ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ರಾಜ್ಯದಲ್ಲಿರುವ ಮಹಿಳಾ ನೌಕರರ ಸಮಸ್ಯೆೆಗಳ ಪರಿಹಾರ, ಬೇಡಿಕೆಗಳ ಈಡೇರಿಸಿಕೊಳ್ಳಲು ಸಂಘ ರಚಿಸಿದ್ದು ಈಗಿರುವ ಸರ್ಕಾರಿ ನೌಕರರ ಸಂಘಕ್ಕೆೆ ಪರ್ಯಾಯವಾಗಿ ಅಲ್ಲ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆೆ ರೋಶಿನಿಗೌಡ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಸರ್ಕಾರಿ ನೌಕರರ ಸಂಘದ ಅನುಮತಿಯೊಂದಿಗೆ ಪ್ರತ್ಯೇಕವಾಗಿ ಮಹಿಳಾ ಸಂಘ ರಚಿಸಿಕೊಂಡಿದ್ದೇವೆ. ಅಲ್ಲದೆ, ಅಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲು ಕೇಳಿದ್ದೆೆವು ಬೈ ಲಾದಲ್ಲಿ ಇಲ್ಲದ ಕಾರಣ ಕೊಡಲಾಗದು ಎಂದಿದ್ದಾಾರೆ. ಹೀಗಾಗಿ, ರಾಜ್ಯದಲ್ಲಿರುವ ಸುಮಾರು 2 ಲ 50 ಸಾವಿರ ಮಹಿಳೆಯರ ಧ್ವನಿಯಾಗಿ ಸಂಘ ಕೆಲಸ ಮಾಡಲು ಮುಂದೆ ಬಂದಿದ್ದೇವೆ. ಸಂಘ ಒಡೆಯುವ ಮನಸಿನಿಂದ ಅಲ್ಲವೇ ಅಲ್ಲಘಿ. ಕೆಲವರಿಗೆ ಅನ್ನಿಿಸಿರಬಹುದು ಆದರೆ ನಮ್ಮ ಆಲೋಚನೆಯಲ್ಲಿಲ್ಲ ಎಲ್ಲ ಮಹಿಳಾ ನೌಕರರ ನಿರ್ಧಾರದಂತೆಯೇ ನಡೆದುಕೊಳ್ಳಲಾಗುವುದು ಎಂದರು.
ವಿವಿಧ ಇಲಾಖೆಗಳಲ್ಲಿ ಮಹಿಳಾ ನೌಕರರಿಗೆ ಆಗುತ್ತಿಿರುವ ಸಮಸ್ಯೆೆಗಳು, ಕಿರುಕುಳ, ಹಲ್ಲೆೆಘಿ, ದೌರ್ಜನ್ಯದಂತ ಘಟನೆಗಳಾದಾಗ ಖಂಡಿಸಿದ್ದೇವೆ, ಅಂತವರಿಗೆ ಬೆಂಬಲವಾಗಿ ನಿಂತಿದ್ದೇವೆ. ಕಳೆದ ಎರಡು ವರ್ಷಗಳಿಂದ ಪ್ರತ್ಯೇಕ ಸಂಘದ ಕಚೇರಿ, ಋತುಚಕ್ರ ವೇತನ ಸಹಿತ ರಜೆ ಮಂಜೂರು, ಸೆಪ್ಟೆೆಂಬರ್ 13ರಂದು ಮಹಿಳಾ ಸರ್ಕಾರಿ ನೌಕರರ ದಿನ ಘೋಷಣೆ ಮಾಡಿಸಿದ್ದೇವೆ.
ಶೇ.50ಕ್ಕಿಿಂತ ಹೆಚ್ಚಿಿನ ಮಹಿಳಾ ನೌಕರರನ್ನು ಸಂಘದ ಸದಸ್ಯರನ್ನಾಾಗಿ ನೋಂದಣಿ ಅಭಿಯಾನ ಈಗ ಆರಂಭಿಸಲಾಗಿದೆ. ರಾಯಚೂರು ಜಿಲ್ಲೆೆಯಲ್ಲಿ ಸುಮಾರು ಒಂದು ಸಾವಿರ, ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಸದಸ್ಯತ್ವ ಮಾಡುವ ಉದ್ದೇಶದೊಂದಿಗೆ ಸಂಚಾರ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಂಬರುವ ದಿನಗಳಲ್ಲಿ 8ನೇ ವೇತನ ಆಯೋಗ ರಚನೆ, ಮಾತೃತ್ವ ರಜೆ ವರ್ಷಕ್ಕೆೆ ವಿಸ್ತರಿಸಲು, ಗರ್ಭಿಣಿ ನೌಕರರಿಗೆ ಮಾಸಿಕ ಒಂದು ದಿನ ವೇತನ ಸಹಿತ ರಜೆ, ವಿದೇಶ ಪ್ರವಾಸಕ್ಕೆೆ ಅರ್ಜಿ ಸಲ್ಲಿಸಿದ 15 ದಿನದಲ್ಲಿ ಮಂಜೂರಾತಿಗೆ ವ್ಯವಸ್ಥೆೆ ಅಥವಾ ಸ್ವಯಂ ಚಾಲಿತ ಮಂಜೂರಾತಿ ಆದೇಶ, ಹಬ್ಬದ ಮುಂಗಡ 50 ಸಾವಿರಕ್ಕೆೆ ಹೆಚ್ಚಿಿಸಲು ಸರ್ಕಾರದ ಮುಂದೆ ಬೇಡಿಕೆ ಇರಿಸಲಾಗಿದೆ. ಈಡೇರಿಸುವ ಭರವಸೆಯೂ ಸಿಕ್ಕಿಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಸಂಘದ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ, ಜಿಲ್ಲಾಾಧ್ಯಕ್ಷೆೆ ವಿಜಯಲಕ್ಷ್ಮಿಿಘಿ, ಎಂ.ಆಶಾರಾಣಿ, ವಾಣಿ, ಅಮರಮ್ಮ ಪಾಟೀಲ ಇತರರಿದ್ದರು.

