ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ಗ್ರಾಾಮದ ಮಕ್ಕಳ ಶೈಕ್ಷಣಿಕ ಪ್ರಗತಿ, ಜನರ ಸೌಕರ್ಯಗಳಿಗೆ ಅಗತ್ಯ ಅನುದಾನ ಒದಗಿಸುವುದಾಗಿ ಶಾಸಕ ಬಸನಗೌಡ ದದ್ದಲ್ ಭರವಸೆ ನೀಡಿದರು.
ತಾಲೂಕಿನ ತುರುಕನಡೋಣಿ ಗ್ರಾಾಮದಲ್ಲಿ ಕೆಕೆಆರ್ಡಿಬಿ ಹಾಗೂ ನಬಾರ್ಡ್ ಯೋಜನೆಯಡಿ ನಿರ್ಮಿಸಲಾಗಿರುವ ನೂತನ ಸರ್ಕಾರಿ ಪ್ರೌೌಢಶಾಲೆ ಉದ್ಘಾಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಸರ್ಕಾರದ ಅನುದಾನದ ಸದ್ಬಳಕೆ ಮಾಡಿ ಸಾರ್ಥಕಗೊಳಿಸಬೇಕು. ಸುಸಜ್ಜಿಿತವಾದ ಕಟ್ಟಡ ನಿರ್ಮಿಸಲಾಗಿದೆ. ಶಿಕ್ಷಕರು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಸೃಷ್ಟಿಿಸಲು ಸಲಹೆ ಮಾಡಿದರು.
ಅಲ್ಲದೆ, ಸರ್ಕಾರಿ ಭೂಮಿಯಲ್ಲಿ ಮುಂಬರುವ ದಿನಗಳಲ್ಲಿ ಏಕಲವ್ಯ ವಸತಿ ಶಾಲೆ, ವಸತಿ ನಿಲಯ ಮತ್ತು ಪಿಯು ಕಾಲೇಜು ನಿರ್ಮಿಸಲು ಸರ್ಕಾರ ಹಾಗೂ ಕೆಕೆಆರ್ಡಿಬಿ ಮೂಲಕ ಅನುದಾನ ತಂದು ಮಾದರಿ ಗ್ರಾಾಮವಾಗಿಸಿ ಶೈಕ್ಷಣಿಕ ವಾತಾವರಣ ನಿರ್ಮಿಸುವುದಾಗಿ ಭರವಸೆ ನೀಡಿದರು.
ಮನವಿ ಆಲಿಕೆ, ಕೆರೆ ನಿರ್ಮಾಣದ ಭರವಸೆ :
ಇದಕ್ಕೂ ಮುನ್ನ ಗ್ರಾಾಮದಲ್ಲಿ ಕೆಕೆಆರ್ಡಿಬಿ ಅಡಿ ಸಿಸಿ ರಸ್ತೆೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಬಸನಗೌಡ ದದ್ದಲ್ ಅವರಿಗೆ ಗ್ರಾಾಮಸ್ಥರು ಕುಡಿಯುವ ನೀರು ಸಮಸ್ಯೆೆ ಬೇಸಿಗೆಗೆ ಮುನ್ನವೇ ಪ್ರತಿ ವರ್ಷ ಬರುತ್ತಿಿದೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಪಂಚಾಯಿತಿ ಅಧಿಕಾರಿಗಳು ತಮ್ಮ ಸಮಸ್ಯೆೆಗೆ ಸ್ಪಂದಿಸಲು ಸೂಚಿಸಲು ಕೋರಿದರು.
