ಸುದ್ದಿಮೂಲ ವಾರ್ತೆ ಕಲಬುರಗಿ, ಜ.18:
ಅಜಲಪೂರ ತಾಲೂಕಿನ ಚಿಣಮಗೇರಾ ಗ್ರಾಾಮದಲ್ಲಿರುವ ಕೆ.ಪಿ.ಆರ್.ಶುಗರ್ಸ್ ಕಾರ್ಖಾನೆಗೆ ಜಿಲ್ಲಾಧಿಕಾರಿ ಬಿ.ೌಜಿಯಾ ತರನ್ನುಮ್ ದಿಢೀರ್ಭೇಟಿ ನೀಡಿ ಕಬ್ಬು ತೂಕ ಕಾರ್ಯ ಪರಿಶೀಲಿಸಿದರು.
ಕಬ್ಬು ತೂಕ ಮಾಡುವ ಯಂತ್ರ ಕಾರ್ಯ ವಿಕ್ಷಿಸಿದಲ್ಲದೆ ಕಾರ್ಖಾನೆಯ ವಿವಿಧ ವಿಭಾಗಕ್ಕೆೆ ಭೇಟಿ ನೀಡಿದ ಅವರು ಕಬ್ಬು ಇಳುವರಿ ಕುರಿತು ಕಾರ್ಖಾನೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಬ್ಬು ಮಾರಾಟ ಮಾಡಲು ಬರುವ ರೈತರಿಗೆ ಕುಡಿಯುವ ನೀರು, ಶೌಚಾಲಯ, ರಾತ್ರಿಿ ಇರಲು ಅಗತ್ಯ ಮೂಲಸೌಕರ್ಯ ಕಲ್ಪಿಿಸಬೇಕೆಂದು ಸೂಚಿಸಿದರು.
ಇನ್ನು ಸಕಾಲದಲ್ಲಿಯೆ ರೈತರಿಗೆ ಕಬ್ಬಿಿನ ಹಣ ಪಾವತಿ ಮಾಡಬೇಕು. ಅನಗತ್ಯ ವಿಳಂಬ ಮಾಡಬಾರದು. ಹಣ ಪಾವತಿಯ ಪ್ರತಿ ವ್ಯವಹಾರವು ಪಾರದರ್ಶಕವಾಗಿರಬೇಕು ಮತ್ತು ಪ್ರತಿ ಹಂತದ ಮಾಹಿತಿ ರೈತರಿಗೆ ಒದಗಿಸಬೇಕು. ರೈತರ ಸಮಕ್ಷಮ ತೂಕ ಮಾಡಬೇಕು ಎಂಬಿತ್ಯಾಾದಿ ಕಾರ್ಖಾನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಉಪಸ್ಥಿಿತರಿದ್ದ ರೈತರೊಂದಿಗೆ ಸಂವಾದಿಸಿ ಅವರ ಸಮಸ್ಯೆೆ ಆಲಿಸಿದರು.
ತಹಶೀಲ್ದಾಾರರ ಸಂಜೀವಕುಮಾರ ದಾರ್ಸ ಸೇರಿದಂತೆ ಕಾರ್ಖಾನೆಯ ಉಪಾಧ್ಯಕ್ಷರು, ಇತರೆ ಅಧಿಕಾರಿಗಳು, ರೈತ ಮುಖಂಡರು ಇದ್ದರು.
ಕೆಪಿಆರ್ ಶುಗರ್ಸ್ ಕಾರ್ಖಾನೆಗೆ ಡಿಸಿ ದಿಢೀರ್ ಭೇಟಿ

