ಸುದ್ದಿಮೂಲ ವಾರ್ತೆ ಹೊಸಪೇಟೆ, ಜ.18:
ಜೀವ ಅಮೂಲ್ಯವಾದುದು, ರಸ್ತೆೆ ನಿಯಮಗಳನ್ನು ಪಾಲಿಸಿ ಸು ರಕ್ಷಿತವಾಗಿರಿ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಾಯಾಧೀಶರಾದ ಡಿ.ಪಿ.ಕು ಮಾರ ಸ್ವಾಾಮಿ ಹೇಳಿದರು.
ನಗರದ ವಡಕಾರಾಯ ದೇವಸ್ಥಾಾನ ಹತ್ತಿಿರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ರಸ್ತೆೆ ಸುರಕ್ಷತಾ ಸಮಿತಿ ಹಾಗೂ ಪ್ರಾಾದೇಶಿಕ ಸಾರಿಗೆ ಇಲಾಖೆಯ ಜಂಟಿ ಸಹಯೋಗದಲ್ಲಿ 37ನೇ ರಸ್ತೆೆ ಸುರಕ್ಷತಾ ಸಪ್ತಾಾಹದ ಅಂಗವಾಗಿ ಏರ್ಪಡಿಸಿದ್ದ ಬೈಕ್ ರ್ಯಾಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು ದ್ವಿಿಚಕ್ರ ವಾಹನ ಸವಾರರು ಕಡ್ಡಾಾಯವಾಗಿ ಹೆಲ್ಮೆೆಟ್ ಧರಿಸಬೇಕು. ರಸ್ತೆೆ ಅಪಘಾತಗ ಳು ಸಂಭವಿಸಿದಾಗ ಕೇವಲ ವ್ಯಕ್ತಿಿಯಷ್ಟೇ ಅಲ್ಲ, ಇಡೀ ಕುಟುಂಬವೇ ಸಂಕಷ್ಟ ಕ್ಕೆೆ ಸಿಲುಕಿ ಬೀದಿಗೆ ಬರುವ ಪರಿಸ್ಥಿಿತಿ ನಿರ್ಮಾಣವಾಗುತ್ತದೆ.ಆದ್ದರಿಂದ ಪ್ರತಿಯೊಬ್ಬರು ತಮಗಾಗಿ ಅಲ್ಲದ್ದಿದ್ದರೂ ತಮ್ಮ ಕುಟುಂಬಕ್ಕಾಾಗಿಯಾದರೂ ಹೆಲ್ಮೆೆ ಟ್ ಧರಿಸಬೇಕು. ಸವಾರರು ಕೇವಲ ದಂಡಕ್ಕೆೆ ಹೆದರಿ ಸಂಚಾರಿ ನಿಯಮ ಪಾಲಿಸುವುದಕ್ಕಿಿಂತ, ನಮ್ಮ ಜೀವದ ರಕ್ಷಣೆಗಾಗಿ, ಸ್ವಯಂಪ್ರೇೇರಿತರಾಗಿ ರಸ್ತೆೆ ಸಂಚಾರಿ ನಿಯಮ ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಎಸ್ಪಿ ಮಂಜುನಾಥ, , ಪ್ರಧಾನ ಸಿವಿಲ್ ನ್ಯಾಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ನಾಗಲಾಪುರ ಸೇರಿದಂತೆ ಮತ್ತಿಿತರರು ಇದ್ದರು.
ಜೀವ ಅಮೂಲ್ಯವಾದುದು, ರಸ್ತೆ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ: ನ್ಯಾ.ಡಿ.ಪಿ.ಕುಮಾರ ಸ್ವಾಮಿ

