ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ಮಲದಕಲ್ ಗೆಳೆಯರ ಬಳಗ ಜ್ಞಾನವೃಕ್ಷ ಟ್ರಸ್ಟ್ ಸಹಯೋಗದಲ್ಲಿ ಮಲದಕಲ್ನ ಆರಾಧ್ಯ ದೈವ ಶ್ರೀ ಹುಡೇದ ಆಂಜನೇಯ ಸ್ವಾಾಮಿ ಜಾತ್ರೋೋತ್ಸವದ ಅಂಗವಾಗಿ ಜ.24ರಂದು ದೇವದುರ್ಗದಲ್ಲಿ 4ನೇ ವರ್ಷದ ರಸಪ್ರಶ್ನೆೆ ಸ್ಪರ್ಧೆ ಹಮ್ಮಿಿಕೊಳ್ಳಲಾಗಿದೆ ಎಂದು ಬಳಗದ ಕಾರ್ಯದರ್ಶಿ ನಾಗರಾಜ ಪೂಜಾರಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ದೇವದುರ್ಗ ತಾಲೂಕಿನ ಗ್ರಾಾಮೀಣ ಭಾಗದ ವಿದ್ಯಾಾವಂತ ಯುವಕರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಕಳೆದ ನಾಲ್ಕು ವರ್ಷದಿಂದಲೂ ಸಹಾಯಕ ಪ್ರಾಾಧ್ಯಾಾಪಕ ಡಾ.ಮಾರುತಿ ಕುಮಾರ ಮಲದಕಲ್ ನೇತೃತ್ವದಲ್ಲಿ ಸ್ಪರ್ಧೆ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿಿದೆ ಎಂದರು.
ಈ ಬಾರಿಯೂ ದೇವದುರ್ಗದ ಖೇಣೆದ್ ಕಲ್ಯಾಾಣ ಮಂಟಪದಲ್ಲಿ ರಸಪ್ರಶ್ನೆೆ ಸ್ಪರ್ಧೆ ಆಯೋಜಿಸಿದ್ದು ಮಲದಕಲ್ನ ಶ್ರೀ ನಿಜಾನಂದ ಯೋಗಾಶ್ರಮದ ಶ್ರೀಗುರುಬಸವ ರಾಜಗುರುಗಳು ಸಾನಿಧ್ಯ ವಹಿಸಲಿದ್ದಾಾರೆ. ಈಗಾಗಲೇ 100ಕ್ಕೂ ಅಧಿಕ ತಂಡಗಳು ನೋಂದಾಯಿಸಿಕೊಂಡಿದ್ದು ಜ.22ರವರೆಗೂ 200 ರೂ ಶುಲ್ಕದೊಂದಿಗೆ ನೋಂದಣಿಗೆ ಅವಕಾಶ ನೀಡಲಾಗಿದೆ, ವಿಕಲಚೇತನರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ ಎಂದರು.
ಎರಡು ಹಂತದ ಸ್ಪರ್ಧೆ ಇರಲಿದ್ದು ಮೊದಲು ಬಹುಆಯ್ಕೆೆ ವಸ್ತುನಿಷ್ಠ 100 ಪ್ರಶ್ನೆೆಗಳಿಗೆ ಉತ್ತರಿಸಿ ಅತಿ ಹೆಚ್ಚು ಅಂಕ ಪಡೆದ ಮೊದಲ 5 ತಂಡಗಳಿಗೆ ವೌಖಿಕ ರಸಪ್ರಶ್ನೆೆ ಸ್ಪರ್ಧೆ ಇರಲಿದೆ. ವಿಜೇತರಾದ ಮೊದಲ ತಂಡಕ್ಕೆೆ 15,001 ರೂ. ನಗದು, ದ್ವಿಿತೀಯ ಸ್ಥಾಾನ ಪಡೆದ ತಂಡಕ್ಕೆೆ 11,001 ಹಾಗೂ ತೃತೀಯ ಸ್ಥಾಾನ ಪಡೆದ ತಂಡಕ್ಕೆೆ 7,001 ರೂ ಬಹುಮಾನ ನೀಡಲಾಗುವುದು. ಹೆಚ್ಚಿಿನ ಮಾಹಿತಿಗಾಗಿ 8105049051/9632865877/9739952143/9845366018ಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಉಪಾಧ್ಯಕ್ಷ ಟೀಕಪ್ಪ ಚವ್ಹಾಾಣ್, ಸದಸ್ಯ ಜಾನ್ಸನ್ ಇದ್ದರು.