ಆಗ ಮಾತನಾಡಿದ ಶಾಸಕರು ಈಗಾಗಲೇ ಸರ್ಕಾರಿ ಶಾಲೆ ನಿರ್ಮಿಸಿದ ಸರ್ಕಾರಿ ಭೂಮಿಯಲ್ಲಿಯೇ ಒಂದು ಕೆರೆ ನಿರ್ಮಿಸಲು ಕ್ರಿಿಯಾ ಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದು ನೀರಿನ ಸಮಸ್ಯೆೆ ಶಾಶ್ವತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಎಸ್ಸಿ ಬಡಾವಣೆಯಲ್ಲಿನ ಚರ್ಚ್ಗೆ ಸುಸಜ್ಜಿಿತ ತಡೆಗೋಡೆ ನಿರ್ಮಿಸಿ ಕೊಡಬೇಕು, ಸಿಸಿ ರಸ್ತೆೆ, ಚರಂಡಿ ವ್ಯವಸ್ಥೆೆ ಮಾಡಿಕೊಡಲು ಮಾಡಿದ ಮನವಿಗೆ ಶಾಸಕರು ಸ್ಪಂದಿಸಿದರು ಸ್ಥಳದಲ್ಲಿದ್ದ ಪಿಡಿಓ, ತಾಂತ್ರಿಿಕ ಅಧಿಕಾರಿಗಳಿಗೆ ಪರಿಶೀಲಿಸಲು ಸೂಚಿಸಿದರು.
ಶಾಸಕರಿಗೆ ಗ್ರಾಾಮಸ್ಥರ ಪರವಾಗಿ ಮುಖಂಡರು ಸನ್ಮಾಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ ತಲಮಾರಿ, ಗ್ರಾಾಪಂ ಅಧ್ಯಕ್ಷೆೆ ಶಶಿಕಲಾ ಯೋಸ್ೇ, ಸದಸ್ಯರಾದ ಯಲ್ಲಪ್ಪಗೌಡ, ಮಲ್ಲಿಕಾರ್ಜುನ ಹೂಗಾರ, ಮಹೆಬೂಬ್, ಗೋವಿಂದಮ್ಮ ನರಸಿಂಹ ನಾಯಕ, ಬಿಇಓ ಡಾ.ಈರಣ್ಣ ಕೋಸಗಿ, ಪಿಡಿಓ ಮಹಾಂತಮ್ಮಘಿ, ಮುಖ್ಯ ಶಿಕ್ಷಕ ಜಗನ್ನಾಾಥ ಕುಲಕರ್ಣಿ , ಎಸ್ಡಿಎಂಸಿ ಅಧ್ಯಕ್ಷ ನಾಗರಾಜಗೌಡ, ಗಿಲ್ಲೆೆಸೂಗೂರು ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ನಾಗೇಂದ್ರಪ್ಪ ಮಟಮಾರಿ, ಮುಖಂಡರಾದ ಚನ್ನವೀರಪ್ಪಗೌಡ ಮಾಲಿಪಾಟೀಲ, ಜನಾರ್ಧನರೆಡ್ಡಿಿ ಹಂಚಿನಾಳ, ಶಿವಪ್ಪ ನಾಯಕ, ಪಿ.ಮಂಜುನಾಥ ರೆಡ್ಡಿಿಘಿ, ಉಮೇಶ ಪಾಟೀಲ, ಹನುಮಂತಪ್ಪ ವಕೀಲ, ಹನುಮಂತ ಮಡಿವಾಳ, ಈರಣ್ಣ ಮಡಿವಾಳ, ಶಶಿಕಲಾ ಭೀಮರಾಯ, ನರಸಿಂಹಲು ಅಲ್ಕೂರು,ತಿಮ್ಮಪ್ಪ ಅಲ್ಕೂರು, ರಮೇಶ ರೋಸ್ಲಿಿ ಸೇರಿದಂತೆ ಗ್ರಾಾಮಸ್ಥರು, ವಿದ್ಯಾಾರ್ಥಿಗಳಿದ್ದರು.
ತುರುಕನಡೋಣಿಯಲ್ಲಿ ಸರ್ಕಾರಿ ಪ್ರೌೌಢಶಾಲೆ ಉದ್ಘಾಟನೆ – ಕುಡಿಯುವ ನೀರಿಗಾಗಿ ಕೆರೆ ನಿರ್ಮಾಣದ ಭರವಸೆ ಶೈಕ್ಷಣಿಕ ಪ್ರಗತಿ, ಸೌಕರ್ಯಗಳಿಗೆ ಅನುದಾನ ಒದಗಿಸುವೆ-ದದ್ದಲ್

