ಸುದ್ದಿಮೂಲ ವಾರ್ತೆ ಬಳಗಾನೂರು, ಜ.17:
ಪಟ್ಟಣದಲ್ಲಿ ಕೋತಿಗಳ ಉಪಟಳ ಹೆಚ್ಚಾಾಗು ತ್ತಿಿದ್ದು ಪಟ್ಟಣದ 2ನೇ ವಾರ್ಡಿನ ಹುಲಿಗೆಮ್ಮ ಭಜಂತ್ರಿಿ ಎಂಬುವರ ಮನೆಯೋಳಗೆ ನುಗ್ಗಿಿ ಟಿವಿ, ಕನ್ನಡಿ, ಸೇಟ್ಆ್ಬಾಕ್ಸ್ ಸೇರಿ ಇತರೆ ವಸ್ತುಗಳನ್ನು ಕಿತ್ತಿಿ ಎಸೆದು ಹಾನಿಗೀಡು ಮಾಡಿವೆ.
ಕೋತಿ ಗಳು ಏಕಾಏಕಿ ಮನೆಗಳ ಒಳಗೆ ನುಗ್ಗಿಿ ಮನುಷ್ಯರ ಮೇಲೆ ಮಕ್ಕಳ ಮೇಲೆ ದಾಳಿ ಮಾಡುತ್ತಿಿರುವುದು ಭಯ ಹುಟ್ಟಿಿಸಿದೆ. ಟಾಟಾ ಏಸಿ ಸೈಕಲ್ ಮೋಟಾರು ಸೇರಿ ಇತರೆ ವಾಹನಗಳು, ಕನ್ನಡಿ, ಮುಂದೆ ಅಳವಡಿಸಿರುವ ಗಾಜುಗಳ ಮೇಲೆದಾಳಿ ಮಾಡಿ ಒಡೆದು ಹಾಕಿವೆ. ಅದಲ್ಲದೆ ಮನೆಯೊಳಗೆ ನುಗ್ಗಿಿ ಮೊಬೈಲ್ ಕಸಿದುಕೊಂಡು ಹೋದ ಘಟನೆಯೂ ಜರುಗಿದೆ. ತಡೆಯಲು ಯತ್ನಿಿಸಿದವರ ಮೇಲೆ ದಾಳಿ ಮಾಡಿ ಭಯ ಬೀಳಿಸುತ್ತಿಿವೆ.
ಕೋತಿಗಳಿಂದ ರಕ್ಷಣೆಗಾಗಿ ಈಕುರಿತು ಪಪಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷಿಸುತಿದ್ದಾಾರೆ ಎಂದು ಸಾರ್ವಜನಿಕರು ದೂರಿದ್ದಾಾರೆ. ಪಪಂಅಧಿಕಾರಿಗಳು ಎಚ್ಚೆೆತ್ತುಕೊಂಡು ಶೀಘ್ರದಲ್ಲಿ ಕೋತಿಗಳನ್ನು ಹಿಡಿಸಲು ಮುಂದಾಗದಿದ್ದರೆ ಪಪಂಗೆ ಮುತ್ತಿಿಗೆ ಹಾಕುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾಾರೆ.
ಭಯಭೀತರಾದ ವಿದ್ಯಾಾರ್ಥಿಗಳು: ಸಾಯಂಕಾಲ ಶಾಲೆ ಬಿಟ್ಟ ಸಮಯದಲ್ಲಿ ಸಾಯಂಕಾಲ ಕೋತಿಯ ಉಪಟಳ ದಾಳಿಯನ್ನು ಕಣ್ಣಾಾರೆ ನೋಡಿದ ಶಾಲಾ ವಿದ್ಯಾಾರ್ಥಿಗಳು, ಮಹಿಳೆಯರು ಭಯಭೀತರಾಗಿದ್ದಾಾರೆ. ಸ್ಥಳಕ್ಕೆೆ ಭೇಟಿ ನೀಡಿದ ಪೊಲೀಸರು ಮನೆಯವರಿಗೆ ಧೈರ್ಯ ಹೇಳಿ, ನಿಯಂತ್ರಣಕ್ಕಾಾಗಿ ಅಧಿಕಾರಿಗಳ ಗಮನಕ್ಕೆೆ ತರುವುದಾಗಿ ತಿಳಿಸಿದ್ದಾಾರೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆೆತ್ತುಕೊಂಡು ಮುಂದಿನ ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಾಯಿಸಿದ್ದಾಾರೆ.
ಕೋತಿಗಳ ಹಾವಳಿ : ಭಯದಲ್ಲಿ ಜನತೆ

