ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.17:
ಅಸಾಧರಣ ಪ್ರತಿಭೆಯ ತೀಕ್ಷ್ಮ ಮತಿಯ ಕಾಯಕಯೋಗಿ ಶತಾಯುಷಿ ಭೀಮಣ್ಣ ಖಂಡ್ರೆೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ, ಹೈದರಾಬಾದ್ – ಕರ್ನಾಟಕ ವಿಮೋಚನೆ ಮತ್ತು ಕರ್ನಾಟಕ ಏಕೀಕ ರಣಕ್ಕಾಾಗಿ ಹೋರಾಡಿ ನಾಡು – ನುಡಿ, ಸಮಾಜ – ಸಂಘಟನೆಗಾಗಿ ಅವಿರತ ಶ್ರಮಿಸಿದ್ದು, ಅವರ ನಿಧನದಿಂದಾಗಿ ಸಮಾಜಕ್ಕೆೆ ಮತ್ತು ಶ್ರೀಮಠಕ್ಕೆೆ ದೊಡ್ಡ ನಷ್ಟವಾಗಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಾಮಿಗಳು ತಿಳಿಸಿದ್ದಾಾರೆ.
ಸಮಸ್ತ ವೀರಶೈವ ಲಿಂಗಾಯಿತ ಸಮಾಜದ ಧ್ವನಿಯಾಗಿ, ಸಮಾಜದ ಸಂಘಟನೆಗಾಗಿ, ಸಮಾ ಜದ ಸರ್ವಾಂಗೀಣ ಅಭಿವೃದ್ಧಿಿಗಾಗಿ ಅತ್ಯಂತ ಬದ್ಧತೆಯಿಂದ, ಶಿಸ್ತುಬದ್ಧವಾದ ಯೋಜನೆಗಳಿಂದ ಅವಿರತ ಹೋರಾಡುತ್ತಿಿದ್ದ ಭೀಮಣ್ಣ ಖಂಡ್ರೆೆ ಅವರ ನಿಧನ ಆಘಾತವನ್ನೇ ಮೂಡಿಸಿದೆ. ಮೃತರ ಆತ್ಮಕ್ಕೆೆ ಬಸವಾದಿ ಶರಣರು ಚಿರಶಾಂತಿಯನ್ನು ಕರುಣಿಸಲೆಂದು ಶೋಕ ವ್ಯಕ್ತಪಡಿಸಿದ್ದಾಾರೆ.

