ಸುದ್ದಿಮೂಲ ವಾರ್ತೆ ಭಾಲ್ಕಿ, ಜ.17:
ಶುಕ್ರವಾರ ರಾತ್ರಿಿ ನಿಧನರಾದ ಮಾಜಿ ಸಚಿವ, ಸ್ವಾಾತಂತ್ರ್ಯ ಹೋರಾಟಗಾರ, ಭೀಮಣ್ಣ ಖಂಡ್ರೆೆ ಅವರ ಕರ್ಮಭೂಮಿ ಭಾಲ್ಕಿಿಯಲ್ಲಿ ಶನಿವಾರ ಅಕ್ಷರಶಃ ನೀರವ ಮೌನ ಆವರಿಸಿತ್ತು.
ಜಿಲ್ಲಾ ರಾಜಕಾರಣದಲ್ಲಿ ಕಳೆದ ಐದಾರು ದಶಕಗಳಿಂದ ಹಿಡಿತ ಹೊಂದಿದ್ದ ಭೀಮಣ್ಣ ಖಂಡ್ರೆೆ ನಿಧನ ಹಿನ್ನಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲಾಗಿತ್ತು.
ಸ್ವಕ್ಷೇತ್ರ ಭಾಲ್ಕಿಿಯ ಖಂಡ್ರೆೆ ನಿವಾಸದಲ್ಲಿ ಭೀಮಣ್ಣ ಖಂಡ್ರೆೆಯವರ ಪಾರ್ಥಿವ ಶರೀರ ಇರಿಸಲಾಗಿತ್ತು. ಶುಕ್ರವಾರ ರಾತ್ರಿಿಯಿಂದಲೇ ಜಿಲ್ಲೆ, ರಾಜ್ಯ ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆೆಯ ಅಭಿಮಾನಿಗಳು ತಂಡೋಪತಂಡವಾಗಿ ಶನಿವಾರ ಇಡೀ ದಿನ ಬಂದು ಖಂಡ್ರೆೆ ಅಂತಿಮ ದರ್ಶನ ಪಡೆದರು.
ಭಾಲ್ಕಿಿ ಕ್ಷೇತ್ರ ಭೀಮಣ್ಣ ಖಂಡ್ರೆೆಯವರ ರಾಜಕೀಯ ಕರ್ಮಭೂಮಿಯಾಗಿದ್ದು, ಕಳೆದ ಹಲವಾರು ದಶಕಗಳಿಂದ ಭಾಲ್ಕಿಿ ಕ್ಷೇತ್ರದೊಂದಿಗೆ ಹೊಂದಿರುವ ನಂಟು ಹಿನ್ನಲೆ ಶನಿವಾರ ಸ್ವಯಂಘೋಷಿತವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿಿ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.
ಬೆಳಗ್ಗೆೆ ಗಾಂಧಿ ಗಂಜ್ನ ಖಂಡ್ರೆೆ ನಿವಾಸದಲ್ಲಿ ಭಾಲ್ಕಿಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕುಟುಂಬದ ಸದಸ್ಯರು ಪಾರ್ಥಿವ ಶರೀರಕ್ಕೆೆ ಮಹಾರತಿ ಬೆಳಗಿದರು.
ಪವಿತ್ರ ಆತ್ಮವಿದ್ದ ದೇಹ ಶುದ್ಧಿಿಗಾಗಿ ಜಳಕ ಮಾಡಿಸಿ, ಲಿಂಗಪೂಜೆ ಮಾಡಿ, ಭಸ್ಮಧಾರಣೆ, ರುದ್ರಾಾಕ್ಷಿ ಮಾಲೆ ತೊಡಿಸಿ, ಧೂಪ, ದೀಪಾರತಿ, ಪಾದಪೂಜೆ ಮಾಡಿಸಿದರು. ಪುತ್ರರಾದ ಈಶ್ವರ ಬಿ ಖಂಡ್ರೆೆ, ಅಮರ ಕುಮಾರ್ ಖಂಡ್ರೆೆ, ಪುತ್ರಿಿಯರಾದ ಶಕುಂತಲಾ, ನಾಗಮ್ಮ, ಡಾ. ಆಶಾ, ಡಾ. ಶೋಭಾ, ಭಾರತಿ ಹಾಗೂ ಮೊಮ್ಮಕ್ಕಳಾದ ಡಾ. ಗುರುಪ್ರಸಾದ್ ಖಂಡ್ರೆೆ, ಸಂಸದ ಸಾಗರ್ ಖಂಡ್ರೆೆ ಸೇರಿದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ, ಆರತಿ ಮಾಡಿದರು. ನಂತರ ಸಾರ್ವಜನಿಕರ ದರ್ಶನಕ್ಕೆೆ ಅವಕಾಶ ಮಾಡಿಕೊಡಲಾಯಿತು.
ಶತಾಯುಷಿ ಖಂಡ್ರೆ ಹುಟ್ಟೂರಲ್ಲಿ ನೀರವ ಮೌನ

