇಂದು ಅಲೆಮಾರಿಗಳ ಸಾಂಸ್ಕೃತಿಕ, ಸ್ವಾಭಿಮಾನ ಸಮಾವೇಶ-ಮಹಾದೇವಪ್ಪ ಮಾಸ್ಟರ್

