ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ರಾಯಚೂರಿನ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘ ನಿಯಮಿತದ ಚುನಾವಣೆಯಲ್ಲಿ ಅವಿರೋಧವಾಗಿ ಸತತ ಮೂರನೇ ಬಾರಿ ಅಧ್ಯಕ್ಷರಾಗಿ ನಾಗರೆಡ್ಡಿಿ ಹಂಚಿನಾಳ ಹಾಗೂ ಉಪಾಧ್ಯಕ್ಷರಾಗಿ ಕೆ. ಗಿರಿಜಾ ಆಯ್ಕೆೆಯಾಗಿದ್ದಾರೆ.
ಜ.10ರಂದು ಸಂಘದ 13 ಜನ ನಿರ್ದೇಶಕರು ಆವಿರೋಧವಾಗಿ ಆಯ್ಕೆೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧಿಕಾರಿ ಶ್ರೀನಿವಾಸ್ ಘೋಷಿಸಿದರು.
ನಿರ್ದೇಶಕರುಗಳಾಗಿ ಡಿ. ವೆಂಕಟೇಶ, ನಾಮದೇವ, ಜಿ. ತಿಮ್ಮಣ್ಣ, ಮಲ್ಲಿಕಾರ್ಜುನ ನಾಡಗೌಡ, ಶೇಖ್ ಮಹ್ಮದ್ ಅಸ್ಲಾಾಂ, ನಂದಕಿಶೋರ, ಮಲ್ಲಯ್ಯ, ಗೀತಾರಾಣಿ, ಮಲ್ಲಣ್ಣ, ಸುರೇಶಕುಮಾರ, ನರಸಿಂಹಮೂರ್ತಿ ಆಯ್ಕೆೆಯಾಗಿದ್ದಾಾರೆಂದು ಘೋಷಿಸಲಾಯಿತು.
ಇಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಾಗರೆಡ್ಡಿಿ ಹಂಚಿನಾಳ ಮಾತನಾಡಿ, ಶೈಕ್ಷಣಿಕವಾಗಿ ಶಾಲೆಗಳ ಅಭಿವೃದ್ಧಿಿಪಡಿಸುವ ಜೊತೆಯಲ್ಲಿ ಸಂಘವನ್ನು ಜವಾಬ್ದಾಾರಿಯುತವಾಗಿ ನಡೆಸಿಕೊಂಡು ನಮ್ಮ ತಂಡ ಕೆಲಸ ಮಾಡುತ್ತಿಿದೆ ಎಂದು ತಿಳಿಸಿದರು.
ನನ್ನ ಮೇಲೆ ನಂಬಿಕೆ ಇಟ್ಟು ಅವಿರೋಧವಾಗಿ ಅಧ್ಯಕ್ಷರನ್ನಾಾಗಿ ಮಾಡಿದ ಆಡಳಿತ ಮಂಡಳಿಗೂ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ನಿರ್ದೇಶಕರು ಅಧ್ಯಕ್ಷರಾದ ನಾಗರೆಡ್ಡಿಿ ಹಂಚಿನಾಳ, ಉಪಾಧ್ಯಕ್ಷೆೆ ಗಿರಿಜಾ ಅವರನ್ನು ಸನ್ಮಾಾನಿಸಿ ಅಭಿನಂದಿಸಿದರು.
ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ ಮೂರನೇ ಬಾರಿ ಅಧ್ಯಕ್ಷರಾಗಿ ನಾಗರೆಡ್ಡಿ ಹಂಚಿನಾಳ

